Saturday, April 19, 2025
Google search engine

HomeUncategorizedರಾಷ್ಟ್ರೀಯಅದಾನಿ ಹಗರಣದ ಚರ್ಚೆಗೆ ‘ಇಂಡಿಯಾ’ ಮೈತ್ರಿಕೂಟದ ಸಂಸದರು ಪಟ್ಟು; ಉಭಯ ಸದನಗಳ ಕಲಾಪ ನಾಳೆಗೆ ಮುಂದೂಡಿಕೆ

ಅದಾನಿ ಹಗರಣದ ಚರ್ಚೆಗೆ ‘ಇಂಡಿಯಾ’ ಮೈತ್ರಿಕೂಟದ ಸಂಸದರು ಪಟ್ಟು; ಉಭಯ ಸದನಗಳ ಕಲಾಪ ನಾಳೆಗೆ ಮುಂದೂಡಿಕೆ

ನವದೆಹಲಿ: ಉದ್ಯಮಿ ಗೌತಮ್‌ ಅದಾನಿ ಲಂಚ ಹಗರಣ, ಮಣಿಪುರ ಹಾಗೂ ಸಂಭಲ್ ಹಿಂಸಾಚಾರ ಪ್ರಕರಣಗಳನ್ನು ಕೂಡಲೇ ಚರ್ಚೆಗೆ ಕೈಗೆತ್ತಿಕೊಳ್ಳಬೇಕೆಂದು ‘ಇಂಡಿಯಾ’ ಮೈತ್ರಿಕೂಟದ ಸಂಸದರು ಪಟ್ಟು ಹಿಡಿದ ಕಾರಣ ಸಂಸತ್ತಿನ ಉಭಯ ಕಲಾಪಗಳನ್ನು ಒಂದು ದಿನದ ಮಟ್ಟಿಗೆ ಮುಂದೂಡಲಾಗಿದೆ.

ಲೋಕಸಭೆ ಕಲಾಪವನ್ನು ನಾಳೆ (ಮಂಗಳವಾರ) ಬೆಳಿಗ್ಗೆ 11 ಗಂಟೆವರೆಗೆ ಮುಂದೂಡಲಾಗಿದೆ. ಇತ್ತ ರಾಜ್ಯಸಭೆ ಕಲಾಪವನ್ನು ನಾಳೆ ಬೆಳಿಗ್ಗೆ 12 ಗಂಟೆವರೆಗೆ ಮುಂದೂಡಲ್ಪಟ್ಟಿದೆ.

ಸಂಭಲ್ ಹಿಂಸಾಚಾರ ಮತ್ತು ಅಜ್ಮೀರ್ ದರ್ಗಾ ಕುರಿತಾದ ಚರ್ಚೆಗೆ ಅವಕಾಶ ಕೋರಿ ಕಾಂಗ್ರೆಸ್ ಸಂಸದ ಇಮ್ರಾನ್ ಪ್ರತಾಪ್ ಘರ್ಹಿ ಸಲ್ಲಿಸಿದ್ದ ಅರ್ಜಿ ರಾಜ್ಯಸಭೆಯಲ್ಲಿ ತಿರಸ್ಕಾರಗೊಂಡಿದೆ.

ಇತ್ತ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಮತ್ತು ಚಿನ್ಮಯಿ ಕೃಷ್ಣದಾಸ್ ಸೇರಿದಂತೆ ಮೂವರು ಇಸ್ಕಾನ್ ಸನ್ಯಾಸಿಗಳ ಬಂಧನದ ಬಗ್ಗೆ ಚರ್ಚಿಸಲು ಎಎಪಿ ಸಂಸದ ರಾಘವ್ ಚಡ್ಡಾ ರಾಜ್ಯಸಭೆಯಲ್ಲಿ ಮನವಿ ಮಾಡಿದ್ದರು.

RELATED ARTICLES
- Advertisment -
Google search engine

Most Popular