Tuesday, April 15, 2025
Google search engine

Homeಅಪರಾಧಎಂಆರ್‌ಪಿಎಲ್: 120 ಅಡಿ ಎತ್ತರದಿಂದ ಬಿದ್ದು ಕಾರ್ಮಿಕ ಸಾವು

ಎಂಆರ್‌ಪಿಎಲ್: 120 ಅಡಿ ಎತ್ತರದಿಂದ ಬಿದ್ದು ಕಾರ್ಮಿಕ ಸಾವು

ಮಂಗಳೂರು (ದಕ್ಷಿಣ ಕನ್ನಡ): ನೀರಿನ ಲೀಕೇಜ್ ಸರಿ ಪಡಿಸಲು ಹೋಗಿದ್ದ ವ್ಯಕ್ತಿಯೋರ್ವ 120 ಅಡಿ ಎತ್ತರದಿಂದ ಬಿದ್ದು ಮೃತಪಟ್ಟಿರುವ ಘಟನೆ ಎಂಆರ್ ಪಿಎಲ್ ನಲ್ಲಿ ನಡೆದಿದೆ. ಸುಮಾರು 10 ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮಂಗಳ್ ಓರನ್ (38), ಮೃತಪಟ್ಟ ವ್ಯಕ್ತಿ. ಇವರು‌ ಮೂಲತಃ ಜಾರ್ಖಾಂಡ್ ನ ರಾಂಚಿ ಜಿಲ್ಲೆಯವರಾಗಿದ್ದು, ಪ್ರಸ್ತುತ ಜೋಕಟ್ಟೆ ಪ್ರದೇಶದಲ್ಲಿ ವಾಸವಾಗಿದ್ದರು ಎಂದು ತಿಳಿದು ಬಂದಿದೆ.

ಎಂ ಆರ್ ಪಿ ಎಲ್ ನಲ್ಲಿ ಸುಮಾರು 120 ಅಡಿ ಎತ್ತರದಲ್ಲಿರುವ ಹೈಡ್ರೋ ಕ್ರ್ಯಾಕರ್ ನಲ್ಲಿ ನೀರಿನ ವೇಗ ಪರಿಶೀಲಿಸಲು ಮಂಗಳ್ ಓರನ್ ತೆರಳಿದ್ದರು. ಆಗ ಅಲ್ಲಿ ನೀರಿನ ಸೋರುವಿಕೆ ಕಂಡು ಬಂದಿತ್ತು. ಅದನ್ನು ಸರಿಪಡಿಸುವ ಸಂದರ್ಭ ಸೋರುವಿಕೆಯಲ್ಲಿ ನೀರಿನ ಹರಿವು ಏಕಾ ಏಕಿ ಹೆಚ್ಚಾಗಿ ಮಂಗಳ್ ಓರನ್ 120 ಅಡಿ ಮೇಲಿಂದ ಬಿದ್ದಿದ್ದಾರೆ.

RELATED ARTICLES
- Advertisment -
Google search engine

Most Popular