ಕೆ.ಆರ್.ಪೇಟೆ: ತಾಲೂಕಿನ ವಿಠಲಾಪುರ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಚಿಕ್ಕಗಾಡಿಗನಹಳ್ಳಿಯ ಶ್ರೀಮತಿ ಸವಿತಾ ಸಂತೋಷ್ ಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಕೆ ಆರ್ ಪೇಟೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿ ಸತೀಶ್ ಅವರು ಚುನಾವಣಾ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿದರು ಹಿಂದಿನ ಅಧ್ಯಕ್ಷರಾದ ಹರೀಶ್ ರವರಿಂದ. ತೆರವಾದ
ಸ್ಥಾನಕ್ಕೆ ಶ್ರೀಮತಿ ಸವಿತಾಸಂತೋಷ್ ಕುಮಾರ್ ರವರನ್ನು ಬೇರೆ ಯಾರೂ ನಾಮಪತ್ರವನ್ನು ಸಲ್ಲಿಸದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಗಳು ಶ್ರೀಮತಿ ಸವಿತಾ ಸಂತೋಷ್ ಕುಮಾರ್ ಅವರನ್ನು ಅವಿರೋಧ ಆಯ್ಕೆಯನ್ನು ಪ್ರಕಟಿಸಿದರು.ಸವಿತಾ ಅವರು ಅಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತೆ ಚಿಕ್ಕಗಾಡಿಗನಹಳ್ಳಿ ಗ್ರಾಮಸ್ಥರು ಹಾಗೂ ಸವಿತಾ ಸಂತೋಷ್ ಕುಮಾರ್ ಅವರ ಬೆಂಬಲಿಗರು ಪಟಾಕಿಸಿಡಿಸಿ ಸಿಹಿವಿತರಿಸಿ ಸಂಭ್ರಮಿಸಿದರು
ದಲಿತ ಸಂಘರ್ಷ ಸಮಿತಿಯ ಸಂಘಟನೆಯ ಸಂಚಾಲಕರಾಗಿ ಜನಪರ ಹೋರಾಟ ಮಾಡುತ್ತಿರುವ ಸಂತೋಷ್ ಕುಮಾರ್ ರವರ ಧರ್ಮಪತ್ನಿಯಾಗಿರುವ ಶ್ರೀಮತಿ
ಸವಿತಾ ನೂತನವಾಗಿ ವಿಠಲಾಪುರ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಕೆ ಆರ್ ಪೇಟೆ ತಾಲೂಕಿನ ದಲಿತ ಬಂಧುಗಳಲ್ಲಿ ಸಂಭ್ರಮವನ್ನುಂಟು ಮಾಡಿದೆ.ನೂತನ ಅಧ್ಯಕ್ಷೆಯಾಗಿ ಆಯ್ಕೆಯಾದ ಶ್ರೀಮತಿ ಸವಿತಾ ಸಂತೋಷ್ ಕುಮಾರ್ ರವರನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗೀತಾ ಅಭಿನಂದಿಸಿದರು.ವಿಠಲಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಎಲ್ಲ ಗ್ರಾಮಗಳಿಗೆ ಅಗತ್ಯವಾಗಿ ಬೇಕಾಗಿರುವ ಮೂಲಭೂತ ಸೌಲಭ್ಯಗಳು ಕುಡಿಯುವ ನೀರು, ಬೀದಿ ದೀಪಗಳು ಸೇರಿದಂತೆ ಅತಿ ಅವಶ್ಯಕತವಿರುವ ಕೆಲಸ ಕಾರ್ಯಗಳನ್ನು ಮೊದಲ ಆದ್ಯತೆಯಲ್ಲಿ ಮಾಡುತ್ತೇನೆ.ಸರ್ಕಾರದ ವಿವಿಧ ಯೋಜನೆಗಳ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಪ್ರಾಮಾಣಿಕವಾಗಿ ದುಡಿಯುತ್ತೇನೆ ಎಂದು ನೂತನ ಅಧ್ಯಕ್ಷೆ ಶ್ರೀಮತಿ ಸವಿತಾ ಸಂತೋಷ್ ಕುಮಾರ್ ಹೇಳಿದರು ವಿಠಲಾಪುರ ಗ್ರಾಮ ಪಂಚಾಯಿತಿಯ ಸದಸ್ಯರು ವಿಠಲಾಪುರ ಗ್ರಾಮದ ಮುಖಂಡರು ಹಾಗೂ ಈ ಪಂಚಾಯತಿ ವ್ಯಾಪ್ತಿಯ ಎಲ್ಲ ಗ್ರಾಮಗಳ ಸಾರ್ವಜನಿಕ ಬಂಧುಗಳು ನೂತನ ಅಧ್ಯಕ್ಷರಾದ ಸವಿತಾ ಸಂತೋಷ್ ಕುಮಾರ್ ಅವರನ್ನು ಅಭಿನಂದಿಸಿದರು ಮುಖಂಡರಾದ ಮುದುಗೆರೆ ಮಹೇಂದ್ರ, ಚಿಕ್ಕಗಾಡಿಗನಹಳ್ಳಿ ಬಸವೇಶ್,ನಿಂಗಯ್ಯ,ಕಿರಣ್, ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದರು.