Saturday, April 19, 2025
Google search engine

Homeರಾಜ್ಯಸುದ್ದಿಜಾಲಮುಡಾ ಬಜೆಟ್ ಮಂಡನೆ: ಅಭಿವೃದ್ದಿಗೆ 82,577 ಲಕ್ಷ ರೂ. ವೆಚ್ಚ ಮಾಡಲು ನಿರ್ಧಾರ

ಮುಡಾ ಬಜೆಟ್ ಮಂಡನೆ: ಅಭಿವೃದ್ದಿಗೆ 82,577 ಲಕ್ಷ ರೂ. ವೆಚ್ಚ ಮಾಡಲು ನಿರ್ಧಾರ

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ 2024-25ನೇ ಸಾಲಿನ ಬಜೆಟ್ ಮಂಡನೆ ಮಾಡಲಾಗಿದ್ದು, ನಗರದ ಅಭಿವೃದ್ಧಿ ಮತ್ತು ಪ್ರಗತಿಗೆ ಪ್ರಸಕ್ತ ಸಾಲಿನಲ್ಲಿ 82,577 ಲಕ್ಷ ವೆಚ್ಚ ಮಾಡಲು ಉದ್ದೇಶಿಸಲಾಗಿದೆ.

ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತ ಜಿ.ಟಿ. ದಿನೇಶ್ ಕುಮಾರ್ ಅವರು ಪ್ರಸಕ್ತ ಸಾಲಿನ ಬಜೆಟ್ ಮಂಡನೆ ಮಾಡಿದರು. 83,180.06 ಲಕ್ಷ ರೂ. ಬಜೆಟ್ ಗಾತ್ರವಾಗಿದೆ. 603.06 ಲಕ್ಷ ರೂ.ಗಳ ಹೆಚ್ಚುವರಿ ಉಳಿತಾಯ ಬಜೆಟ್ ಮಂಡನೆ ಮಾಡಲಾಗಿದೆ.

ಕೆರೆ ಅಭಿವೃದ್ಧಿ, ಉದ್ಯಾನವನ ಮತ್ತು ತೆರದ ಪ್ರದೇಶಗಳ ಅಭಿವೃದ್ಧಿ, ಕೊಳಚೆ ಪ್ರದೇಶಗಳ ಅಭಿವೃದ್ಧಿ, ಗುಂಪು ವಸತಿ ಯೋಜನೆ, ಫೆರಿಪೆರಲ್ ರಿಂಗ್ ರಸ್ತೆ ಸೇರಿ ಹಲವು ಅಂಶಗಳ ಕುರಿತು ಬಜೆಟ್‌ ನಲ್ಲಿ ಪ್ರಸ್ತಾಪ ಮಾಡಲಾಗಿದೆ.

ಈ ವೇಳೆ ಶಾಸಕರಾದ ಜಿ.ಟಿ ದೇವೇಗೌಡ, ತನ್ವಿರ್ ಸೇಠ್, ರಮೇಶ್ ಬಂಡಿಸಿದ್ದೇಗೌಡ, ಕೆ. ಹರೀಶ್ ಗೌಡ, ದರ್ಶನ್, ಧೃವನಾರಾಯಣ್, ಡಾ.ಡಿ ತಿಮ್ಮಯ್ಯ, ದಿನೇಶ್ ಗೂಳಿಗೌಡ, ಮಧು ಜಿ ಮಾದೇಗೌಡ, ಸಿ.ಎನ್ ಮಂಜೇಗೌಡ, ಮರೀತೀಬ್ಬೆಗೌಡ, ಸೇರಿದಂತೆ ಮುಡಾ ಅಧಿಕಾರಿಗಳು ಭಾಗಿಯಾಗಿದ್ದರು.

RELATED ARTICLES
- Advertisment -
Google search engine

Most Popular