ಮೈಸೂರು:ಮೈಸೂರು ತಾಲ್ಲೂಕು ಕುರುಬರ ಸಂಘಕ್ಕೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಿವೇಶನ ಮಂಜೂರು ಮಾಡಿಕೊಡುವುದಾಗಿ ಮೂಡಾ ಅಧ್ಯಕ್ಷ ಕೆ.ಮರೀಗೌಡ ಭರವಸೆ ನೀಡಿದರು.
ಮೈಸೂರು ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಸಿ.ಬಸವರಾಜು, ನೇತೃತ್ವದ ತಂಡ ಮರೀಗೌಡರನ್ನು ಭೇಟಿ ಮಾಡಿ ಅಭಿನಂದಿಸಿ ಮಾತನಾಡಿ ನಮ್ಮ ಸಂಘಕ್ಕೆ ಕಛೇರಿ ಮಾಡಿಕೊಳ್ಳಲೂ ಜಾಗವಿಲ್ಲದಂತಾಗಿದೆ ಲಕ್ಷಾಂತರ ಜನಸಂಖ್ಯೆ ಇರುವ ಕುರುಬರ ಸಂಘಕ್ಕೆ ಸಭೆ ಸಮಾರಂಭ ಮಾಡಲು ಬೇರೆ ಕಡೆ ಹೋಗಬೇಕಾಗಿದೆ. ಈಗಾಗಲೇ ಮೂಡಾದಲ್ಲಿ ಅರ್ಜಿಯನ್ನು ಸಲ್ಲಿಸಿದ್ದೇವೆ, ದಯಮಾಡಿ ಮಂಜೂರು ಮಾಡಿಕೊಡಬೇಕೆಂದು ಮನವಿ ಮಾಡಿದರು.
ಕೆ.ಮರೀಗೌಡರು ಮಾತನಾಡಿ ಸ್ವಾತಂತ್ಯ್ರ ಬಂದು ೭೫ ವರ್ಷಗಳಾದರೂ ಸಹ ಇದುವರೆಗೆ ಸಂಘಕ್ಕೆ ನೀವು ಜಾಗ ಮಾಡಿಕೊಂಡಿಲ್ಲ. ಹಿಂದೆ ಇದ್ದಂತಹವರು ಪ್ರಯತ್ನ ಮಾಡಬೇಕಾಗಿತ್ತು. ಈಗಾಲಾದರೂ ನೀವು ಮನಸ್ಸು ಮಾಡಿ ಒಗ್ಗಟ್ಟಿನಿಂದ ಎಲ್ಲರೂ ಬಂದಿದ್ದೀರಿ. ನಿಮ್ಮ ಬೇಡಿಕೆಯನ್ನು ಪರಿಶೀಲಿಸಿ ನಿವೇಶನ ಮಾಡಿಕೊಡಲು ಪ್ರಯತ್ನ ಮಾಡುತ್ತೇನೆ, ಕನಕ ಜಯಂತಿ ಕಾರ್ಯಕ್ರಮಗಳನ್ನು ಸಹ ಎಲ್ಲರೂ ಒಗ್ಗಟ್ಟಿನಿಂದ ಇನ್ನು ಮುಂದೆ ಅದ್ದೂರಿಯಾಗಿ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಸಂಘದ ಗೌರವ ಅಧ್ಯಕ್ಷ ನಾಡನಹಳ್ಳಿ ರವಿ, ಉಪಾಧ್ಯಕ್ಷರಾದ ಹೆಚ್.ಸಿ. ರಾಜು, ಪ್ರಧಾನ ಕಾರ್ಯದರ್ಶಿ ಪಿ. ಅಣ್ಣಯ್ಯ, ಕೇಬಲ್ ಪಾಪಣ್ಣ, ಕಾರ್ಯದರ್ಶಿ ರಾಘವೇಂದ್ರ ಹೆಚ್.ಜೆ, ಸಹಕಾರ್ಯದರ್ಶಿ ಸ್ವಾಮಿ ಹೆಚ್.ಜೆ. ಸೋಮಣ್ಣ, ಸ್ವಾಮಿ ಪುಟ್ಟಸ್ವಾಮಿ, ಮಲ್ಲೇಶ್, ಅಪ್ಪೂ ಗೌಡ್ರು, ಮತ್ತಿತರರು ಹಾಜರಿದ್ದರು.