Monday, April 14, 2025
Google search engine

Homeರಾಜ್ಯಮುಡಾ ಹಗರಣ: 2 ಸೈಟ್ ನೀಡಬೇಕಾಗಿದ್ದ ವ್ಯಕ್ತಿಗೆ 19 ನಿವೇಶನ

ಮುಡಾ ಹಗರಣ: 2 ಸೈಟ್ ನೀಡಬೇಕಾಗಿದ್ದ ವ್ಯಕ್ತಿಗೆ 19 ನಿವೇಶನ

ಮೈಸೂರು: ವ್ಯಕ್ತಿಯಿಂದ ಯಾವಾಗ ಭೂಸ್ವಾಧೀನ ಮಾಡಿಕೊಂಡಿದ್ದು, ಎಂಬ ಮಾಹಿತಿಯೇ ಇಲ್ಲದೆ, ಅವರಿಗೆ (ಮಹೇಂದ್ರ) 19 ನಿವೇಶನಗಳನ್ನು ಹಂಚಿರುವುದು ತಿಳಿದುಬಂದಿದೆ.

ಮಹೇಂದ್ರ ಎಂಬುವವರಿಗೆ ಸೇರಿದ 2.22 ಎಕರೆ ಭೂಮಿ ಉಪಯೋಗಿಸಿಕೊಂಡಿರುವುದಾಗಿ ಮುಡಾ ಹೇಳಿಕೊಂಡಿದೆ. ಆದರೆ, ಭೂಮಿಯನ್ನು ಸ್ವಾಧೀನಪಡಿಸಿಕೊಂಡಿರುವುದು ಎಂಬ ಮಾಹಿತಿ ಮುಡಾ ಬಳಿ ಇಲ್ಲ ಎನ್ನಲಾಗಿದೆ. ಆದಾಗ್ಯೂ ಅವರಿಗೆ 50-50 ಅನುಪಾತದಲ್ಲಿ ಸೈಟ್​​​ ಗಳನ್ನು ಹಂಚಿಕೆ ಮಾಡಲಾಗಿದೆ.

ದೇವನೂರು ಭೂಮಿಗೆ ವಿಜಯನಗರ 3 ನೇ ಹಂತದಲ್ಲಿ ಸೈಟ್

ದೇವನೂರು ಗ್ರಾಮದ ಸರ್ವೆ ನಂ. 81/2 ರಲ್ಲಿ ಭೂಮಿಯನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ವಶಪಡಿಸಿಕೊಂಡಿತ್ತು. ಆದರೆ ಯಾವಾಗ ಆ ಭೂಮಿಯನ್ನು ವಶಪಡಿಸಿಕೊಂಡು ಅಭಿವೃದ್ಧಿ ಪಡಿಸಲಾಗಿದೆ ಎನ್ನುವ ಮಾಹಿತಿ ಮಾತ್ರ ಮುಡಾ ಬಳಿ ಇಲ್ಲ. ಅಷ್ಟೆ ಅಲ್ಲದೆ, ದೇವನೂರು ಗ್ರಾಮದ ಭೂಮಿಗೆ ವಿಜಯನಗರ 3 ನೇ ಹಂತದಲ್ಲಿ ನಿವೇಶನಗಳನ್ನು ನೀಡಲಾಗಿದೆ.

2 ಸೈಟ್​ ಗಳ ಬದಲಿಗೆ 19 ಸೈಟ್ ಪರಿಹಾರ

ಪ್ರೋತ್ಸಾಹದಾಯಕ ಯೋಜನೆಯಲ್ಲಿ ಸ್ವ ಇಚ್ಛೆಯಿಂದ ಬಿಟ್ಟುಕೊಟ್ಟಿದ್ದಾರೆ ಎಂದು ಕ್ರಯ ಪತ್ರದಲ್ಲಿ ನಮೂದಿಸಲಾಗಿದೆ. ಈ ಯೋಜನೆಗೆ ನೀಡಬೇಕಿರುವುದು ಕೇವಲ 2 ಸೈಟ್​ಗಳು ಮಾತ್ರ. 4060 ಮತ್ತು 4030 ರ 3600 ಚದರ ಅಡಿ ಮಾತ್ರ ಪರಿಹಾರ ಸಿಗಬೇಕಾಗಿತ್ತು. ಆದರೆ ನಗರದ ಪ್ರಮುಖ ಪ್ರದೇಶದಲ್ಲೇ 19 ನಿವೇಶನ ನೀಡಲಾಗಿದೆ.

ಪ್ರಕರಣ ಸಂಬಂಧ ಬೆಂಗಳೂರಿನ ಇಡಿ ಕಚೇರಿಯಲ್ಲಿ ಸಿಎಂ ಸಿದ್ದರಾಮಯ್ಯ ಅತ್ಯಾಪ್ತ ಮರಿಗೌಡ, ಮರಿಗೌಡ ಆಪ್ತ ಶಿವಣ್ಣ, ಮಾಜಿ ಆಯುಕ್ತ ನಟೇಶ್, ಮಾಜಿ ತಹಶೀಲ್ದಾರ್ ಮಾಳಿಗೆ ಶಂಕರ್​​ರನ್ನ ವಿಚಾರಣೆ ನಡೆಸಲಾಗಿದೆ.

RELATED ARTICLES
- Advertisment -
Google search engine

Most Popular