Friday, April 11, 2025
Google search engine

Homeರಾಜ್ಯಮುಡಾ ಹಗರಣ : ಬಿಲ್ಡರ್ ಎನ್,ಮಂಜುನಾಥ್ ವಿರುದ್ಧ ಇಡಿಗೆ ಮತ್ತೊಂದು ದೂರು ಸಲ್ಲಿಕೆ!

ಮುಡಾ ಹಗರಣ : ಬಿಲ್ಡರ್ ಎನ್,ಮಂಜುನಾಥ್ ವಿರುದ್ಧ ಇಡಿಗೆ ಮತ್ತೊಂದು ದೂರು ಸಲ್ಲಿಕೆ!

ಬೆಂಗಳೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿದೆ ಎನ್ನಲಾಗಿರುವ ಹಗರಣ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿದೆ. ಮುಡಾ ಹಗರಣ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ. ಮುಡಾ ಹಗರಣದ ತನಿಖೆಯನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನಡೆಸುತ್ತಿದ್ದಾರೆ.

ಮುಡಾ ಹಗರಣದ ಜಾಡು ಬೆಂಗಳೂರಿನವರೆಗೂ ವ್ಯಾಪಿಸಿದ್ದು, ಇಡಿ ಅಧಿಕಾರಿಗಳು ಇಲ್ಲಿನ ಜೆಪಿ ನಗರದಲ್ಲಿರುವ ಬಿಲ್ಡರ್ ಎನ್. ಮಂಜುನಾಥ್ ಎಂಬುವರ ಮನೆ ಮೇಲೆ ದಾಳಿ ಮಾಡಿ, ದಾಖೆಗಳನ್ನು ಪರಿಶೀಲಿಸುತ್ತಿದ್ದಾರೆ. ಇದರ ಮಧ್ಯ ಸ್ನೇಹಮಯಿ ಕೃಷ್ಣ ಬಿಲ್ಡರ್ ಮಂಜುನಾಥ್ ವಿರುದ್ಧ ವಿಡಿಯೋ ಸಮೇತವಾಗಿ ಮತ್ತೊಂದು ದೂರು ನೀಡಿದ್ದಾರೆ ಎನ್ನಲಾಗಿದೆ.

ಸ್ನೇಹಮಯಿ ಕೃಷ್ಣ ಅವರು ಬಿಲ್ಡರ್ ಮಂಜುನಾಥ ವಿರುದ್ಧ ಮತ್ತೊಂದು ದೂರು ದಾಖಲಿಸಿದ್ದಾರೆ. ಮೈಸೂರಿನ ಶಿವಣ್ಣ ಎಂಬುವವರಿಂದ ಬಿಲ್ಡರ್ ಮಂಜುನಾಥ ಹಣ ಪಡೆದಿದ್ದರು ಎಂದು ಆರೋಪಿಸಿ ದೂರು ನೀಡಿದ್ದಾರೆ ಎನ್ನಲಾಗಿದೆ. ೨೫ ಲಕ್ಷ ನಗದು ಹಣ ಎಣಿಸುತ್ತಿರುವ ಸಮೇತ ಸ್ನೇಹಮಯಿ ಕೃಷ್ಣ ಸಾಕ್ಷಿ ಸಮೇತವಾಗಿ ಇಡಿಗೆ ದೂರು ಕೊಟ್ಟಿದ್ದಾರೆ.

ಸದ್ಯ ಮುಡಾ ಹಗರಣಕ್ಕೆ ವಿಡಿಯೋ ಪ್ರಮುಖ ಸಾಕ್ಷಿಯಾಗಿದೆ. ಬಿಲ್ಡರ್ ಮಂಜುನಾಥ ವಿರುದ್ಧ ಇದೀಗ ಸ್ನೇಹಮಯಿ ಕೃಷ್ಣ ಇಡಿಗೆ ಮತ್ತೊಂದು ದೂರು ಸಲ್ಲಿಸಿದ್ದಾರೆ. ವಿಡಿಯೋ ಸಮೇತ ದೂರು ನೀಡಿದ್ದಾರೆ. ವಿಡಿಯೋದಲ್ಲಿ ಬಿಲ್ಡರ್ ಮಂಜುನಾಥ್ ಪಿಎ ಹಣ ಎಣಿಸುತ್ತಿರುವ ವಿಡಿಯೋ ವೈರಲ್ ಆಗಿದೆ.ಸೆಟ್ಲ್ಮೆಂಟ್ ಡೀಡ್ ಹೆಸರಿನಲ್ಲಿ ಹಣ ಪಡೆದ ಆರೋಪ ಹಿನ್ನೆಲೆಯಲ್ಲಿ ಮೈಸೂರಿನ ಶಿವಣ್ಣ ಎಂಬ ಹಣ ಪಡೆದಿದ್ದರು. ೨೫ ಲಕ್ಷ ಹಣ ಎಣಿಸುತ್ತಿರುವ ವಿಡಿಯೋ ಸಮೇತ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.

RELATED ARTICLES
- Advertisment -
Google search engine

Most Popular