Thursday, April 3, 2025
Google search engine

Homeಸ್ಥಳೀಯಮುಡಾ ಹಗರಣ : ನ್ಯಾಯಾಂಗ ತನಿಖೆಗೆ ಸಿಪಿಐ(ಎಂ) ಒತ್ತಾಯ

ಮುಡಾ ಹಗರಣ : ನ್ಯಾಯಾಂಗ ತನಿಖೆಗೆ ಸಿಪಿಐ(ಎಂ) ಒತ್ತಾಯ

ಮೈಸೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮೂಡ)ದಲ್ಲಿ ನಿವೇಶನ ಹಂಚಿಕೆಯಲ್ಲಿ ನಡೆದಿರುವ ಹಗರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿ ಭಾರತ ಕಮ್ಯುನಿಸ್ಟ್ ಪಕ್ಷ(ಮಾಕ್ಸ್೯ವಾದಿ)ದಿಂದ ಪ್ರತಿಭಟನೆ ನಡೆಯಿತು.

ನಗರದ ಹಳೆ ಜಿಲ್ಲಾಧಿಕಾರಿ ಕಚೇರಿ ಪಕ್ಕದಲ್ಲಿ ಬುಧವಾರ ನಡೆದ ಪ್ರತಿಭಟನೆಯಲ್ಲಿ ‘ಮುಡಾ ಹಗರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿ ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗಬೇಕು’ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಆರ್ಥಿಕವಾಗಿ ಹಿಂದುಳಿದವರಿಗೆ, ಬಡವರಿಗೆ, ಸೂರಿಲ್ಲದವರಿಗೆ ರಿಯಾಯಿತಿ ದರದಲ್ಲಿ ನಿವೇಶನ ನೀಡಬೇಕಾದ ನಗರ ಅಭಿವೃದ್ಧಿ ಪ್ರಾಧಿಕಾರವು ರಿಯಲ್ ಎಸ್ಟೇಟ್‌ಕೋರರಿಗೆ, ದಲ್ಲಾಳಿಗಳಿಗೆ ಪೂರಕವಾಗಿ ಕೆಲಸ ಮಾಡುತ್ತಿರುವುದು ಖಂಡನೀಯ, ಅಲ್ಲದೆ ಇದು ಅಕ್ರಮಗಳನ್ನು ಸಕ್ರಮ ಮಾಡುವ ಪ್ರಾಧಿಕಾರವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಪರಿಹಾರದ ನಿವೇಶನ ನೀಡುವಲ್ಲಿ, ೫೦:೫೦ ಅನುಪಾತದ ಹಂಚಿಕೆಯಲ್ಲಿ ನಡೆದಿರುವ ಹಗರಣವೂ ಸೇರಿದಂತೆ ಈ ಹಿಂದೆ ನಡೆದಿರುವ ಎಲ್ಲಾ ಅಕ್ರಮಗಳನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು. ಅಕ್ರಮವಾಗಿ ಹಂಚಿರುವ ನಿವೇಶನಗಳನ್ನು ವಾಪಸ್ ಪಡೆದು ಬಡವರಿಗೆ ಹಂಚಬೇಕು, ಹಲವಾರು ವರ್ಷಗಳಿಂದ ಮೂಡದಲ್ಲಿ ಇರುವ ಅಧಿಕಾರಿ-ಸಿಬ್ಬಂದಿಗಳನ್ನು ವರ್ಗಾವಣೆ ಮಾಡಿ ಅವರ ಮೇಲಿರುವ ಆರೋಪಗಳ ತನಿಖೆ ನಡೆಸಬೇಕು ಎಂದು ಆಗ್ರಹಿಸಲಾಯಿತು.

ಬಿಜೆಪಿ ಸರ್ಕಾರ ಭೂಸ್ವಾಧೀನ ಮಸೂದೆಗೆ ತಿದ್ದುಪಡಿ ತಂದು ರೈತರಲ್ಲದವರು ರೈತರಿಂದ ಭೂಮಿಕೊಳ್ಳಲು ಅವಕಾಶ ನೀಡಿರುವುದು ಸಹ ಈ ರೀತಿಯ ಹಗರಣಗಳಿಗೆ ಕಾರಣವಾಗಿ ರೈತರಿಗೆ ಅನ್ಯಾಯವಾಗಿದೆ. ಆದ್ದರಿಂದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಭೂಸ್ವಾಧೀನ ಮಸೂದೆಗೆ ತಿದ್ದುಪಡಿಯನ್ನು ವಾಪಸ್ ಪಡೆಯಬೇಕೆಂದು ಒತ್ತಾಯಿಸಲಾಯಿತು.

ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಜಗದೀಶ್ ಸೂರ್ಯ, ಸದಸ್ಯರಾದ ಜಿ.ಜಯರಾಂ, ಲ.ಜಗನ್ನಾಥ್, ಎನ್.ವಿಜಯ್ ಕುಮಾರ್, ರಾಜೇಂದ್ರ, ಆರ್.ಸುಬ್ರಹ್ಮಣ್ಯ, ಕೃಷ್ಣ ಮೂರ್ತಿ, ಶಾಕುಂತಲಾ ಬಾಲಾಜಿರಾವ್, ಬಲರಾಂ, ಶ್ರೀಧರ್, ಎನ್.ಸುಬ್ರಹ್ಮಣ್ಯ, ಕಲಿಂ ಪಾಷಾ, ಈಶ್ವರ್, ವಿಜಯ್ ಕುಮಾರ್ ಗೌಡ, ಶಿವಕುಮಾರ್, ಪುಟ್ಟಮಲ್ಲಯ್ಯ, ಸಿದ್ದಯ್ಯ, ರಾಘವೇಂದ್ರ, ನಾಗರಾಜ್, ಕುಮಾರ್, ಮೋನಿಷ್, ಯರಗಲ್, ಶ್ರೀಕಂಠಮೂರ್ತಿ ಸೇರಿದಂತೆ ಹಲವರು ಭಾಗವಹಿಸಿದ್ದರು.

RELATED ARTICLES
- Advertisment -
Google search engine

Most Popular