Friday, April 11, 2025
Google search engine

Homeರಾಜ್ಯಮುಡಾ ಹಗರಣ: ನಿವೇಶನ ಕೊಂಡವರಿಗೆ 160 ಸೈಟ್ ಸೀಜ್ ಮಾಡುವಂತೆ ಇಡಿ ಪತ್ರ

ಮುಡಾ ಹಗರಣ: ನಿವೇಶನ ಕೊಂಡವರಿಗೆ 160 ಸೈಟ್ ಸೀಜ್ ಮಾಡುವಂತೆ ಇಡಿ ಪತ್ರ

ಮೈಸೂರು : ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಸಿಎಂ ಸಿದ್ದರಾಮಯ್ಯ ಪಾತ್ರ ಇದೆ ಎಂದು ಇತ್ತೀಚಿಗೆ ಇಡಿ ಅಧಿಕಾರಿಗಳು ದಾಖಲೆಗಳಲ್ಲಿ ಉಲ್ಲೇಖಿಸಿದ್ದರು. ಇದರ ಬೆನ್ನಲ್ಲೇ ಮೈಸೂರು ನಗರಭಿವೃದ್ಧಿ ಪ್ರಾಧಿಕಾರದಲ್ಲಿ ನಿವೇಶನಗಳನ್ನು ಕೊಂಡ ಜನರಿಗೆ ಇದೀಗ ED ಬಿಗ್ ಶಾಕ್ ನೀಡಿದೆ.

ಮೈಸೂರಿನ ಉಪನೊಂದಣಾಧಿಕಾರಿಗಳಿಗೆ ಇಡಿ ಅಧಿಕಾರಿಗಳು ಪತ್ರ ಬರೆದಿದ್ದು, ಮುಡಾದ ಸುಮಾರು 160 ಸೈಟ್ಗಳನ್ನು ಸೀಜ್ ಮಾಡುವಂತೆ ಪತ್ರ ಬರೆದಿದ್ದಾರೆ. ಮುಡಾದಲ್ಲಿ ಸೈಟ್ ಕೊಂಡವರು ಈಗಾಗಲೇ ಮನೆ ನಿರ್ಮಿಸುತ್ತಿದ್ದು, ಮನೆ ನಿರ್ಮಾಣದ ಖುಷಿಯಲ್ಲಿದ್ದವರಿಗೆ ಈಗ ನೋಟಿಸ್ ಸಂಕಷ್ಟ ತಂದೊಡ್ಡಿದೆ.

ಸೈಟ್ಗಳನ್ನು ವಾಪಸ್ ನೀಡಲಾರದೆ ಮನೆ ಕಟ್ಟಲಾಗದೆ ಕಂಗಾಲಾಗಿದ್ದಾರೆ. 50:50 ಅನುಪಾತದಲ್ಲಿ ಸೈಟ್ ಪಡೆದು ಬಳಿಕ ಹಲವರಿಂದ ಮಾರಾಟ ಮಾಡಲಾಗಿತ್ತು. ಸೈಟ್ ಖರೀದಿ ಮಾಡಿ ಮನೆ ಕಟ್ಟಿ ಇದೀಗ ಜನರು ಸಂಕಷ್ಟ ಎದುರಿಸುತ್ತಿದ್ದಾರೆ.

RELATED ARTICLES
- Advertisment -
Google search engine

Most Popular