Friday, April 18, 2025
Google search engine

Homeರಾಜ್ಯಮೂಡಾ ಹಗರಣ ಸಿಎಂ ಸಿದ್ದರಾಮಯ್ಯಗೆ ಕಪ್ಪು ‌ಚುಕ್ಕೆ: ಸಿಬಿಐ ತನಿಖೆಗೆ ವಹಿಸಿ- ನಟ ಚೇತನ್

ಮೂಡಾ ಹಗರಣ ಸಿಎಂ ಸಿದ್ದರಾಮಯ್ಯಗೆ ಕಪ್ಪು ‌ಚುಕ್ಕೆ: ಸಿಬಿಐ ತನಿಖೆಗೆ ವಹಿಸಿ- ನಟ ಚೇತನ್

ಚಿಕ್ಕಬಳ್ಳಾಪುರ: ಮೈಸೂರು ಮೂಡಾ ಹಗರಣ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಪ್ಪು ಚುಕ್ಕೆ ಎಂದು ನಟ ಚೇತನ್ ಆರೋಪಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮೂಡಾ ಹಗರಣ ತನಿಖೆಗೆ ಸರ್ಕಾರ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ರಚಿಸಿರುವ ಏಕ ಸದಸ್ಯ ವಿಚಾರಣೆ ಆಯೋಗ ಸಾಲದು ಎಂದರು.

ಕೂಡಲೇ ಮುಡಾ ಹಗರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದರು. ರಾಜ್ಯದಲ್ಲಿ ಎಸ್,ಸಿ ಎಸ್ ಟಿ ಹಾಗೂ ಆದಿವಾಸಿಗಳಿಗೆ‌ ಮೀಸಲಿಟ್ಟ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿದ ಅವರು, ಮುಖ್ಯಮಂತ್ರಿ ಸಿದ್ದ ರಾಮಯ್ಯ ಅವರು, ಕುರಿಗಾಯಿಗಳಿಗೆ ಗನ್ ನೀಡಲು ಮುಂದಾಗಿರುವ ಕ್ರಮ ಖಂಡಿಸಿದ ಚೇತನ , ಅರಣ್ಯ ಪ್ರದೇಶವನ್ನು ಕುರಿಗಾಯಿಗಳಿಗೆ ಮೀಸಲು ಇಡಬೇಕೆಂಬ ಚಿಂತನೆ ನಡೆಸಿರುವ ಸಿದ್ದರಾಮಯ್ಯ ಕ್ರಮವನ್ನು ಖಂಡಿಸಿದರು. ಇದೇ ವೇಳೆ ವಿಧಾನಸೌಧ ಆವರಣದಲ್ಲಿ ಭುವನೇಶ್ವರಿ ಪ್ರತಿಮೆ ಸ್ಥಾಪನೆ ಮೌಢ್ಯದ ಪ್ರತೀಕ ಎಂದು ನಟ ಚೇತನ್ ಖಂಡಿಸಿದರು.

ಈ ವೇಳೆ ಹೈಕೋರ್ಟ್ ನ್ಯಾಯವಾದಿ ಪ್ರೊ.ಎ.ಹರಿರಾಮ್ ಸೇರಿದಂತೆ ಮತ್ತಿತರರು ಇದ್ದರು.

RELATED ARTICLES
- Advertisment -
Google search engine

Most Popular