ಮದ್ದೂರು: ಮೈಸೂರು ಮುಡಾ ಹಗರಣ ಖಂಡಿಸಿ ಪ್ರತಿಭಟನೆ ಹಿನ್ನಲೆ ಮದ್ದೂರಿನ ಟಿ.ಬಿ.ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.
ಬಿಜೆಪಿ ಯೂತ್ ಜಿಲ್ಲಾಧ್ಯಕ್ಷ ರಘು ಅವರನ್ನು ವಶಕ್ಕೆ ಪಡೆದು ಪೊಲೀಸ್ ಜೀಪಿನಲ್ಲಿ ಪೊಲೀಸರು ಕರೆದೊಯ್ದರು.
ಮೈಸೂರಿನ ಪ್ರತಿಭಟನೆಗೆ ಬಿಜೆಪಿ ಕಾರ್ಯಕರ್ತರು ಕಾರಿನಲ್ಲಿ ತೆರಳಿದ್ದರು.
ಸುಮಾರು 10 ಕಾರಿನಲ್ಲಿ ಮೈಸೂರಿನ ಕಡೆಗೆ ತೆರಳುತ್ತಿದ್ದ ಬಿಜೆಪಿ ಕಾರ್ಯಕರ್ತರನ್ನು ಮೈಸೂರಿಗೆ ಹೋಗದಂತೆ ಮದ್ದೂರಿನಲ್ಲೆ ಕಾರುಗಳನ್ನು ತಡೆದು ಪೊಲೀಸರು ಎಚ್ಚರಿಕೆ ನೀಡಿದರು.