ಮಂಡ್ಯ: ಮೈಸೂರು ಮೂಡಾ ಹಗರಣದಲ್ಲಿ ಸಿಎಂ ಸಿದ್ರಾಮಯ್ಯ ಭಾಗಿ ಆರೋಪ ಹಿನ್ನೆಲೆ ಸಿಎಂ ಸಿದ್ರಾಮಯ್ಯ ರಾಜೀನಾಮೆಗೆ ಮಾಜಿ ಸಚಿವ ನಾರಾಯಣಗೌಡ ಆಗ್ರಹಿಸಿದ್ದಾರೆ.
ನಾವು ಸಿದ್ರಾಮಯ್ಯನವರನ್ನು ಸತ್ಯ ಹರಿಶ್ವಂದ್ರ ಅಂತಾ ಅನ್ಕೊಂಡಿದ್ದೆ, ಸದನದಲ್ಲಿ ಅವರು ಹಾಗೇ ಮಾತಾಡ್ತಿದ್ದರು. ಅವ್ರ ಕುಟುಂಬ ಮೂಡಾದ15 ಸೈಟ್ ಬೇಕಿತ್ತಾ? ಅಷ್ಟೋಂದು ನೋವಿತ್ತಾ ಅವ್ರಿಗೆ? ಎಂದು ಪ್ರಶ್ನಿಸಿದರು.
ಅವ್ರು ಆಗ ಬೇರೊಬ್ಬರ ಆರೋಪ ಎತ್ತಿ ತೋರ್ತಿದ್ರು ಈಗ ಅವರೆ ಅಕ್ರಮ ಮಾಡಿದ್ದಾರೆ ನಾವು ಬೆರಳು ತೋರಬಾರ್ದಾ? ಎಂದು ಕೇಳಿದರು.
ಅವ್ರು ಸತ್ಯ ಹರಿಶ್ಚಂದ್ರ ಆದ್ರೆ ಸಿ.ಎಂ.ಸ್ಥಾನಕ್ಕೆ ರಾಜೀನಾಮೆ ಕೊಡಲಿ. ಮಾಜಿ ಸಚಿವ ನಾಗೇಂದ್ರ ಆರೋಪ ಬಂದ ತಕ್ಷಣ ರಾಜೀನಾಮೇ ಕೊಟ್ರು ತಾನೆ. ಅದೇ ರೀತಿ ಸಿದ್ರಾಮಯ್ಯ ರಾಜೀನಾಮೆ ಕೊಡಬೇಕು, ತಪ್ಪ ಮಾಡಿಲ್ಲ ಅಂತಾ ಪ್ರೂವ್ ಆದ್ಮೇಲೆ ಮತ್ತೆ ಸಿ.ಎಂ.ಆಗ್ಲಿ ಎಂದು ಕೆ.ಆರ್.ಪೇಟೆಯ ಶೀಳನೆರೆ ಗ್ರಾಮದಲ್ಲಿ ಮಾಜಿ ಸಚಿವ ನಾರಾಯಗೌಡ ಹೇಳಿದರು.