ಬೆಂಗಳೂರು : ಮುಡಾ ಹಗರಣದಲ್ಲಿ ರಾಜ್ಯಪಾಲರು ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದನ್ನು ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ರಿಟ್ ಅರ್ಜಿ ಸಲ್ಲಿಸಿದ್ದರು. ಇದೀಗ ಹೈಕೋರ್ಟ್ ಏಕ ಸದಸ್ಯ ಪೀಠದಲ್ಲಿ ರಿಟ್ ಅರ್ಜಿಯ ವಿಚಾರಣೆ ನಡೆದಿದ್ದು, ಇದೀಗ ಸೆಪ್ಟೆಂಬರ್ ೧೨ಕ್ಕೆ ಅರ್ಜಿ ವಿಚಾರಣೆ ಮುಂದೂಡಿ ನ್ಯಾ.ಎಂ. ನಾಗಪ್ರಸನ್ನ ಆದೇಶ ಹೊರಡಿಸಿದ್ದಾರೆ.
ಸರ್ಕಾರದ ಪರ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಕೇಂದ್ರ ಸರ್ಕಾರದ ೧೭ ಮಾರ್ಗಸೂಚಿ ಆಧರಿಸಿ ವಾದಿಸಿದರು.೧೭ ಂಅಡಿ ಪ್ರಾಜೆಕ್ಯೂಷನ್ ಗೆ ಪೊಲೀಸರು ಅನುಮತಿ ಕೇಳಬಹುದು. ಅದಕ್ಕೂ ಮೊದಲು ತನಿಖಾಧಿಕಾರಿ ಪ್ರಾಥಮಿಕ ತನಿಖೆ ನಡೆಸಬೇಕು. ಪ್ರಾಥಮಿಕ ತನಿಖೆಯ ವಿವರವನ್ನು ಸಕ್ಷಮ ಪ್ರಾಧಿಕಾರಕ್ಕೆ ನೀಡಬೇಕು ಎಂದು ಲಲಿತಾ ಕುಮಾರಿ ಪ್ರಕರಣವನ್ನು ಎಜಿ ಶಶಿಕಿರಣ್ ಶೆಟ್ಟಿ ತಿಳಿಸಿದರು. ಈ ವೇಳೆ ಎಫ್ ಐ ಆರ್ ದಾಖಲಿಸುವ ಮೊದಲು ಪ್ರಾಥಮಿಕ ತನಿಖೆ ಅಗತ್ಯವಿದೆ, ಆದರೆ ೧೭ ಎ ಅಡಿ ಅನುಮತಿಗೆ ಪ್ರಾಥಮಿಕ ತನಿಖೆ ಆಗಿರಬೇಕೆಂದಿಲ್ಲ. ವಿಚಾರಣೆ ತನಿಖೆಗೂ ಮುನ್ನ ೧೭ಎ ಅನುಮತಿ ಬೇಕಲ್ಲವೇ ಎಂದು ಅಡ್ವಕೇಟ್ ಜನರಲ್ ಗೆ ನ್ಯಾ. ಎಂ.ನಾಗಪ್ರಸನ್ನ ಪ್ರಶ್ನಿಸಿದ್ದಾರೆ.
ಯಾವ ಕೇಸ್ ನಲ್ಲಿ ಪ್ರಾಥಮಿಕ ತನಿಖೆ ಬೇಕೆಂಬುದನ್ನು ಸುಪ್ರೀಂ ಹೇಳಿದೆ.೨೨ ವರ್ಷಕ್ಕಿಂತ ಹಳೆಯ ಕೆಸ್ ಇರುವುದರಿಂದ ಪ್ರಾಥಮಿಕ ತನಿಖೆ ನಡೆಯಬೇಕು. ೧೭ ಅಡಿ ಕೇಂದ್ರ ಸರ್ಕಾರ ಮಾರ್ಗಸೂಚಿ ರೂಪಿಸಿದೆ. ಖಾಸಗಿ ದೂರುದಾರರನ್ನು ಪೊಲೀಸರಿಗೆ ಮೇಲ್ತರದಲ್ಲಿ ಇರಿಸಬಹುದು. ತಲೆಖಾಧಿಕಾರಿ ತನಗೆ ಬರುವ ಮಾಹಿತಿ ಪರಿಶೀಲಿಸುತ್ತಾನೆ. ಆದರೆ ಖಾಸಗಿ ದೂಹುದಾರರ ವಿಷಯದಲ್ಲಿ ಹೀಗಾಗುವುದಿಲ್ಲ ಎಂದಾಗ.ಈ ವೇಳೆ ಜಡ್ಜ್ ಇದು ಪೊಲೀಸ್ ಅಧಿಕಾರಿಯ ಮುಂದೆ ದೂರು ಕೊಟ್ಟಾಗ, ಖಾಸಗಿ ದೂರದಾರರಿಗೆ ಇದು ಅನ್ವಯವಾಗುವುದಿಲ್ಲ ಎಂದು ಜಡ್ಜ್ ತಿಳಿಸಿದರು.
ದೂರು ನೀಡಿದ ನಂತರ ೧೫ ದಿನಗಳಿಂದ ೬ ವಾರಗಳ ಕಾಲಾವಕಾಶವಿರುತ್ತದೆ. ಆದರೆ ಅದಕ್ಕೆ ಕಾಯದೆ ರಾಜ್ಯಪಾಲರಿಗೆ ದೂರು ನೀಡಲಾಗಿದೆ.ಈ ವೇಳೆ ಜಡ್ಜ್, ಎಲ್ಲಾ ನಾಗರೀಕರು ಎಲ್ಲರ ವಿರುದ್ಧ ದೂರು ನೀಡಿದರೆ ಸಮಸ್ಯೆ ಆಗುತ್ತದೆ. ಹೀಗಾಗಿ ಡಾ. ಅಶೋಕ ಕೇಸ್ ನಲ್ಲಿ ಮಾರ್ಗಸೂಚಿ ರೂಪಿಸಲಾಗಿದೆ ಎಂದರು. ರಾಜ್ಯಪಾಲರು ತನಿಖಾಧಿಕಾರಿಯಿಂದ ವರದಿ ಪಡೆಯಬೇಕಿತ್ತು.ಸರ್ಕಾರಕ್ಕೆ ಶೋಕಾಸ್ ನೋಟಿಸ್ ನೀಡುವ ಬದಲು ವರದಿ ಪಡೆಯಬೇಕಿತ್ತು. ವರದಿಯ ಬಲವಿಲ್ಲದೆ ರಾಜ್ಯಪಾಲರು ಅನುಮತಿ ನೀಡಿದ್ದಾರೆ ಎಂದು ಎಜಿ ಶಶಿಕಿರಣ್ ಶೆಟ್ಟಿ ವಾದಿಸಿದರು.
ಸ್ನೇಹಮಯಿ ಕೃಷ್ಣ ಮನವಿಯಲ್ಲಿ ಸಿಬಿಐ ತನಿಖೆಯನ್ನು ಕೋರಲಾಗಿದೆ. ರಾಜ್ಯಪಾಲರ ಆದೇಶ ೧೭ ಂ ಅಡಿ ಇರಬೇಕೆ ಹೊರತು ಅವರ ಫೈಲ್ ನೋಟಿಂಗ ಗಳಿಗಲ್ಲ. ರಾಜ್ಯಪಾಲರ ಆದೇಶದಲ್ಲಿ ಇದಕ್ಕೆ ಕಾರಣಗಳು ಇರಬೇಕು. ರಾಜಪಾಲರು ಪರಿಶೀಲಿಸಿದ ಕಡತದಲ್ಲಲ್ಲ. ೩ ವ್ಯಾಲ್ಯೂಮಗಳ ದಾಖಲೆಗಳನ್ನು ರಾಜ್ಯಪಾಲರ ಪರವಾಗಿ ಎಲ್ಲರೂ ನೀಡಿದ್ದಾರೆ. ಆದರೆ ಶೋಕಾಸ್ ನೋಟಿಸ್ ನೀಡುವ ಮುನ್ನ ಪ್ರಾಥಮಿಕ ವರದಿ ಇಲ್ಲ.
೧೭ ಎ ಅಡಿ ರಾಜ್ಯಪಾಲರು ಪ್ರಾಥಮಿಕ ತನಿಖೆ ನಡೆಸುವಂತಿಲ್ಲ. ತನಿಖಾಧಿಕಾರಿಯಂತೆ ರಾಜಪಾಲರು ವರ್ತಿಸುವಂತಿಲ್ಲ. ಎಫ್‌ಐಆರ್ ದಾಖಲಿಸುವ ಮುನ್ನ ೧೭ ಎ ಅನುಮತಿ ಪಡೆಯಬೇಕು ಕೋರ್ಟ್ ಸೂಚಿಸಿದ್ದರೆ ಎಫ್‌ಐಆರ್ ದಾಖಲಾಗುತ್ತಿತ್ತು ಇದನ್ನು ತಡೆಯಲು ದೂರುದಾರರಿಗೆ ಅನುಮತಿ ಪಡೆಯುವ ಅವಕಾಶವಿದೆ ಎಂದು ಜಡ್ಜ್ ತಿಳಿಸಿದರು.
ಇದೆ ವೇಳೆ ತಾವು ಸೆಪ್ಟೆಂಬರ್ ೧೨ರಂದು ವಾದಿಸುವುದಾಗಿ ಅಭಿಷೇಕ್ ಮನು ಸಿಂಘವಿ ತಿಳಿಸಿದರು. ದೂರುದಾರರು ಕೆಸರೆ ಗ್ರಾಮನೇ ಇಲ್ಲ ಎಂದು ಆರೋಪಿಸಿದ್ದಾರೆ. ಅವರು ಗ್ರಾಮ ನುಂಗಿಬಿಟ್ಟಿದ್ದಾರೆ. ಗ್ರಾಮ ಎಲ್ಲಿದೆ ಹಾಗೂ ಸರ್ವೆ ನಂಬರ್ ಎಲ್ಲಿದೆ ನಾನು ತೋರಿಸುತ್ತೇನೆ ಎಂದು ಸಿಎಂ ಪರ ಹಿರಿಯ ವಕೀಲ ರವಿವರ್ಮ ಕುಮಾರ್ ಹೇಳಿಕೆ ನೀಡಿದರು.