ಬೆಂಗಳೂರು : ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರು ಎಂದು ಮೈಸೂರಿನ ಮುಡಾ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು. ಈ ಒಂದು ಹಗರಣಕ್ಕೆ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ ಖರ್ಗೆ ಮಾತನಾಡಿದ್ದು, ಬಿಎಸ್ ಯಡಿಯೂರಪ್ಪ ವಿರುದ್ಧ ಪೋಕ್ಸೋ ಕೇಸ್ ಪ್ರಕರಣ ಮುಚ್ಚಿ ಹಾಕಲು ಮುಡಾ ವಾಲ್ಮೀಕಿ ವಿಚಾರ ಹೊರ ತಂದಿದ್ದಾರೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಐಟಿ,ಇಡಿ, ಸಿಬಿಐ ಕರೆಸೋದು ಮಾಡುತ್ತಿದ್ದಾರೆ. ಅವರಿಗೆ ಬಹಳ ಆತಂಕವಿದೆ. ಬಿಜೆಪಿ ಅವಧಿಯಲ್ಲಿನ ಒಂದು ಹಗರಣಕ್ಕು ಐಟಿ ಇಡಿ ಸಿಬಿಐ ಕರೆಸಿಲ್ಲ. ಪ್ರತಿಭಟನಾ ಮೆರವಣಿಗೆಗೆ ಸಿದ್ಧವಾಗಿದವರನ್ನು ವಶಕ್ಕೆ ಪಡೆದಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಬಿಜೆಪಿಯವರನ್ನ ವಶಕ್ಕೆ ಪಡೆದುಕೊಂಡಿದ್ದಾರೆ.
ಬಿಜೆಪಿಯವೂ ನಮಗೂ ಹೀಗೆ ಮಾಡಿರಲಿಲ್ವಾ ಪಿಎಸ್‌ಐ ನೇಮಕಾತಿ ಹಗರಣ ಹೊರಗೆ ಎಳೆದಿದ್ದಕ್ಕೆ ನೋಟಿಸ್ ನೀಡಿದರು. ಬಿಜೆಪಿ ಅವಧಿಯಲ್ಲಿ ಮೂಡಾದಲ್ಲಿ ಅಕ್ರಮ ನಡೆದಿದೆ. ರಾಜ್ಯದಲ್ಲಿ ಆಡಳಿತದಲ್ಲಿದ್ದ ಬಿಜೆಪಿ ಯಾಕೆ ಅಂದೆ ಪ್ರಶ್ನೆ ಮಾಡಿರಲಿಲ್ಲ ೨೦೧೧ ರಲ್ಲಿ ಬಿಎಸ್ ಯಡಿಯೂರಪ್ಪ ಸ್ಪೀಕರ್ಗೆ ನೀಡಿದ್ದ ನೋಟ್ ಬಗ್ಗೆ ಯಾಕೆ ತನಿಖೆ ಮಾಡಿಲ್ಲ? ಪೋಕ್ಸೋ ಕೇಸ್ ಮುಚ್ಚಿ ಹಾಕಲು ಮೂಡ, ವಾಲ್ಮೀಕಿ ಹಗರಣ ವಿಚಾರ ತಂದಿದ್ದಾರೆ.
ಬಿಎಸ್ ವೈ ವಿರುದ್ಧ ಪೋಕ್ಸೋ ಕೇಸ್ ಬಗ್ಗೆ ಬಿಜೆಪಿ ಬಾಯ್ ಬಿಡುತ್ತಿಲ್ಲ ಬಿಜೆಪಿಯವರ ಹಗರಣದ ಆಳ ಅಗಲ ದೊಡ್ಡದಿದೆ ಇದಕ್ಕೆ ಸಮಯ ಹಿಡಿಯುತ್ತದೆ ೫೪೫ ಪಿಎಸ್‌ಐ ನೇಮಕಾತಿ ಹಗರಣದ ಪ್ರಾಥಮಿಕ ತನಿಖಾ ವರದಿ ಬಂದಿದೆ ೪೦% ಕಮಿಷನ್ ಹಗರಣದ ಬಗ್ಗೆಯೂ ದಾಖಲೆಗಳು ಸಿಗುತ್ತಿವೆ ಒಂದೊಂದೇ ಹೊರಗೆ ಬರುತ್ತಿವೆ ಎಂದು ವಾಗ್ದಾಳಿ ನಡೆಸಿದರು.