ಬೆಂಗಳೂರು: ರಾಜ್ಯದಲ್ಲಿ ಭಾರಿ ಸಂಚಲನ ಮೂಡಿಸಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಸೈಟ್ ಹಂಚಿಕೆ ಹಗರಣದಲ್ಲಿ ವಿವಾದಕ್ಕೆ ಸಿಲುಕಿರುವ ಸಿಎಂ ಸಿದ್ದರಾಮಯ್ಯ ತಮ್ಮ ಪತ್ನಿಗೆ ನೀಡಲಾಗಿರುವ 14 ಸೈಟ್ ಅನ್ನು ವಾಪಸ್ ನೀಡಲು ಸಿದ್ಧರಿರುವುದಾಗಿ ಘೋಷಿಸಿದ್ದಾರೆ.
ಈ ಸಂಬಂಧ ಖಾಸಗಿ ಸುದ್ದಿವಾಹಿನಿಗೆ ಸಂದರ್ಶನ ನೀಡಿರುವ ಅವರು, ನನಗೆ ಸೈಟ್ ಹಾಗೂ ಜಮೀ ನಿನ ಬಗ್ಗೆ ಆಸಕ್ತಿ ಇಲ್ಲ. 14 ಸೈಟ್‌ಗಳನ್ನು ವಾಪಸ್ ನೀಡಲು ಸಿದ್ಧನಿದ್ದೇನೆ. ಟೇಕ್ ಇಟ್ ಬ್ಯಾಕ್… ’ ಎಂದಿದ್ದಾರೆ. ಆದರೆ ಇದು ನನ್ನ ಪತ್ನಿಯ ಹೆಸರಿನಲ್ಲಿ ರುವ ಸೈಟ್ ಆಗಿದ್ದು, ಅದನ್ನು ವಾಪಸ್ ಮರಳಿಸಿದರೆ ಅವರಿಗೆ ಮುಡಾ ಏನು ಪರಿಹಾರ ಕೊಡಲಿದೆ ಎಂದು ಪ್ರಶ್ನೆ ಮಾಡಿದ್ದಾರೆ.