ವರದಿ ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಶಾಸಕ ಡಿ.ರವಿಶಂಕರ್ ಅವರ ಸೂಚನೆಯ ಮೇರೆಗೆ ಆರಂಭವಾಗಿರುವ ಸಾಲಿಗ್ರಾಮ ತಾಲೂಕಿನ ಮುದ್ದನಹಳ್ಳಿ ಗ್ರಾಮದಿಂದ ಕೆ.ಆರ್.ನಗರ ಮಾರ್ಗವಾಗಿ ಮೈಸೂರಿಗೆ ನೂತನ ಬಸ್ ಸೇವೆ ಶನಿವಾರ ಚಾಲನೆ ನೀಡಲಾಯಿತು.
ಈ ಬಸ್ ಸೇವೆಯು ಬೆಳಿಗ್ಗೆ 6.10ಕ್ಕೆ ಮುದ್ದನಹಳ್ಳಿ ಗ್ರಾಮದಿಂದ ಹೊರಟು ಹೊಸೂರು-ಚುಂಚನಕಟ್ಟೆಯ ಮಾರ್ಗವಾಗಿ ಕೆ.ಆರ್.ನಗರ ಮೂಲಕ ಮೈಸೂರು ತಲುಪಿ ರಾತ್ರಿ 7.30ಕ್ಕೆ ಇದೇ ಮಾರ್ಗವಾಗಿ ಮುದ್ದನಹಳ್ಳಿ ಗ್ರಾಮಕ್ಕೆ ಬಂದು ತಂಗಲಿದೆ. ನೂತನ ಬಸ್ ಸಂಚಾರಕ್ಕೆ ಪೂಜೆ ಸಲ್ಲಿಸಿದ ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ಸದಸ್ಯರಾದ ಸಿ.ಕೆ.ಬಾಲಮನೋಹರ ಚಾಲಕ ದಿವಾಕರ ಮತ್ತು ನಿರ್ವಾಹಕ ಪುಟ್ಟೇಗೌಡ ಅವರನ್ನು ಅಭಿನಂಭಿಸಿದರು
ನಂತರ ಮಾತನಾಡಿದ ಅವರು ಕೆ.ಆರ್.ನಗರದಿಂದ ರಾತ್ರಿ ವೇಳೆ ಗ್ರಾಮಕ್ಕೆ ಬರಲು ಬಸ್ ಸೌಲಭ್ಯ ಇಲ್ಲದೇ ಗ್ರಾಮಸ್ಥರಿಗೆ ತೊಂದರೆ ಅಗಿತ್ತು ಆದ ಕಾರಣ ಶಾಸಕರಾದ ಡಿ ರವಿಶಂಕರ್ ಅವರಿಗೆ ಮನವಿ ಮಾಡಲಾಗಿ ಈ ಭಾಗದ ಕುಪ್ಪೆ, ಚಿಕ್ಕ ಕೊಪ್ಪಲು,ದೊಡ್ಡ ಕೊಪ್ಪಲು,ಹಳಿಯೂರು ಈ ಗ್ರಾಮಗಳ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಕೆ.ಆರ್.ನಗರ ಬಸ್ ಡಿಪೋ ವ್ಯವಸ್ಥಾಪಕರಿಗೆ ಸೂಚಿಸಿದ ಹಿನ್ನಲೆಯಲ್ಲಿ ಈ ಬಸ್ ಸೇವೆ ಆರಂಭಿಸಲಾಗಿದ್ದು ಇದಕ್ಕಾಗಿ ಈ ಗ್ರಾಮಸ್ಥರಗಳ ಪರವಾಗಿ ಶಾಸಕರಿಗೆ ಮತ್ತು ಡಿಪೋ ವ್ಯವಸ್ಥಾಪಕರಿಗೆಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ತಮ್ಮೇಗೌಡ, ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಪಾರ್ಥ, ಮಾಜಿ ಗ್ರಾಮ ಪಂಚಾಯತ್ ಸದಸ್ಯ ಚಿಕ್ಕಪ್ಪಾಜಿ , ಮುಖಂಡ ರಾದ ಸಿ.ಕೆ ಹೇಮಂತ ಕುಮಾರ್, ಕೃಷ್ಣೇಗೌಡ,ಟೈಲರ್ ತಮ್ಮಯ್ಯ, ಜಗದೀಶ್,ಅರುಣ್,, ಮಂಜುನಾಥ, ಲೋಹಿತ್.ಆನಂದ,ಲೋಕೆಶ್, ಈರಪ್ಪ ಸೇರಿದಂತೆ ಮುದ್ದನಹಳ್ಳಿ ಗ್ರಾಮಸ್ಥರು ಇದ್ದರು.