ಮುಂಬೈ: ಮುಂಬೈನಲ್ಲಿ ತುಂತುರು ಮಳೆ ಯಾಗಿದ್ದು, ಜುಲೈ ತಿಂಗಳಿನಲ್ಲಿ ಇದುವರೆಗೆ ದಾಖಲೆಯ 1557.8 ಮಿಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.
IMD ಯ ಸಾಂತಾಕ್ರೂಝ್ ವೀಕ್ಷಣಾಲಯ (ಮುಂಬೈನ ಉಪನಗರಗಳ ಪ್ರತಿನಿಧಿ) 2020 ರಲ್ಲಿ ಜುಲೈ ಯಲ್ಲಿ 1,502 ಮಿಮೀ ಮಳೆಯನ್ನು ದಾಖಲಿಸಿತ್ತು. ಜುಲೈ 1 ರಿಂದ ಜುಲೈ 26, 2023 ರ ಬೆಳಿಗ್ಗೆ (8.30 am) ಸಾಂತಾಕ್ರೂಝ್ ನಲ್ಲಿ (ವೀಕ್ಷಣಾಲಯ) 1,433 ಮಿಮೀ ದಾಖಲಾಗಿದೆ. ಆದ್ದರಿಂದ ಜುಲೈ 26, 2023 ರಂದು ರಾತ್ರಿ 8.30 ಕ್ಕೆ ಜುಲೈನಲ್ಲಿ ದಾಖಲಾಗಿರುವ ಹೆಚ್ಚು ಮಳೆಯ ದಾಖಲೆಯನ್ನು ಮುರಿಯಲಾಗಿದೆ. ಸಾಂತಾಕ್ರೂಝ್ ವೀಕ್ಷಣಾಲಯವು ಇಲ್ಲಿಯವರೆಗೆ ಒಟ್ಟು 1557.8 ಮಿಮೀ ದಾಖಲಿಸಿದೆ, ”ಎಂದು IMD ತಿಳಿಸಿದೆ.