Friday, April 11, 2025
Google search engine

Homeರಾಜ್ಯಸುದ್ದಿಜಾಲಸಮಾಜದ ಅಭಿವೃದ್ಧಿಯ ಕಳಕಳಿಯ ದೃಷ್ಟಿಯಿಂದ ಶ್ರೇಷ್ಠ ಕಾರ್ಯಗಳನ್ನು ಮಾಡಿದವರು ಮುಮ್ಮಡಿ ಕೃಷ್ಣರಾಜ ಒಡೆಯರ್- ಮಹೇಶ್ ಅಭಿಮತ

ಸಮಾಜದ ಅಭಿವೃದ್ಧಿಯ ಕಳಕಳಿಯ ದೃಷ್ಟಿಯಿಂದ ಶ್ರೇಷ್ಠ ಕಾರ್ಯಗಳನ್ನು ಮಾಡಿದವರು ಮುಮ್ಮಡಿ ಕೃಷ್ಣರಾಜ ಒಡೆಯರ್- ಮಹೇಶ್ ಅಭಿಮತ

ಚಾಮರಾಜನಗರ: ಮುಮ್ಮಡಿ ಕೃಷ್ಣರಾಜ ಒಡೆಯರ್ ಚಾಮರಾಜನಗರದ ನಿರ್ಮಾತೃರಾಗಿದ್ದು ಕಲೆ ,ಸಾಹಿತ್ಯ, ಕನ್ನಡ ಭಾಷೆ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯ ಪರವಾಗಿದ್ದು ಸಮಾಜದ ಅಭಿವೃದ್ಧಿಯ ಕಳಕಳಿಯ ದೃಷ್ಟಿಯಿಂದ ಶ್ರೇಷ್ಠ ಕಾರ್ಯಗಳನ್ನು ಮಾಡಿದವರು ಎಂದು ಶ್ರೀ ಚಾಮರಾಜೇಶ್ವರ ದೇವಾಲಯದ ಆಡಳಿತ ಅಧಿಕಾರಿ ಮಹೇಶ್ ತಿಳಿಸಿದರು.

ಅವರು ಅಖಿಲ ಕರ್ನಾಟಕ ಕನ್ನಡ ಮಹಾಸಭಾ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ,ಶ್ರೀಗಂಧ ಕನ್ನಡ ಯುವ ವೇದಿಕೆ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಚಾಮರಾಜನಗರದ ನಿರ್ಮಾತೃ ಮುಮ್ಮಡಿ ಕೃಷ್ಣರಾಜ ಒಡೆಯರ್ ಕೊಡುಗೆಗಳು ಹಾಗೂ ಸನ್ಮಾನ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡುತ್ತ ಚಾಮರಾಜನಗರದ ಶ್ರೀ ಚಾಮರಾಜೇಶ್ವರ ಸ್ವಾಮಿ ದೇವಾಲಯ ಸರ್ಕಾರ ಮತ್ತು ಭಕ್ತರ ನಡುವಿನ ಮೂಲಕ ಅಭಿವೃದ್ಧಿಯತ್ತ ಸಾಗುತ್ತಿದೆ. ಶ್ರೀ ಚಾಮರಾಜೇಶ್ವರ ರಥೋತ್ಸವ ವೈಭವದಿಂದ ನಡೆಯಿತು. ಮುಮ್ಮಡಿ ಕೃಷ್ಣರಾಜ ಒಡೆಯರ್ ಜಯಂತಿ ಅಂಗವಾಗಿ ಗೌರವ ಸನ್ಮಾನಕ್ಕೆ ಪಾತ್ರರಾಗಿರುವ ದೇವಾಲಯದ ಅರ್ಚಕರಾದ ಅಣ್ಣಯ್ಯ, ಬಂಡಿಗಾರ್ ಮಹೇಶ್ ಹಾಗೂ ಉತ್ಸವ ಸಮಿತಿಯ ಸತೀಶ್ ರವರಿಗೆ ಗೌರವ ಸಲ್ಲಿಸುತ್ತಿರುವುದು ಅಭಿನಂದನೆಯವಾದದ್ದು ಎಂದರು.

ಉದ್ಘಾಟನೆಯನ್ನು ಸಮಾಜ ಸೇವಕರಾದ ವೆಂಕಟ ನಾಗಪ್ಪ ಶೆಟ್ಟಿ ನೆರವೇರಿಸಿ ಕನ್ನಡ ಸಾಹಿತ್ಯ ಪರಿಷತ್ತು ಉತ್ತಮ ಕಾರ್ಯಗಳನ್ನು ನೆರವೇರಿಸಿಕೊಂಡು ಬರುತ್ತಿದೆ. ಚಾಮರಾಜನಗರದ ನಿರ್ಮಾಣಕ್ಕೆ ಕಾರಣವಾದ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಇತಿಹಾಸ ತಿಳಿಯುವ ಕಾರ್ಯಕ್ರಮ ಬಹಳ ಶ್ರೇಷ್ಠವಾದದ್ದು. ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರು ಪ್ರಾಂತ್ಯದ ಅಭಿವೃದ್ಧಿಯ ಹರಿಕಾರರು. ಚಾಮರಾಜನಗರ ಮತ್ತು ಮೈಸೂರಿನ ನಡುವೆ ಅವಿನಾ ಭಾವ ಸಂಬಂಧವಿದೆ ಎಂದು ತಿಳಿಸಿದರು.

ಅಖಿಲ ಕರ್ನಾಟಕ ಕನ್ನಡ ಮಹಾಸಭೆಯ ಅಧ್ಯಕ್ಷರಾದ ಶ್ರೀನಿವಾಸ್ ಗೌಡರವರು ಮಾತನಾಡಿ ಚಾಮರಾಜನಗರದ ಶ್ರೀ ಚಾಮರಾಜೇಶ್ವರ ದೇವಾಲಯವನ್ನು ನಿರ್ಮಾಣ ಮಾಡಿದ್ದಅರಿಕುಠಾರ ಸ್ಥಳವನ್ನು ಚಾಮರಾಜನಗರ ವೆಂದು ನಾಮಕರಣ ಮಾಡಿ ಶ್ರೀ ಚಾಮರಾಜೇಶ್ವರ ದೇವಾಲಯವನ್ನು ಸ್ಥಾಪನೆ ಮಾಡಿ ನಗರದ ಜನರ ನೆಮ್ಮದಿಗೆ ಕಾರಣರಾಗಿದ್ದಾರೆ. ಮೈಸೂರು ಸಂಸ್ಥಾನದ ಮಹಾರಾಜರನ್ನು ನೆನೆಯುವುದು ನಮ್ಮೆಲ್ಲರ ಕರ್ತವ್ಯವೂ ಆಗಿದೆ ಎಂದರು.

ಸಭೆಯ ಅಧ್ಯಕ್ಷತೆಯನ್ನು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ಮಾತನಾಡಿ ಕನ್ನಡದ ಭೋಜ ಎಂದೇ ಪ್ರಸಿದ್ಧರಾಗಿ ಕನ್ನಡ ಸಾಹಿತ್ಯ ,ಪರಂಪರೆ, ಪದ್ಯ, ಗದ್ಯ ಸಾಹಿತ್ಯ ರಚನೆಗೆ, ಅನೇಕ ಪ್ರಸಿದ್ಧ ಸಾಹಿತಿಗಳಿಗೆ ರಾಜ ಆಶ್ರಯವನ್ನು ನೀಡಿ ಬೆಳಗಿಸಿದ ಮುಮ್ಮಡಿ ಕೃಷ್ಣರಾಜ ಒಡೆಯರ್ ಕನ್ನಡದ ಬೋಜ ಎಂದೇ ನಾಮಾಂಕಿತರಾಗಿದ್ದಾರೆ. ಆಡಳಿತ ಅಭಿವೃದ್ಧಿ ,ನೀರಾವರಿ, ಕಲೆ, ಸಾಹಿತ್ಯ ಸಂಸ್ಕೃತಿ, ಧರ್ಮ ಇಂದು ಮೈಸೂರು ಪ್ರಾಂತ್ಯದಲ್ಲಿ ಅಭಿವೃದ್ಧಿಯ ಪಥಕ್ಕೆ ಸಾಗಿರುವುದಕ್ಕೆ ಕಾರಣ ಮೈಸೂರು ಸಂಸ್ಥಾನದ ಕೊಡುಗೆ ಆಗಿದೆ. ಮೈಸೂರು ಚಾಮರಾಜನಗರ ತಾಯಿ ಮಕ್ಕಳ ಸಂಬಂಧವೆಂದು ತಿಳಿಸಿದರು. ಕನ್ನಡ ಸಾಹಿತ್ಯ ಪರಿಷತ್ತು ರಚನೆಯಾದದ್ದೇ ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್ ಎಂ ವಿಶ್ವೇಶ್ವರಯ್ಯ ಮತ್ತು ಸರ್ ಮಿರ್ಜಾ ಇಸ್ಮಾಯಿಲ್ ರವರ ದೂರದೃಷ್ಟಿಯ ಫಲವಾಗಿ ಇಂದು ನಾಡಿನಾದ್ಯಂತ ಶತಮಾನದ ಸಂಸ್ಥೆಯಾಗಿ ಸೇವೆಯನ್ನು ಸಲ್ಲಿಸುತ್ತಿದೆ ಎಂದರು.

ಮುಮ್ಮಡಿ ಕೃಷ್ಣರಾಜ ಒಡೆಯರ್ ಕುರಿತು ಬರಹಗಾರ ಎಸ್ ಲಕ್ಷ್ಮೀನರಸಿಂಹ, ಮಾಜಿ ನಗರಸಭಾ ಸದಸ್ಯ ಗಣೇಶ್ ದೀಕ್ಷಿತ್ ಮಾತನಾಡಿದರು.

ಮುಮ್ಮಡಿ ಕೃಷ್ಣರಾಜ ಒಡೆಯರ್ ಜಯಂತಿ ಅಂಗವಾಗಿ ಬಂಡಿಗಾರ್ ಮಹೇಶ್, ಅರ್ಚಕ ಅಣ್ಣಯ್ಯ, ಉತ್ಸವ ಸಮಿತಿಯ ಸತೀಶ್ ಕುಮಾರ್ ರವರನ್ನು ಗೌರವ ಪೂರಕವಾಗಿ ಸನ್ಮಾನಿಸಲಾಯಿತು .

ಸಭೆಯಲ್ಲಿ ಮಾಜಿ ನಗರಸಭಾ ಅಧ್ಯಕ್ಷ ಮಹದೇವ ನಾಯಕ, ಸುರೇಶ್ ನಾಯಕ ,ದೇಶಿ ಶೆಟ್ಟರು ಕನ್ನಡ ಚಳುವಳಿಗಾರರಾದ ಬಣ್ಣದ ಹುಂಡಿ ರಾಜು ರವಿಚಂದ್ರ ಪ್ರಸಾದ್ ಮುಖಂಡರಾದ ಬಾಲಸುಬ್ರಮಣ್ಯ, ಸುರೇಶ್ ಗೌಡ ,ಚಾ ವೆಂ ರಾಜ್ ಗೋಪಾಲ್, ಶಿವಲಿಂಗ ಮೂರ್ತಿ ಆನಂದ್ , ಮಾದಣ್ಣ, ಜಯಕುಮಾರ್,ರಾಜುಗೌಡ ಆಟೋ ಮಂಜು ,ಪ್ರವೀಣ, ಇದ್ದರು

RELATED ARTICLES
- Advertisment -
Google search engine

Most Popular