ಬರೇಲಿ; ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ಕಳೆದ ೧೩ ತಿಂಗಳಲ್ಲಿ ೯ ಮಹಿಳೆಯರನ್ನು ಹತ್ಯೆಗೈದ ಖತರ್ನಾಕ್ ‘ಸೈಕೋ ಕಿಲ್ಲರ್’ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬರೇಲಿಯ ವಿವಿಧ ಭಾಗಗಳಲ್ಲಿ ನಡೆದ ಮಹಿಳೆಯ ಕೊಲೆಗಳಲ್ಲಿ ಒಂದೇ ಮಾದರಿಯನ್ನು ಪೊಲೀಸರು ಗಮನಿಸಿದಾಗ ಈ ಪ್ರಕರಣವು ಮೊದಲು ಬೆಳಕಿಗೆ ಬಂದಿತು. ಕಳೆದ ೧೩ ತಿಂಗಳುಗಳಲ್ಲಿ ೪೦ ರಿಂದ ೬೫ ವರ್ಷ ವಯಸ್ಸಿನ ೯ ಮಹಿಳೆಯರು ಒಂದೇ ರೀತಿಯ ಪರಿಸ್ಥಿತಿಯಲ್ಲಿ ಸಾವನ್ನಪ್ಪಿದ್ದಾರೆ. ಶಾಹಿ, ಶೀಶ್‌ಗಢ್ ಮತ್ತು ಶೇರ್‌ಗಢ್ ಪ್ರದೇಶಗಳಲ್ಲಿ ಕೊಲೆಗಳು ನಡೆದಿವೆ. ಕೊಲೆಯಾದ ಮಹಿಳೆಯರ ಶವಗಳು ಕಬ್ಬಿನ ಗದ್ದೆಗಳಲ್ಲಿ ಕಂಡುಬಂದಿತ್ತು. ಅವರ ಬಟ್ಟೆಗಳು ಅಸ್ತವ್ಯಸ್ತ ಸ್ಥಿತಿಯಲ್ಲಿದ್ದರೂ ಲೈಂಗಿಕ ದೌರ್ಜನ್ಯದ ಯಾವುದೇ ಪುರಾವೆ? ಕಂಡುಬಂದಿರಲಿಲ್ಲ. ಎಲ್ಲಾ ಪ್ರಕರಣಗಳನ್ನು ಅವಲೋಕಿಸಿದಾಗ ಮಹಿಳೆಯರು ಧರಿಸಿದ್ದ ಸೀರೆಗಳನ್ನೇ ಬಳಸಿ ಕತ್ತು ಹಿಸುಕಿದ್ದು ಎಲ್ಲಾ ಕೊಲೆಯಲ್ಲಿ ಸಾಮತ್ಯೆ ಕಂಡುಬಂದಿತ್ತು.
ಇದರ ಬೆನ್ನಲ್ಲೇ ವ್ಯಕ್ತಿಯೊಬ್ಬರು ನೀಡಿದ ಮಾಹಿತಿ ಮೇರೆಗೆ ಅನುಮಾನದಿಂದ ಕುಲದೀಪ್ ಎಂಬಾತನನ್ನು ಬಂಧಿಸಿ ವಿಚಾರಣೆ ಮಾಡಲಾಗಿತ್ತು. ಈ ವೇಳೆ ತಾನು ಮಹಿಳೆಯರನ್ನು ಕೊಂದಿರುವುದಾಗಿ ಬಾಯ್ಬಿಟ್ಟಿದ್ದಾನೆ. ಮಹಿಳೆಯರನ್ನ ಸೆಕ್ಸ್‌ಗೆ ಪೀಡಿಸುತ್ತಿದ್ದ ಸೈಕೋ ಒಪ್ಪದಿದ್ದಾಗ ಅವರನ್ನು ಸೀರೆಯಿಂದ ಬಿಗಿದು ಕೊಲೆ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.