ಮದ್ದೂರು : ತಾಲ್ಲೂಕಿನ ಕುದರಗುಂಡಿ ಕಾಲೊನಿಯ ಮಲ್ಲಯ್ಯ ನಗರದಲ್ಲಿ ಯುವಕನೊಬ್ಬನನ್ನು ಸೋಮವಾರ ಮನೆಯಲ್ಲಿಯೇ ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಶಿವಾನಂದ (೧೯) ಕೊಲೆಯಾದ ಯುವಕ. ಈತ ತನ್ನ ಕೊಠಡಿಯಿಂದ ಹೊರಗೆ ಬಂದಿರಲಿಲ್ಲ. ಆಗ ಮೊಬೈಲ್ ಕರೆ ಮಾಡಿದಾಗ ಸ್ವಿಚ್ ಆಫ್ ಬಂದಿದೆ. ಅನುಮಾನಗೊಂಡು ಕೊಠಡಿಯಲ್ಲಿ ನೋಡಿದಾಗ ಕೊಲೆಯಾಗಿರುವುದು ಗೊತ್ತಾಗಿದೆ. ಹಂತಕರು ಈತನನ್ನು ಮನೆಯಲ್ಲೇ ಸೋಮವಾರ ಕೊಲೆಗೈದು ಪರಾರಿಯಾಗಿದ್ದಾರೆ ರಾತ್ರಿಯಾದರು ಯುವಕ ಮನೆಯಿಂದ ಹೊರಬಾರದೇ ಇದ್ದಾಗ ಹಾಗೂ ಮೊಬೈಲ್ ಸ್ವಿಚ್ ಆಫ್ ಆಗಿದ್ದರಿಂದ ಸಂಬಂಧಿಕರು ಅನುಮಾನಗೊಂದು ಕೊಠಡಿಯಲ್ಲಿ ಯುವಕನನ್ನು ಯಾರೋ ಕೊಲೆಮಾಡಿರುವ ಕೃತ್ಯ ಬೆಳಕಿಗೆ ಬಂದಿದೆ. ಯುವಕನ ಕುತ್ತಿಗೆಗೆ ಹಗ್ಗ ಬಿಗಿದು ನಂತರ ಮಾರಕಾಸ್ತ್ರ ದಿಂದ ಹಲ್ಲೆ ಮಾಡಿ ಹತ್ಯೆ ಮಾಡಲಾಗಿದೆ.
ಗಾರೆ ಕೆಲಸ ಮಾಡಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದ ಶಿವಾನಂದ ಸೋಮವಾರ ರಾತ್ರಿ ಮನೆಯೊಂದರ ಕೊಠಡಿಯಲ್ಲಿ ನಿದ್ರಿಸುತ್ತಿದ್ದುಈ ವೇಳೆ ದುಷ್ಕರ್ಮಿಗಳು ಕುತ್ತಿಗೆಗೆ ಹಗ್ಗ ಬಿಗಿದು ಮಾರಕಾಸ್ತ್ರ ದಿಂದ ದೇಹದ ನಾನಾ ಭಾಗದ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಹತ್ಯೆ ನಡೆದಿದೆ ಎಂದು ಶಂಕಿಸಲಾಗಿದ್ದು ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಯತೀಶ್, ಡಿವೈಎಸ್. ಪಿ ಕೃಷ್ಣಪ್ಪ ಭೇಟಿ ನೀಡಿದ್ದರು. ಮದ್ದೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಕೊಲೆಗೈದು ಪರಾರಿಯಾಗಿರುವವರ ಪತ್ತೆಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.