ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ವ್ಯಕ್ತಿ ಒಬ್ಬನನ್ನು ಕೊಲೆ ಮಾಡಿ ಚೀಲದಲ್ಲಿ ತುಂಬಿ ಕಾವೇರಿ ನದಿಗೆ ಬಿಸಾಕಿದ್ದು ಶವವು
ಮೈಸೂರು ಜಿಲ್ಲೆ ಕೆ.ಆರ್ ನಗರ ಪೊಲೀಸ್ ಠಾಣಾ ಸರಹದ್ದಿನ ಮೂಲೆಪೆಟ್ಲು ಗ್ರಾಮದ ಸಮೀಪದ ಕೆಆರ್.ಎಸ್ ಹಿನ್ನೀರಿನಲ್ಲಿ ಪತ್ತೆಯಾಗಿದೆ. ನದಿಯಲ್ಲಿ ದೊರೆತಿರುವ ಅಪರಿಚಿತ ಗಂಡಸಿನ ಶವವು ದೊರೆತಿದ್ದು , ಸುಮಾರು 30-35 ವರ್ಷ ವಯಸ್ಸಾಗಿದ್ದು ಯಾವುದೋ ಆಯುಧದಿಂದ ಕೊಲೆ ಮಾಡಿರುವ ದುಷ್ಕರ್ಮಿಗಳು ಶವವನ್ನು ಚೀಲದಲ್ಲಿ ಕಟ್ಟಿ ಬಿಸಾಕಿ ಪರಾರಿಯಾಗಿದ್ದಾರೆ.
ಈ ಬಗ್ಗೆ ಸಾರ್ವಜನಿಕರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಭೇ ನೀಡಿದ ಕೆ.ಆರ್.ನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸಂತೋಷ್, ಪಿಎಸ್ ಐ ಗಳಾದ ಧನರಾಜು,ನಂಜಪ್ಪ ಸಿಬ್ಬಂದಿಗಳಾದ ಧನಂಜಯ, ಜವರೇಶ್,ಮಂಜು,ದೇವರಾಜು ಪರಿಶೀಲನೆ ನಡೆಸಿದರು.
ಈ ವ್ಯಕ್ತಿಯನ್ನು ಬೇರೆ ಎಲ್ಲೋ ಕೊಲೆ ಮಾಡಿ ನಂತರ ಚೀಲದಲ್ಲಿ ಕಟ್ಟಿ ಕಾವೇರಿ ನದಿಗೆ ಬಿಸಾಡಿ ಹೋಗಿರುವ ಶಂಕೆ ವ್ಯಕ್ತವಾಗಿದ್ದು ಮೃತನ ಕೈಯಲ್ಲಿ ಸೂಪರ್ ಮ್ಯಾನ್ , ಅಮ್ಮ ಎಸ್,ಉಪೇಂದ್ರ,VR46 the doctor Legend ಎಂದು ಹಚ್ಚೆ ಹಾಗೂ ಬಲಕೈಯಲ್ಲಿ ಸಿಂಹದ ಚಿತ್ರ ಹಾಗೂ ಶಿಲುಬೆ ಚಿತ್ರ ಮತ್ತು ಹೃದಯದ ಒಳಗೆ AM ಎಂದು ಹಾಕಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಮೃತನ ಶವವನ್ನು ಮೈಸೂರಿನ ಕೆ.ಆರ್.ಆಸ್ವತ್ರೆಯ ಶವಗಾರಕ್ಕೆ ಸಾಗಿಸಲಾಗಿದ್ದು, ಯಾರಾದರು ವಾರಸುದಾರರು ಇದ್ದರೆ ಕೆ.ಆರ್.ನಗರ ಪೊಲೀಸರನ್ನ ಸಂಪರ್ಕಿಸುವಂತೆ ಕೋರಲಾಗಿದೆ.