Sunday, April 20, 2025
Google search engine

Homeಅಪರಾಧಕತ್ತು ಹಿಸುಕಿ ಪತ್ನಿಯ ಕೊಲೆ: ಆರೋಪಿ ಪತಿ ಬಂಧನ

ಕತ್ತು ಹಿಸುಕಿ ಪತ್ನಿಯ ಕೊಲೆ: ಆರೋಪಿ ಪತಿ ಬಂಧನ

ದಾಂಡೇಲಿ: ಪತಿ-ಪತ್ನಿಯ ಜಗಳದಲ್ಲಿ ಪತಿ ಪತ್ನಿಯ ಕತ್ತು ಹಿಸುಕಿ ಕೊಲೆಗೈದ ಘಟನೆ ಇಲ್ಲಿನ ಗಾಂಧಿನಗರದ ರೈಲ್ವೆ ಹಳಿ ಪ್ರದೇಶ ವ್ಯಾಪ್ತಿಯಲ್ಲಿ ನಡೆದಿದೆ.

ಗಾಂಧಿನಗರದ ರೈಲ್ವೆ ಹಳಿ ಪ್ರದೇಶ ವ್ಯಾಪ್ತಿಯ ನಿವಾಸಿ ಪಾತಿಮಾ (42) ಕೊಲೆಯಾದ ಮಹಿಳೆ. ಇವರ ಪತಿ, ಆಟೋ ಚಾಲಕ ಶೇಖ ಸಾಬ್ ಕೊಲಡ ಮಾಡಿದಾತ.

ಆಟೋ ಚಾಲಕ, ಶೇಖ ಸಾಬ್ ಪ್ರತಿದಿನ ಪತ್ನಿಯೊಂದಿಗೆ ಜಗಳ ಮಾಡುತ್ತಿದ್ದನು. ಗುರುವಾರ ಸಂಜೆ ಇವರುಗಳ ಜಗಳ ತಾರಕಕ್ಕೇರಿ, ಪತಿ ತನ್ನ ಪತ್ನಿಯ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾನೆ. ಶೇಖ್ ಸಾಬ್ ಕುಡಿದು ಬಂದು ಪ್ರತಿದಿನ ಜಗಳ ಮಾಡುತ್ತಿದ್ದನು ಎಂದು ತಿಳಿದು ಬಂದಿದೆ.

ಘಟನಾ‌ ಸ್ಥಳಕ್ಕೆ ನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆಗೈದ ಆರೋಪಿ ಶೇಖ್ ಸಾಬ್ ನನ್ನು ಬಂಧಿಸಿ ಶುಕ್ರವಾರ ನಸುಕಿನ ವೇಳೆ 3 ಗಂಟೆಯವರೆಗೆ ವಿಚಾರಣೆ ನಡೆಸಿದ್ದಾರೆ. ವಿಚಾರಣೆಯ ಸಂದರ್ಭದಲ್ಲಿ ಕೊಲೆಗೈದಿರುವುದನ್ನು ಒಪ್ಪಿಕೊಂಡಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಮೃತದೇಹ ಸಾರ್ವಜನಿಕ ಆಸ್ಪತ್ರೆಯ ಶವಗಾರದಲ್ಲಿದ್ದು, ಶುಕ್ರವಾರ ಬೆಳಿಗ್ಗೆ ಮರಣೋತ್ತರ ಪರೀಕ್ಷೆ ನಡೆಯಲಿದೆ. ಈ ಘಟನೆಗೆ ಸಂಬಂಧಪಟ್ಟಂತೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES
- Advertisment -
Google search engine

Most Popular