ತುಮಕೂರು: ತುಮಕೂರು ಜಿಲ್ಲೆ ಕುಣಿಗಲ್ ಪಟ್ಟಣದ ದಿವ್ಯ ಲಾಡ್ಜ್ ನಲ್ಲಿ ಈ ಘಟನೆ ನಡೆದಿದ್ದು ಕೊಲೆಯಾದ ಲಕ್ಷ್ಮಮ್ಮ ಮಾಗಡಿ ತಾಲೂಕಿನ ತಾವರೆಕೆರೆ ಮೂಲದ ಮಹಿಳೆಯಾಗಿದ್ದಾರೆ. ಮಂಜುನಾಥ್ ಹಾಗೂ ಲಕ್ಷ್ಮಮ್ಮ ನೆನ್ನೆ ರಾತ್ರಿ ಲಾಡ್ಜ್ ನಲ್ಲಿ ಜೊತೆಯಾಗಿ ತಂಗಿದ್ದರು. ಮಂಜುನಾಥ್ ಮೂಲತಹ ದಾವಣಗೆರೆ ನಿವಾಸಿಯಾಗಿದ್ದು ಕೊಲೆ ಮಾಡಿದ ಬಳಿಕ ಪೊಲೀಸರಿಗೆ ಶರಣಾಗಿದ್ದಾನೆ .ಕೊಲೆಯಾದ ಲಕ್ಷ್ಮಮ್ಮ ವಿವಾಹವಾಗಿದ್ದು ಗಂಡನಿಂದ ದೂರಾಗಿದ್ದಳು ಎಂದು ತಿಳಿದುಬಂದಿದೆ .ಕುಣಿಗಲ್ ಪೊಲೀಸರಿಂದ ಪ್ರಕರಣ ದಾಖಲಾಗಿದ್ದು ,ತನಿಖೆ ಮುಂದುವರೆದಿದೆ.