ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಸಕ್ಕರೆ ಕಾರ್ಖಾನೆ ಸೇರಿದಂತೆ ಹತ್ತಾರು ಕೈಗಾರಿಕೆಗಳನ್ನು ಸ್ಥಾಪಿಸಿ ರೈತರು ಮತ್ತು ಕಾರ್ಮಿಕರ ಬದುಕಿಗೆ ಮಾಜಿ ಸಚಿವ ಮುರುಗೇಶ್ ನಿರಾಣಿ ಅವರು ದಾರಿ ದೀಪವಾಗಿದ್ದಾರೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಉಪಾದ್ಯಕ್ಷ ಅಂಕನಹಳ್ಳಿ ತಿಮ್ಮಪ್ಪ ಹೇಳಿದರು.
ಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆ ಶ್ರೀರಾಮ ಸಕ್ಕರೆ ಕಾರ್ಖಾನೆಯ ಅವರಣದಲ್ಲಿ ಏರ್ಪಡಿಸಿದ್ದ ಮಾಜಿ ಸಚಿವ ಮುರುಗೇಶ್ ನಿರಾಣಿ ಅವರ 60ನೇ ವರ್ಷದ ಹುಟ್ಟುಹಬ್ಬ ಅಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಮುರಗೇಶ್ ನಿರಾಣಿ ರಾಜಕಾರಣದ ಜೊತೆಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 9 ಕ್ಕು ಹೆಚ್ಚು ಸಕ್ಕರೆ ಕಾರ್ಖಾನೆಗಳನ್ನು ಸ್ಥಾಪಿಸಿ ಕಬ್ಬು ಬೆಳೆಗಾರರ ಹಿತಕಾಯುವ ಮೂಲ ಯಶಸ್ವಿ ಕೈಗಾರಿಕಾ ಉದ್ಯಮಿಯಾಗಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಕೈಗಾರಿಕಾ ಕೇಂದ್ರಗಳನ್ನು ಸ್ಥಾಪಿಸಿ ರಾಜ್ಯದ ರೈತರು ಕಾರ್ಮಿಕರಿಗೆ ಶಕ್ತಿ ತುಂಬಲು ನಿರಾಣಿ ಅವರಿಗೆ ದೇವರು ಶಕ್ತಿ ನೀಡಿಲಿ ಎಂದರು.

ಮುಚ್ಚುವ ಹಂತದಲ್ಲಿದ್ದ ಚುಂಚನಕಟ್ಟೆ ಶ್ರೀರಾಮ ಸಕ್ಕರೆ ಕಾರ್ಖಾನೆಯನ್ನು ಗುತ್ತಿಗೆ ಪಡೆಯುವ ಮೂಲಕ ಮುರುಗೇಶ್ ನಿರಾಣಿ ಅವರು ಜಿಲ್ಲೆಯ ಕಬ್ಬು ಬೆಳೆಗಾರ ರೈತರ ಪರವಾಗಿ ನಿಂತಿದ್ದು ಇವರ ಸಮಸ್ತ ಕಬ್ಬು ಬೆಳೆಗಾರ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಕಂಚಗಾರಕೊಪ್ಪಲು ಶಿವಣ್ಣ, ಸಂಘದ ಪ್ರಮೀಳ ,ಕಾರ್ಖಾನೆಯ ಎಚ್.ಅರ್.ಪ್ರಶನ್ನ ಕುಮಾರ್, ಕಬ್ಬು ವಿಭಾಗದ ಎಜಿಎಂ ವಿರೇಶ್ ಪುರಾಣಿಕ್, ವಿಭಾಗಾಧಿಕಾರಿ ಶೇಖರ್, ಭದ್ರತಾಧಿಕಾರಿಗಳಾ ದುಂಡಪ್ಪ, ಚನ್ನಕೇಶವ್, ಪಾಪೇಗೌಡ, ಕಿರಣ್, ಕಾರ್ತಿಕ್, ಸಿಬ್ಬಂದಿಗಳಾದ ಮೋಹನ್ ಕುಮಾರ್, ರಂಗೇಗೌಡ, ಡಿ.ಕೆ.ಕೊಪ್ಪಲು ಆನಂತ್ ಕುಮಾರ್ ಬಾಬು, ಬ್ಯಾಂಕ್ ಮಹೇಶ್, ಕಸ್ತೂರಿ, ಮಾಧುರಿ, ಅರ್ಚನಾ, ಪರಮೇಶ್,ಕಿರಣ್,ಭರತ್, ಮಂಜುಶೆಟ್ಟಿ, ಭಾಗ್ಯಮ್ಮ, ಬಾಲು, ದಿನೇಶ್, ಪ್ರಸಾದ್, ಜಯರಾಮ್, ರವಿ, ಸಿದ್ದರಾಮ್, ಮಧು, ಸಂಪತ್, ಸೇರಿದಂತೆ ಮತ್ತಿತರರು ಹಾಜರಿದ್ದರುಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಕಂಚಗಾರಕೊಪ್ಪಲು ಶಿವಣ್ಣ, ಸಂಘದ ಪ್ರಮೀಳ ,ಕಾರ್ಖಾನೆಯ ಎಚ್.ಅರ್.ಪ್ರಶನ್ನ ಕುಮಾರ್, ಕಬ್ಬು ವಿಭಾಗದ ಎಜಿಎಂ ವಿರೇಶ್ ಪುರಾಣಿಕ್, ವಿಭಾಗಾಧಿಕಾರಿ ಶೇಖರ್, ಭದ್ರತಾಧಿಕಾರಿಗಳಾ ದುಂಡಪ್ಪ, ಚನ್ನಕೇಶವ್, ಪಾಪೇಗೌಡ, ಕಿರಣ್, ಕಾರ್ತಿಕ್, ಸಿಬ್ಬಂದಿಗಳಾದ ಮೋಹನ್ ಕುಮಾರ್, ರಂಗೇಗೌಡ, ಡಿ.ಕೆ.ಕೊಪ್ಪಲು ಆನಂತ್ ಕುಮಾರ್ ಬಾಬು, ಬ್ಯಾಂಕ್ ಮಹೇಶ್, ಕಸ್ತೂರಿ, ಮಾಧುರಿ, ಅರ್ಚನಾ, ಪರಮೇಶ್,ಕಿರಣ್,ಭರತ್, ಮಂಜುಶೆಟ್ಟಿ, ಭಾಗ್ಯಮ್ಮ, ಬಾಲು, ದಿನೇಶ್, ಪ್ರಸಾದ್, ಜಯರಾಮ್, ರವಿ, ಸಿದ್ದರಾಮ್, ಮಧು, ಸಂಪತ್, ಸೇರಿದಂತೆ ಮತ್ತಿತರರು ಹಾಜರಿದ್ದರು.