Saturday, April 19, 2025
Google search engine

Homeರಾಜ್ಯಸುದ್ದಿಜಾಲಅಣಬೆ ತಯಾರಿಕಾ ಘಟಕ:ದುರ್ವಾಸನೆ ಬೀರದಂತೆ ಆಧುನಿಕ ವ್ಯವಸ್ಥೆ ಅಳವಡಿಕೆ -ಜೆ. ಆರ್. ಲೋಬೊ ಸ್ಪಷ್ಟನೆ

ಅಣಬೆ ತಯಾರಿಕಾ ಘಟಕ:ದುರ್ವಾಸನೆ ಬೀರದಂತೆ ಆಧುನಿಕ ವ್ಯವಸ್ಥೆ ಅಳವಡಿಕೆ -ಜೆ. ಆರ್. ಲೋಬೊ ಸ್ಪಷ್ಟನೆ

ಮಂಗಳೂರು(ದಕ್ಷಿಣ ಕನ್ನಡ): ದುರ್ವಾಸನೆ ಬೀರುತ್ತಿದೆ ಎಂದು ಇತ್ತೀಚೆಗೆ ಮಂಗಳೂರಿನ ವಾಮಂಜೂರಿನ ವೈಟ್ ಗ್ರೊ ಅಗ್ರಿ ಎಲ್ಎಲ್‌ಪಿ ಅಣಬೆ ತಯಾರಿಕಾ ಘಟಕದ ವಿರುದ್ಧ ಪ್ರತಿಭಟನೆ ನಡೆಸಲಾಗಿತ್ತು. ಇದೀಗ ದುರ್ವಾಸನೆ ಬೀರದಂತೆ ಆಧುನಿಕ ವ್ಯವಸ್ಥೆಯನ್ನು ಅಳವಡಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುತ್ತಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ, ಮಾಜಿ ಶಾಸಕ ಜೆ. ಆರ್. ಲೋಬೊ ಸ್ಪಷ್ಟನೆ ನೀಡಿದ್ದಾರೆ. ಅವರು ಸಂಸ್ಥೆಯ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಮಂಗಳೂರು ನಗರದ ಹೊರವಲಯದ ತಿರುವೈಲ್ ಗ್ರಾಮದಲ್ಲಿರೋ ವೈಟ್ ಗ್ರೋವ್ ಅಗ್ರಿ ಎಲ್.ಎಲ್.ಪಿ ಸಂಸ್ಥೆಯು ಸಾರ್ವಜನಿಕರಿಗೆ ತೊಂದರೆಯಾಗದಂತೆ ಹಾಗೂ ಉನ್ನತ ತಂತ್ರಜ್ಞಾನದ ಮೂಲಕ ಅಣಬೆಯ ತೋಟಗಾರಿಕಾ ಕೃಷಿಯನ್ನು ಮಾಡಿ ನಮ್ಮ ಯುವಕರಿಗೆ ಕೃಷಿ ಕ್ಷೇತ್ರದಲ್ಲಿ ಆಸಕ್ತಿ ವಹಿಸಲು ಪ್ರೋತ್ಸಾಹಿಸಲು ಉದ್ದೇಶಿಸಿದೆ ಎಂದರು. ಇಲ್ಲಿ ಸ್ಥಾಪನೆ ಮಾಡುವ ಮೊದಲು ದೇಶದ ವಿವಿಧ ಭಾಗಗಳಲ್ಲಿ ಇರುವ ಸುಮಾರು ಇಪ್ಪತ್ತು ಹಿರಿಯ ಮತ್ತು ಕಿರಿಯ ಘಟಕಗಳಲ್ಲಿ ಮಾಡುವ ಪ್ರಕ್ರಿಯೆಯನ್ನು ಗಮನಿಸಲಾಗಿದೆ. ಆದರೆ ಈ ರೀತಿ ವಾಸನೆ ಬರುವ ಸಮಸ್ಯೆ ಎಲ್ಲಿಯೂ ಕಂಡು ಬಂದಿಲ್ಲ. ಅದೆಲ್ಲ ಘಟಕಗಳಲ್ಲಿ ಮುಕ್ತ ವಾತಾವರಣದಲ್ಲಿ ಕಾಂಪೋಸ್ಟ್ ಮಾಡಲಾಗುತಿತ್ತು. ಆದರೆ ಇಲ್ಲಿ ದೇಶದಲ್ಲಿ ಪ್ರಥಮವಾಗಿ ಅಣಬೆ ಘಟಕಕ್ಕೆ ಈ ರೀತಿಯ ಯಂತ್ರೊಪಕರಣಗಳನ್ನು ಅಳವಡಿಸಿ ಶುದ್ಧ ಗಾಳಿ ಹೊರಬರುವಂತೆ ಕ್ರಮ ಕೈಗೊಳ್ಳಲಾಗಿದೆ. ಇನ್ನು ಮುಂದೆಯೂ ಕೂಡ ಯಾವುದೇ ರೀತಿಯಲ್ಲಿ ತೊಂದರೆ ಆಗದಂತೆ ಸೂಕ್ತ ಕ್ರಮ ಕೈಗೊಳ್ಳಲು ಸಂಸ್ಥೆಯು ಮುಂದಾಗಿದೆ ಎಂದರು.
ಸುಮಾರು ಮೂರು ಎಕರೆ ಪ್ರದೇಶದಲ್ಲಿ ಈ ಘಟಕವು ಕಾರ್ಯಾಚರಣೆ ಮಾಡುತ್ತಿದ್ದು ಸುಮಾರು 170 ಮಂದಿ ಕೆಲಸ ನಿರ್ವಹಿಸುತ್ತಿದ್ದಾರೆ. ಈ ಪೈಕಿ 50 ಮಂದಿ ಸ್ಥಳೀಯರಾಗಿರುತ್ತಾರೆ. ವಾಸನೆ ಕುರಿತು ಸಾರ್ವಜನಿಕರ ದೂರಿನ ಮೇಲೆ ಜಿಲ್ಲಾಧಿಕಾರಿಯು ಕಾಂಪೋಸ್ಟ್ ಘಟಕವನ್ನು ತಾತ್ಕಾಲಿಕವಾಗಿ ನಿಲ್ಲಿಸಲು ಇತ್ತೀಚೆಗೆ ಆದೇಶ ಮಾಡಿದ್ದು ಅದರ ನಂತರ ಗಾಳಿಯನ್ನು ಶುದ್ದೀಕರಣಗೊಳಿಸಲು ಯಂತ್ರೋಪಕರಣಗಳನ್ನು ಆಳವಡಿಸಿದ ನಂತರ ಇದೆ ಜುಲೈ 31ರಿಂದ ಆಗಸ್ಟ್ 19 ರ ವರೆಗೆ ಕಾಂಪೋಸ್ಟ್ ಘಟಕ ಆರಂಭಿಸಿ ಈ ಯಂತ್ರೋಪಕರಣಗಳು ಕೆಲಸ ನಿರ್ವಹಿಸುವ ವಿಚಾರದಲ್ಲಿ ಮತ್ತು ಗಾಳಿ ಶುದ್ದೀಕರಣ ವಿಚಾರದಲ್ಲಿ ಸಮೀಕ್ಷೆ ನಡೆಸಲು ಆದೇಶಿಸಿದೆ.

ಸರಕಾರದ ಸ್ವತಂತ್ರ ಸಂಸ್ಥೆಗಳಾದ ವಾಯುಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ NABL ಪ್ರಯೋಗ ಶಾಲೆ ದೈನಂದಿನ ರೀತಿಯಲ್ಲಿ ಪರೀಕ್ಷೆಗಳನ್ನು ನಡೆಸುತಿದ್ದು ಇದನ್ನು ದಾಖಲೆ ಮಾಡುತ್ತಿದೆ. ಈ ದಾಖಲೆಗಳನ್ನು ಮಂಗಳೂರಿನ ನಗರ ಪಾಲಿಕೆಯ ಆಯುಕ್ತರ ಅಧ್ಯಕ್ಷತೆಯಲ್ಲಿ ನೇಮಕವಾಗಿರುವ ತಜ್ಞರ ಸಮಿತಿಗೆ ನೀಡಲಾಗುತ್ತಿದೆ. ತಜ್ಞರ ಸಮಿತಿ ಎಲ್ಲವನ್ನು ಪರಿಶೀಲಿಸಿ ಜಿಲ್ಲಾಧಿಕಾರಿಯವರಿಗೆ ವರದಿ ನೀಡುತ್ತದೆ ಎಂದು ಅವರು ತಿಳಿಸಿದರು.

RELATED ARTICLES
- Advertisment -
Google search engine

Most Popular