ವಿಧಾನಸಭೆ: ನನಗೆ ಜೀವ ಬೆದರಿಕೆ ಇದೆ, ರಕ್ಷಣೆ ಕೊಡಿ. ನಾನು ಇಲ್ಲಿಂದ (ವಿಧಾನಸೌಧದಿಂದ) ಮನೆಗೆ ಹೋಗಲು ಜೀವಕ್ಕೆ ರಕ್ಷಣೆ ಕೊಡಿ…
ಇದು ಬಿಜೆಪಿಯ ಮುನಿರತ್ನ ಸಭಾಧ್ಯಕ್ಷ ಯು.ಟಿ. ಖಾದರ್‌ರನ್ನು ಒತ್ತಾಯಿಸಿದ ಪರಿ. ಮಂಗಳವಾರ ಬಜೆಟ್ ಮೇಲಿನ ಚರ್ಚೆ ವೇಳೆ ಮಾತಿಗಿಳಿದ ಮುನಿರತ್ನ, ನನಗೆ ರಕ್ಷಣೆ ಕೊಡಿ ಅಂತ ಪೋಲಿಸ್ ಆಯುಕ್ತರಿಗೆ ಪತ್ರ ಬರೆದಿ ದ್ದೇನೆ. ಗುಪ್ತಚರ ಇಲಾಖೆ ಹೇಮಂತ್ ನಿಂಬಾಳ್ಕರ್‌ಗೂ ಮನವಿ ಮಾಡಲಾಗಿದೆ. ಆದರೂ ಕೊಟ್ಟಿಲ್ಲ. ರಕ್ಷಣೆ ಕೊಡುವ ಭರವಸೆ ನೀಡಿದರೆ ನಾನು ಮನೆಗೆ ಹೋಗುತ್ತೇನೆ’ ಎಂದು ಆಗ್ರಹಿಸಿದರು.
ಈ ವೇಳೆ ಸಚಿವ ಕೃಷ್ಣ ಬೈರೇಗೌಡ, “ಯಾವ ವಿಷಯದ ಮೇಲೆ ಮಾತನ್ನಾಡಬೇಕು ಎಂಬುದಕ್ಕೆ ಮೊದಲು ಬರಹ ದಲ್ಲಿ ಕೊಡಿ’ ಎಂದರು. ಆಗ, ಮುನಿರತ್ನ ನೆರವಿಗೆ ಧಾವಿಸಿದ ವಿಪಕ್ಷದ ಅಶೋಕ, ಸುನೀಲ್ ಕುಮಾರ್, “ಗನ್‌ಮ್ಯಾನ್ ವಾಪಸ್ ಬಗ್ಗೆ ಮಾತನಾಡುತ್ತಿದ್ದಾರೆ. ಒಬ್ಬ ಶಾಸಕ ಜೀವ ರಕ್ಷಣೆಗಾಗಿ ಅಂಗಲಾಚುತ್ತಿದ್ದಾರೆ’ ಎಂದ ರು.
“ಪೋಲಿಸ್ ರಕ್ಷಣೆ ಬಗ್ಗೆ ಹೇಳಿದ್ದೀರಿ ಬರಹದಲ್ಲಿ ಕೊಡಿ, ಮಾತನಾಡಲು ಅವಕಾಶ ಕೊಡುತ್ತೇನೆ’ ಎಂದು ಸ್ಪೀಕರ್ ಭರವಸೆ ನೀಡುವ ಮೂಲಕ ಚರ್ಚೆಗೆ ತೆರೆ ಎಳೆದರು.