Monday, April 21, 2025
Google search engine

Homeರಾಜ್ಯಸುದ್ದಿಜಾಲನನ್ನ ನಿರ್ಲಕ್ಷ್ಯ, ಕಾಂಗ್ರೆಸ್ ಪಕ್ಷದ ಮತಗಳಿಗೆ ಮಾರಕ: ಡಿಎನ್‌ಎನ್

ನನ್ನ ನಿರ್ಲಕ್ಷ್ಯ, ಕಾಂಗ್ರೆಸ್ ಪಕ್ಷದ ಮತಗಳಿಗೆ ಮಾರಕ: ಡಿಎನ್‌ಎನ್

ಯಳಂದೂರು: ಕಾಂಗ್ರೆಸ್ ಪಕ್ಷದಲ್ಲಿ ಕಳೆದ ೨೫ ವರ್ಷಗಳಿಂದಲೂ ನಾನು ಸಕ್ರೀಯ ಕಾರ್ಯಕರ್ತನಾಗಿದ್ದೇನೆ. ಈ ಲೋಕಸಭಾ ಚುನಾವಣೆಯಲ್ಲಿ ನಾನು ಕೂಡ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಆದರೆ ನನ್ನನ್ನು ಪಕ್ಷದಲ್ಲಿ ನಿರ್ಲಕ್ಷ್ಯ ಮಾಡಲಾಗುತ್ತಿದ್ದು ನನ್ನ ಬೆಂಬಲಿಗರ ಇದು ಕಾಂಗ್ರೆಸ್‌ನ ೫೦ ಸಾವಿರ ಮತಗಳಿಕೆಗೆ ಮಾರಕವಾಗಬಹುದು ಎಂದು ಪಕ್ಷದ ಹಿರಿಯ ಸದಸ್ಯ ಡಿ.ಎನ್. ನಟರಾಜು ಪಕ್ಷದ ವರಿಷ್ಠರಿಗೆ ಎಚ್ಚರಿಕೆ ನೀಡಿದರು.

ಅವರು ಈ ಸಂಬಂಧ ಸಮೀಪದ ದೇಶವಳ್ಳಿ ಗ್ರಾಮದಲ್ಲಿ ಶುಕ್ರವಾರ ಕರೆದಿದ್ದ ತಮ್ಮ ಬೆಂಬಲಿಗರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ನಾನು ಪಕ್ಷದ ನಿಷ್ಠಾಂವಂತ ಕಾರ್ಯಕರ್ತನಾಗಿದ್ದೆ. ಕಳೆದ ವಿಧಾನಸಭಾ ಚುನಾವಣೆಯಲ್ಲೂ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಈಗ ಲೋಕಸಭಾ ಟಿಕೆಟ್‌ನ ಆಕಾಂಕ್ಷಿಯೂ ಆಗಿದ್ದೆ. ಆದರೆ ನನಗೆ ಪಕ್ಷದ ಕೆಲ ಶಾಸಕರು, ಜಿಲ್ಲಾ ಮಟ್ಟದ ವರಿಷ್ಠರು ಕಡೆಗಣಿಸಿದ್ದಾರೆ. ಈ ಕ್ಷೇತ್ರದಲ್ಲಿ ೧ ಮತದಿಂದ ಗೆದ್ದ ರಾಜಕಾರಣಿ ಆಗಿ ಹೋಗಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ೧೮೦೦ ಕ್ಕೂ ಹೆಚ್ಚು ಮತಗಳಿಂದ ಕಾಂಗ್ರೆಸ್ ಪಕ್ಷ ಸೋತ ಉದಾಹರಣೆಯೂ ಇದೆ. ಇದು ಚುನಾವಣೆಯಲ್ಲಿ ಓಟಿಗಿರುವ ಮಹತ್ವವನ್ನು ಸಾರುತ್ತದೆ. ನನ್ನಂತಹ ಪಕ್ಷದ ಬೇರು ಮಟ್ಟದ ನಿಷ್ಠಾವಂತ ಕಾರ್ಯಕರ್ತರನ್ನು ನಿರ್ಲಕ್ಷಿಸಿದರೆ ನನ್ನನ್ನೆ ನಂಬಿರುವ ಪಕ್ಷದ ಕಾರ್ಯಕರ್ತರಿಗೆ ನಾನು ಉತ್ತರ ಕೊಡಲು ಸಾಧ್ಯವಾಗುವುದಿಲ್ಲ. ಬಿಜೆಪಿಗೆ ಇದು ಲಾಭವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಸುನೀಲ್ ಬೋಸ್‌ರಿಗೆ ಟಿಕೆಟ್ ಪಕ್ಷದ ಟಿಕೆಟ್ ಲಭಿಸಿದೆ. ಈಗಾಗಲೇ ಅವರು ಪಕ್ಷದ ಮುಖಂಡರಿಗೆ ಭೇಟಿ ಮಾಡಿ ಚುನಾವಣೆಯಲ್ಲಿ ಬೆಂಬಲಿಸುವಂತೆ ಮನವಿ ಮಾಡಿದ್ದಾರೆ. ಆದರೆ ನನ್ನ ಬಳಿ ಯಾರೊಬ್ಬರೂ ಇದುವರೆವಿಗೂ ಬಂದಿಲ್ಲ. ಟಿಕೆಟ್ ಕೇಳಿದ ಎಂಬ ಒಂದೇ ಕಾರಣದಿಂದ ನನ್ನನ್ನು ಪಕ್ಷದಲ್ಲಿ ನಿರ್ಲಕ್ಷಿಸಲಾಗುತ್ತಿದೆ. ನಾನು ಹೋರಾಟದಿಂದ ಬಂದಿದ್ದೇನೆ. ರಾಹುಲ್ ಗಾಂಧಿ, ಸಿದ್ಧರಾಮಯ್ಯ, ಡಿ.ಕೆ. ಶಿವಕುಮಾರ್‌ರವರಿಗೂ ಒಡನಾಡಿಯಾಗಿದ್ದೇನೆ. ಸಾಮಾನ್ಯ ಕಾರ್ಯಕರ್ತರು ಟಿಕೆಟ್ ಕೇಳುವುದು ತಪ್ಪು ಎಂದು ನನ್ನನ್ನು ಬಿಂಬಿಸಲಾಗುತ್ತಿದೆ. ನಾನು ಪಕ್ಷದಲ್ಲಿದ್ಧೇನೆ ಪಕ್ಷಕ್ಕಾಗಿ ದುಡಿಯುತ್ತಿದ್ದೇನೆ. ನನ್ನನ್ನು ನಿರ್ಲಕ್ಷಿಸಿದ್ದಲ್ಲಿ ನನ್ನ ಬೆಂಬಲಿಗರಿಗೆ ನಾನು ಉತ್ತರಿಸಲು ಕಷ್ಟವಾಗುತ್ತದೆ. ಆಗ ಪಕ್ಷದ ಮತಗಳು ಬೇರೆಡೆ ಸೋರಿಕೆಯಾಗುವ ಆಪಾಯವಿದೆ ಈ ಬಗ್ಗೆ ವರಿಷ್ಠರು ಎಚ್ಚರಿಕೆ ವಹಿಸಬೇಕು ಎಂದರು.
ಸಾಹಿತಿ, ಪ್ರಗತಿಪರ ಚಿಂತಕ ಕೃಷ್ಣಮೂರ್ತಿ ಚಮರಂ ಮಾತನಾಡಿ, ಈಗ ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಕುಟುಂಬಗಳ ಪರವಾಗಿಯೇ ಗಿರಕಿ ಹೊಡೆಯುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗುತ್ತಿದೆ. ಸಾಮಾನ್ಯ ಕಾರ್ಯಕರ್ತನಿಗೆ ಮತದಾರರ ನಾಡಿ ಮಿಡಿತ ಚೆನ್ನಾಗಿ ತಿಳಿದಿರುತ್ತದೆ. ನಟರಾಜು ಪಕ್ಷದಲ್ಲಿ ೨೫ ವರ್ಷಗಳಿಂದಲೂ ದುಡಿಯುತ್ತಿದ್ದಾರೆ. ಅವರು ಟಿಕೆಟ್ ಕೇಳುವುದರಲ್ಲಿ ತಪ್ಪೇನಿಲ್ಲ. ಮತದಾರ ಇದನ್ನು ಪ್ರಶ್ನಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಇಂತಹ ನಿಷ್ಟ ಕಾರ್ಯಕರ್ತರಿಗೆ ಅನ್ಯಾಯವಾಗಿದ್ದು ಪಕ್ಷ ಸಂಘಟನೆಯಲ್ಲಿ ಇವರು ದುಡಿದಿದ್ದಾರೆ. ಇವರಿಗೆ ಸೂಕ್ತ ಸ್ಥಾನಮಾನಗಳನ್ನು ನೀಡುವಂತೆ ಇವರ ಬೆಂಬಲಿಗರೂ ಪ್ರಶ್ನಿಸಬೇಕು. ಪಕ್ಷ ಇವರನ್ನು ದುಡಿಸಿಕೊಂಡು ಉತ್ತಮ ಸ್ಥಾನಮಾನವನ್ನು ಕೊಡಬೇಕು ಎಂದು ಆಗ್ರಹಿಸಿದರು.

ತಾಪಂ ಮಾಜಿ ಸದಸ್ಯ ವೈ.ಕೆ. ಮೋಳೆ ನಾಗರಾಜು, ರುದ್ರಯ್ಯ, ಅಂಬರೀಶ್, ಆನಂದ ಮಾತನಾಡಿದರು ನಗರ ಸಭಾ ಸದಸ್ಯರಾದ ಸಂಪತ್, ಶ್ರೀನಿವಾಸಗೌಡ, ವೈ.ಕೆ.ಮೋಳೆ ಶಿವಣ್ಣ, ವೆಂಕಟೇಶ್, ಆನಂದ್, ಜಗದೀಶ್, ವಿ. ನಾಗರಾಜು, ಸುನೀಲ್, ದೊಡ್ಡರಾಯಪೇಟೆ ರಾಜಮ್ಮ ಸೇರಿದಂತೆ ಅನೇಕರು ಹಾಜರಿದ್ದರು.


೨೯ವೈಎಲ್‌ಡಿ ಚಿತ್ರ೦೧ ಯಳಂದೂರು ಸಮೀಪದ ದೇಶವಳ್ಳಿ ಗ್ರಾಮದಲ್ಲಿ ಶುಕ್ರವಾರ ಕಾಂಗ್ರೆಸ್ ಮುಖಂಡ ದೇಶವಳ್ಳಿ ನಟರಾಜು ತಮ್ಮ ಬೆಂಬಲಿಗರ ಸಭೆಯನ್ನುದ್ದೇಶಿಸಿ ಮಾತನಾಡಿದರು.

RELATED ARTICLES
- Advertisment -
Google search engine

Most Popular