Friday, April 11, 2025
Google search engine

Homeರಾಜ್ಯಮೈಶುಗರ್ ಕಾರ್ಖಾನೆ ಇರೋದನ್ನೇ ಉಳಿಸಿಕೊಳ್ಳಬೇಕ? ಹೊಸ ಕಾರ್ಖಾನೆ ಮಾಡಬೇಕ? ಸಭೆಯಲ್ಲಿ ಚರ್ಚೆ- ಡಿಸಿಎಂ ಡಿಕೆಶಿ

ಮೈಶುಗರ್ ಕಾರ್ಖಾನೆ ಇರೋದನ್ನೇ ಉಳಿಸಿಕೊಳ್ಳಬೇಕ? ಹೊಸ ಕಾರ್ಖಾನೆ ಮಾಡಬೇಕ? ಸಭೆಯಲ್ಲಿ ಚರ್ಚೆ- ಡಿಸಿಎಂ ಡಿಕೆಶಿ

ಮಂಡ್ಯ: ಕೆಲ ದಿನಗಳ ಹಿಂದೆ ಮಂಡ್ಯದ ಮೈಶುಗರ್ ಕಾರ್ಖಾನೆ ಮೈದಾನದಲ್ಲಿ ನಡೆದ ʼಜನಾಂದೋಲನ ಸಭೆʼಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರು ವಿಪಕ್ಷಗಳ ವಿರುದ್ಧ ಗುಡುಗಿದ್ದರು. ಇದೀಗ ಮತ್ತೆ ಕೆಆರ್​ಎಸ್​ ವೀಕ್ಷಣೆಗೆ ಬಂದು ಡಿಕೆ ಶಿವಕುಮಾರ್ ಅವರು ಮೈಶುಗರ್ ಕಾರ್ಖಾನೆ ಸಂಬಂಧ ಮಾತನಾಡಿದ್ದಾರೆ. ಮೈಶುಗರ್ ಕಾರ್ಖಾನೆ ಉಳಿಸಿಕೊಳ್ಳುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ. ಇರೋದನ್ನೇ ಉಳಿಸಿಕೊಳ್ಳಬೇಕಾ? ಅಥವಾ ಹೊಸ ಕಾರ್ಖಾನೆ ಮಾಡಬೇಕಾ? ಎಂಬ ಬಗ್ಗೆ ಚರ್ಚೆ ನಡೆದಿದೆ. ಇರುವ ಕಾರ್ಖಾನೆಗೆ ಅಗತ್ಯ ಸೌಲಭ್ಯ ಒದಗಿಸುವ ಬಗ್ಗೆಯೂ ಚರ್ಚೆ ನಡೆದಿದೆ. ಸ್ಥಳೀಯ ಶಾಸಕರು ಕೆಲವು ಸಲಹೆ ಕೊಟ್ಟಿದ್ದಾರೆ ಎಂದು ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ಇಂದು ಕೆಆರ್​ಎಸ್​ ವೀಕ್ಷಣೆಗೆ ಬಂದಿದ್ದ ಡಿಸಿಎಂ ಡಿಕೆ ಶಿವಕುಮಾರ್, ನಿನ್ನೆ ಅಧಿಕಾರಿಗಳು, ಜನಪ್ರತಿನಿಧಿಗಳ ಜೊತೆ ಸಭೆ ಮಾಡಿದ್ದೇವೆ. ಮಂಡ್ಯ, KRS ಸಮಸ್ಯೆ ಬಗ್ಗೆ ಚರ್ಚೆ ಮಾಡಿದ್ದೇವೆ. ಮೊದಲಿಗೆ ಮೈಶುಗರ್ ಕಾರ್ಖಾನೆ ಉಳಿಸಿಕೊಳ್ಳುವ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಿದ್ದೇವೆ. ಸ್ಥಳೀಯ ಶಾಸಕರು ಕೆಲವು ಸಲಹೆ ಕೊಟ್ಟಿದ್ದಾರೆ. ನಂಬಿಕೆ ಉಳಿಸಿಕೊಳ್ಳುವ ಬಗ್ಗೆ ತೀರ್ಮಾನ ಮಾಡಲಾಗಿದೆ ಎಂದು ತಿಳಿಸಿದರು.

ಮೈಶುಗರ್ ಆಸ್ತಿ ಉಳಿಸಿಕೊಳ್ಳುವುದು. 5 ಸಾವಿರ TCD ಹೆಚ್ಚಿಸುವುದು. ಆ ನಂತರ ಡಿಸ್ಟಿಲರಿ ಇತರೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವುದು, ಹೊಸ ಕಬ್ಬಿನ ತಳಿ ಪರಿಚಯಕ್ಕೂ ತೀರ್ಮಾನ ಮಾಡಲಾಗಿದೆ. 5 ಸಾವಿರ TCDಗೆ ಅಗತ್ಯ ಇರುವ ಎಲ್ಲವನ್ನೂ ಕೊಡಿಸಲು ಟೆಕ್ನಿಕಲ್ ಟೀಂ ಸಲಹೆ ನೀಡಿದೆ. ರೈತರಿಗೆ ಉತ್ತಮ ಬೆಲೆ ಕೊಡಿಸಬೇಕು. 50 TMC ಬಿಡಬೇಕಿತ್ತು. 96 TMC ಹೆಚ್ಚುವರಿಯಾಗಿ ಬಿಟ್ಟಿದ್ದೇವೆ. 150 TMC ಈಗಾಗಲೇ ಬಿಟ್ಟಿದ್ದೇವೆ. ಕೆರೆ-ಕಟ್ಟೆಗಳನ್ನ ತುಂಬಿಸಲು ಸೂಚಿಸಿದ್ದೇನೆ. ಆ ಕೆಲಸ ಮಾಡುತ್ತಿದ್ದಾರೆ ಎಂದರು.

ಹೆಚ್​ಡಿಕೆಗೆ ಟಾಂಗ್ ಕೊಟ್ಟ ಡಿಕೆಶಿ

ಇನ್ನು ಇದೇ ವೇಳೆ ತಮಿಳುನಾಡು ಸರ್ಕಾರ ಒಪ್ಪಿಸಲಿ ಎಂಬ ಹೆಚ್​ಡಿಕೆ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ, ದೊಡ್ಡವರ ಸುದ್ದಿ ಈಗ ಬೇಡ. ಅವರೇನು ಅನುಮತಿ ಕೊಡಿಸಬೇಕಾದ ಅವಶ್ಯಕತೆಯಿಲ್ಲ. ಕಾನೂನುಪ್ರಕಾರ ಹೋರಾಟ ಮಾಡ್ತೀವಿ. ಕಾನೂನು ಮೂಲಕ ಅನುಮತಿ ಪಡೆದುಕೊಳ್ಳುತ್ತೇವೆ. ಕಾನೂನು ನಮಗೆ ರಕ್ಷಣೆ ನೀಡಲಿದೆ. ಕೇಂದ್ರದಲ್ಲಿ ಸಚಿವರನ್ನ ಭೇಟಿ ಮಾಡಿದ್ದೇನೆ. ಅವರು ಎಂದೂ ರೈತರ ಪರ ಇದ್ದ ಉದಾಹರಣೆಯೇ ಇಲ್ಲ. ಅವರ ಬುಡುಬುಡುಕೆ ಮಾತುಗಳು ಬೇಕಿಲ್ಲ. ಹೊಸದಾಗಿ ಪಂಚೆ ಹಾಕಿದ್ದನ್ನ ಬಿಟ್ರೆ ಎಂದೂ ರೈತರ ಪರ ನಿಂತಿಲ್ಲ. ಕೇಂದ್ರ ಇರಿಗೇಸನ್ ಮಿನಿಸ್ಟರ್ ಭೇಟಿ ಮಾಡಿ ಸಭೆ ಕರೆಯುವಂತೆ ಮನವಿ ಮಾಡಿದ್ದೇವೆ. 71 TMC ಈಗಾಗಲೇ ಸಮುದ್ರಕ್ಕೆ ಹೋಗಿದೆ ಎಂದರು.

ಕಾವೇರಿ ಅಮ್ಯೂಸ್ ಮೆಂಟ್ ಪಾರ್ಕ್ ನಿರ್ಮಾಣಕ್ಕೆ ಚಾಲನೆ

ಇನ್ನು ಅಧಿಕಾರಿಗಳು, ಜನಪ್ರತಿನಿಧಿಗಳನ್ನ ಒಳಗೊಂಡ ತಂಡ ಕಾವೇರಿ ಆರತಿ ಅಧ್ಯಯನಕ್ಕೆ ಪ್ರವಾಸ ಕೈಗೊಳ್ಳುತ್ತಿದೆ. ಕಾವೇರಿ ಅಮ್ಯೂಸ್ ಮೆಂಟ್ ಪಾರ್ಕ್ ನಿರ್ಮಾಣಕ್ಕೆ ಈಗ ಇರುವ ಸುಮಾರು 200 ಎಕರೆ ಜಾಗದಲ್ಲೇ ಅಭಿವೃದ್ಧಿ ಪಡಿಸಲಾಗುವುದು. ನಮ್ಮ ಪರಂಪರೆ ಉಳಿಸಿಕೊಂಡು ಪಾರ್ಕ್ ಅಭಿವೃದ್ಧಿ ಮಾಡುತ್ತೇವೆ. ಟೆಂಡರ್ ಕರೆಯುತ್ತಿದ್ದೇವೆ. ಸುಮಾರು 2 ಸಾವಿರ ಕೋಟಿ ಲೆಕ್ಕಾಚಾರ ಇದೆ ಎಂದರು.

RELATED ARTICLES
- Advertisment -
Google search engine

Most Popular