Sunday, April 6, 2025
Google search engine

Homeರಾಜಕೀಯಇಂದಿನಿಂದ ರಾಜ್ಯ ಸರ್ಕಾರದ ವಿರುದ್ಧ ನನ್ನ ಯುದ್ದ ಆರಂಭ: ಕೇಂದ್ರ ಸಚಿವ ಹೆಚ್.ಡಿಕೆ

ಇಂದಿನಿಂದ ರಾಜ್ಯ ಸರ್ಕಾರದ ವಿರುದ್ಧ ನನ್ನ ಯುದ್ದ ಆರಂಭ: ಕೇಂದ್ರ ಸಚಿವ ಹೆಚ್.ಡಿಕೆ

ಬೆಂಗಳೂರು: ಕೇತಗಾಹಳ್ಳಿಯಲ್ಲಿ ಸರ್ಕಾರಿ ಜಮೀನು ಒತ್ತುವರಿ ಆರೋಪ ಸಂಬಂಧ ಮಾತನಾಡಿರುವ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ, ಕೆಳಹಂತದ ಅಧಿಕಾರಿಗಳನ್ನ ನಾನು ಪ್ರಶ್ನೆ ಮಾಡಲ್ಲ. ಎಸ್ ಐಟಿ ತಂಡ ರಚಿಸಿ ತನಿಖೆ ಮಾಡಿಸಿದ್ದಾರೆ. ಇದು ಇತಿಹಾಸದಲ್ಲೇ ಪ್ರಥಮ . ಇಂದಿನಿಂದ ರಾಜ್ಯ ಸರ್ಕಾರದ ವಿರುದ್ಧ ನನ್ನ ಯುದ್ದ ಆರಂಭ ಮಾಡುತ್ತೇನೆ ಎಂದಿದ್ದಾರೆ.

ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ, ಅಧಿಕಾರಿಗಳನ್ನ ದುರುಪಯೋಗ ಮೂಲಕ ರಾಜಕಾರಣ ನಡೆಯುತ್ತಿದೆ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರು ಇರಬಹುದು. ಇವತ್ತಿಂದ ನನ್ನ ಸರ್ಕಾರ ವಿರುದ್ಧ ವಾರ್ ಆರಂಭ ಮಾಡುತ್ತಿದ್ದೇನೆ. ಇದನ್ನು ನಾಡಿನ ಜನತೆಗೆ ಹೇಳುತ್ತಿದ್ದೇನೆ. ನಾಲ್ಕೈದು ಜೆಸಿಬಿ , 25ರಿಂದ 30 ಅಧಿಕಾರಿಗಳು, ಪೊಲೀಸರು ಬೇರೆ. ಕುಮಾರಸ್ವಾಮಿ ಬೆಂಬಲಿಗರು ದಾಳಿ ಮಾಡುತ್ತಾರೆ ಎಂದು ಪೊಲೀಸರು ಕರೆದುಕೊಂಡು ಬಂದಿದ್ದರು. ಮಾಜಿ ಪ್ರಧಾನಿ ಮಗ ನಾಲ್ಕು ಎಕರೆ ಒತ್ತುವರಿ ಮಾಡೋಕೆ ಆಗುತ್ತೆ. ಸಮಾಜ ಪರಿವರ್ತನೆ ಅಂತೆ. 70 ಎಕರೆ ಒತ್ತುವರಿ ಅಂತೆ ನನ್ನಲ್ಲಿ40 ಎಕರೆ ಮಾತ್ರ ಇದೆ. ಅತಿಕ್ರಮಣ, ಅಕ್ರಮ ಇದ್ರೆ ದಾಖಲೆ ಬಿಡುಗಡೆ ಮಾಡಲಿ. ಈ ಸರ್ಕಾರದಲ್ಲಿರುವವರು ನಾನು ಅಪರಾಧಿ ಎಂದು ಅಪಪ್ರಚಾರ ಮಾಡುವುದಕ್ಕೆ ಹೊರಟ್ಟಿದ್ದಾರೆ. ಇದಕ್ಕೆಲ್ಲ ಕುಮಾರಸ್ವಾಮಿ ಹೆದರಲ್ಲ. ಅಧಿಕಾರ ಯಾರಿಗೂ ಶಾಶ್ವತ ಅಲ್ಲ ಎಂದರು.

ರಾಜ್ಯದಲ್ಲಿ ಸರ್ಕಾರದ ಅಕ್ರಮಗಳು ,ದರೋಡೆ ಕೆಲಸ ನಡೆಯುತ್ತಿದೆ. ಘಜ್ನಿ ಮಹಮ್ಮದ್ ಸೇರಿ ಹಿಂದೆ ಮೂರು ಜನ ಪ್ರಮುಖರು ಇದ್ರು. ಅಂತ ವ್ಯಕ್ತಿಗಳು ಈ ಸರ್ಕಾರದಲ್ಲಿ ಇದ್ದಾರೆ. ಈ ಸರ್ಕಾರ ಬಗ್ಗೆ ಮಾತಾಡಿದರೆ ನಿರಾಸೆ ಆಗಬಹುದು. ಹನಿಟ್ರ್ಯಾಪ್, ಸುಪಾರಿ ಕೊಲೆ ಬಗ್ಗೆ ಚರ್ಚೆ ಆಗುತ್ತಿದೆ. ಎಂತಹ ಪರಿಸ್ಥಿತಿಗೆ ಬಂದಿದ್ದಾರೆ. ಈ ಸರ್ಕಾರಕ್ಕೆ ನಾನು ಸವಾಲು ಹಾಕಲು ಬಂದಿದ್ದೇನೆ. ಸರ್ಕಾರದ ವಿರುದ್ಧ ನನ್ನ ಯುದ್ದ ಆರಂಭ ಮಾಡುತ್ತಿದ್ದೇನೆ ಎಂದು ಹೆಚ್ ಡಿ ಕುಮಾರಸ್ವಾಮಿ ತಿಳಿಸಿದರು.

RELATED ARTICLES
- Advertisment -
Google search engine

Most Popular