ಮೈಸೂರು: ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಕರುವನ್ನು ಹುಲಿಯೊಂದು ಹೊತ್ತೊಯ್ದಿರುವ ಘಟನೆ ನಂಜನಗೂಡು ತಾಲೂಕಿನ ಏಚಗುಂಡ್ಲ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಮಾಸ್ತಮ ದೇವಾಲಯದ ಮುಂಭಾಗದಲ್ಲಿ ಹುಲಿ ಕಾಣಿಸಿಕೊಂಡಿದೆ. ಬೆಳಗಿನ ಜಾವದಲ್ಲಿ ಪಟೇಲ್ ಮಹದೇವಪ್ಪ ಎಂಬುವವರ ಕೊಟ್ಟಿಗೆಗೆ ಏಕಾಏಕಿ ನುಗ್ಗಿದ್ದ ಹುಲಿ ಕರುವನ್ನು ಹೊತ್ತೊಯ್ದಿದೆ.
ಹುಲಿ ಬರುತ್ತಿರುವ ದೃಶ್ಯವು ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ. ಹುಲಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಗ್ರಾಮಸ್ಥರಲ್ಲಿ ಆತಂಕ ಮೂಡಿದ್ದು, ಹುಲಿ ಸೆರೆ ಹಿಡಿಯುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.