ಮೈಸೂರು: ಪಕ್ಕದ ಮನೆಯ ಯುವತಿಯೊಬ್ಬಳ ರಕ್ಷಣೆಗಾಗಿ ಪೊಲೀಸರಿಗೆ ಸಾಕ್ಷಿ ಹೇಳಿದ ಹಿನ್ನಲೆ ಮಹಿಳೆಗೆ ಹಿಗ್ಗಾಮುಗ್ಗ ಹಲ್ಲೆ ನಡೆಸಿದ ಘಟನೆ ಮೈಸೂರಿನ ಏಕಲವ್ಯನಗರದಲ್ಲಿ ನಡೆದಿದೆ.
ಲಕ್ಷ್ಮಿ ಎಂಬುವರು ಹಲ್ಲೆಗೆ ಒಳಹಾದವರು. ಸುರೇಶ,ನಂದೀಶ,ರಂಗಪ್ಪ ಹಾಗೂ ಲಕ್ಷ್ಮಿ ಹಲ್ಲೆ ನಡೆಸಿದವರು.
ಯುವತಿಯೊಬ್ಬಳ ರಕ್ಷಣೆಗಾಗಿ ಲಕ್ಷ್ಮಿ ರವರು ಪೊಲೀಸರಿಗೆ ಸಾಕ್ಷಿ ಹೇಳಿದ್ದಾರೆ.ನನ್ನ ಮಗನ ವಿರುದ್ದ ಸಾಕ್ಷಿ ಹೇಳಿದ್ದೀಯ ಎಂದು ಲಕ್ಷ್ಮಿ ಮೇಲೆ ತಿರುಗಿಬಿದ್ದ ಸುರೇಶ್,ನಂದೀಶ್,ರಂಗಪ್ಪ ಹಾಗೂ ಲಕ್ಷ್ಮಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಿಗ್ಗಾಮುಗ್ಗ ಹಲ್ಲೆ ನಡೆಸಿದ್ದಾರೆ.
ಈ ಸಂಭಂಧ ಹಲ್ಲೆಗೆ ಒಳಗಾದ ಲಕ್ಷ್ಮಿ ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.