Friday, April 18, 2025
Google search engine

Homeಸಿನಿಮಾಮೈಸೂರು: ನಂಜನಗೂಡಿಗೆ ನಟ ಯಶ್ ದಂಪತಿ‌ ಭೇಟಿ

ಮೈಸೂರು: ನಂಜನಗೂಡಿಗೆ ನಟ ಯಶ್ ದಂಪತಿ‌ ಭೇಟಿ

ಮೈಸೂರು: ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನಕ್ಕೆ ನಟ ಯಶ್ ಕುಟುಂಬ ಸಮೇತ ಆಗಮಿಸಿ ಶ್ರೀಕಂಠೇಶ್ವರನ ದರ್ಶನ ಪಡೆದುಕೊಂಡರು.

ಈ ವೇಳೆ ಮಾತನಾಡಿದ ಅವರು ಇದು ನಮ್ಮ ಮನೆಯ ದೇವರು, ಕೊರೊನ ಬಂದ ಬಳಿಕ ಇಲ್ಲಿಗೆ ಬಂದಿರಲಿಲ್ಲ, ಹಾಗಾಗಿ ಕುಟುಂಬ ಸಮೇತರಾಗಿ ಬಂದು ದೇವರ ದರ್ಶನ ಪಡೆಯಲು ಬಂದಿದ್ದೇವೆ ಬೇರೆ ಯಾವುದೇ ಹರಕೆ ಇರಲಿಲ್ಲ ಎಂದು ಹೇಳಿದರು.

ಕಳೆದ ಮೂರು ದಿನಗಳಿಂದ ಮೈಸೂರು ಭಾಗದಲ್ಲಿ ಪ್ರವಾಸ ಮಾಡುತ್ತಿರುವ ಯಶ್ ಹಾಗೂ ರಾಧಿಕಾ ಪಂಡಿತ್. ನಾಗರ ಹೊಳೆ, ಬಂಡೀಪುರ ಅರಣ್ಯದಲ್ಲಿ ಸಫಾರಿ ನಡೆಸಿದ್ದು, ಇಂದು ಶ್ರೀಕಂಠೇಶ್ವರ ದೇವರಿಗೆ ವಿಶೇಷ ಪೂಜೆ ನೆರವೇರಿಸಿದರು.

ಸಿನಿಮಾ ಕುರಿತಾಗಿ ಮಾತನಾಡಿದ ಯಶ್ ‘ದೇವರ ಸನ್ನಿಧಿಯಲ್ಲಿ ಇದ್ದೀನಿ ಸುಖಾ ಸುಮ್ಮನೆ ತೇಲಿಸುವ ಮಾತುಗಳನ್ನು ಆಡುವುದಿಲ್ಲ. ಜನರು ದುಡ್ಡು ಕೊಟ್ಟು ಸಿನಿಮಾ ನೋಡುತ್ತಾರೆ. ಯಾರೂ ಉಚಿತವಾಗಿ ಸಿನಿಮಾ ನೋಡುವುದಿಲ್ಲ. ಅವರು ಕೊಡುವ ದುಡ್ಡಿಗೆ ನ್ಯಾಯ ಒದಗಿಸುವಂತೆ ಸಿನಿಮಾ ಮಾಡಬೇಕು ಎಂಬ ನಿಲುವು ನನ್ನದು. ನಾನು ಒಂದು ಕ್ಷಣವನ್ನೂ ವ್ಯರ್ಥ ಮಾಡುತ್ತಿಲ್ಲ. ಸಿನಿಮಾಗಾಗಿ ನಿರಂತರವಾಗಿ ಕೆಲಸ ಮಾಡುತ್ತಿದ್ದೇನೆ. ಸ್ಕ್ರಿಪ್ಟ್ ಕೂಡ ಸಿದ್ಧವಾಗ್ತಿದೆ, ಆದಷ್ಟು ಬೇಗ ಹೊಸ ಚಿತ್ರದ ಮಾಹಿತಿ ನೀಡುವೆ ಎಂದು ಹೇಳಿದರು.

ಯಶ್ ಬಾಲಿವುಡ್ ಗೆ ಹೋಗುತ್ತಾರೆ ಎಂಬ ಸುದ್ದಿಗಳು ಹೆಚ್ಚಿನ ಕಡೆಗಳಲ್ಲಿ ಕೇಳಿಬರುತ್ತಿದೆ ಈ ವಿಚಾರವಾಗಿ ಪ್ರತಿಕ್ರಿಯಿಸಿದ ಯಶ್ ನಾನು ಇರುವ ಕಡೆ ಎಲ್ಲರನ್ನೂ ಕರೆಸಿಕೊಂಡಿದ್ದೇನೆ, ನಾನು ಎಲ್ಲೂ ಹೋಗುವುದಿಲ್ಲ ಡೋಂಟ್ ವರಿ ಎಂದು ಹೇಳಿದ್ದಾರೆ.

RELATED ARTICLES
- Advertisment -
Google search engine

Most Popular