Thursday, April 17, 2025
Google search engine

Homeಸ್ಥಳೀಯಮೈಸೂರು: UPSC ಉಚಿತ ತರಬೇತಿಗೆ ಅರ್ಜಿ ಆಹ್ವಾನ

ಮೈಸೂರು: UPSC ಉಚಿತ ತರಬೇತಿಗೆ ಅರ್ಜಿ ಆಹ್ವಾನ

ಮೈಸೂರು: ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ವಾಸವಿ ಅಕಾಡೆಮಿ ಸೇವಾ ಸಂಸ್ಥೆಯಿಂದ ಎಲ್ಲಾ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತವಾಗಿ ಯುಪಿಎಸ್ಸಿ ತರಬೇತಿ ನೀಡಲಾಗುವುದು ಎಂದು ಮೈಸೂರು ಆರ್ಯವೈಶ್ಯ ಜಿಲ್ಲಾ ಸಮಿತಿ ಅಧ್ಯಕ್ಷರಾದ ಶ್ರೀಯುತ ಲಯನ್ ಕೆ ಆನಂದ ಕೃಷ್ಣರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

8 ತಿಂಗಳಿನ ತರಬೇತಿ ಅವಧಿಯಾಗಿದ್ದು, 2025 ರಲ್ಲಿ ಲೋಕ ಸೇವಾ ಆಯೋಗದ ಪರೀಕ್ಷೆಗಳನ್ನು ಬರೆಯಲು ಇಚ್ಚಿಸುವ ವಿದ್ಯಾರ್ಥಿಗಳು ಇದನ್ನು ಸದುಪಯೋಗ ಪಡಿಸಿಕೊಳ್ಳಬಹುದು.

ಆಸಕ್ತರು ವಾಸವಿ ಅಕಾಡೆಮಿ ನಡೆಸುವ ಪ್ರವೇಶ ಮತ್ತು ಮೌಖಿಕ ಪರೀಕ್ಷೆಯಲ್ಲಿ ಭಾಗವಹಿಸಿ ಉತ್ತೀರ್ಣರಾದರೆ ತರಬೇತಿಗೆ ಅರ್ಹರಾಗಿರುತ್ತಾರೆ. ಅರ್ಜಿ ಸಲ್ಲಿಸಲು ಆಗಸ್ಟ 25 ಕೊನೆಯ ದಿನವಾಗಿದ್ದು, ಸೆ. 1 ರಂದು ಪ್ರವೇಶ ಪರೀಕ್ಷೆ ಮತ್ತು ಮೌಖಿಕ ಪರೀಕ್ಷೆ ನಡೆಯಲಿದೆ.

ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 92412 03436 ಅಥವಾ 9844267452 ಮೋಹನ್ ಕುಮಾರ್ ಡಿ ಜಿ ಗೆ ಕರೆ ಮಾಡುವಂತೆ ಲಯನ್ ಕೆ ಆನಂದ ಕೃಷ್ಣರವರು ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular