ಮರಗಳು ಮನುಷ್ಯನಿಗೆ ಪರೋಪಕಾರ ಗುಣವನ್ನು ಬೆಳೆಸುತ್ತದೆ ಶ್ರೀ ಗಣೇಶ್ ರವರ ಅಭಿಮತ
ಮೈಸೂರು: ಸಂವಹನ ಕ್ಲಬ್ ಮತ್ತು ಜಿ.ಎಸ್.ಎಸ್.ಸಂಘದ ವತಿಯಿಂದ ವಿಜಯ ವಿಠಲ ವಿದ್ಯಾ ಶಾಲೆಯಲ್ಲಿ ‘ವೃಕ್ಷ ರಕ್ಷಾ ಬಂಧನ’ ಶೀರ್ಷಿಕೆ ಅಡಿಯಲ್ಲಿ ರಕ್ಷಾ ಬಂಧನ ಕಾರ್ಯಕ್ರಮವನ್ನು ಮಕ್ಕಳಿಂದ ಗಿಡಕ್ಕೆ ರಾಖಿ ಕಟ್ಟಿಸುವ ಮೂಲಕ ‘ವೃಕ್ಷೋ ರಕ್ಷತಿ ರಕ್ಷಿತ:’ ಎಂಬ ಕಲ್ಪನೆ ಬೆಳೆಸಲು ವಿಶೇಷವಾಗಿ ಆಚರಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಶ್ರೀಯುತ ಗಣೇಶ್ ರವರು, ಅಪ್ನಾ ದೇಶ್ ಸಂಸ್ಥೆಯ ಕಾರ್ಯದರ್ಶಿ, ಮೈಸೂರು ಇವರು ಮಾತನಾಡಿ, ರಕ್ಷಾಬಂಧನವು ರಕ್ಷಣೆಯ ಭರವಸೆ ನೀಡುವ ಯಾವುದೇ ಇಬ್ಬರು ವ್ಯಕ್ತಿಗಳ ನಡುವಿನ ಪ್ರೀತಿ ಮತ್ತು ವಾತ್ಸಲ್ಯದ ಪವಿತ್ರ ಬಂಧವನ್ನು ಆಚರಿಸುತ್ತದೆ.
ಪರಿಸರ ನಮ್ಮನ್ನು ರಕ್ಷಿಸುತ್ತಿದೆ.ಅಂತಹ ಪರಿಸರವನ್ನು ರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ.ನಾವು ಯಾವಾಗಲೂ ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕಬೇಕು ಎಂಬುದನ್ನು ರಾಜಸ್ಥಾನದ ಒಂದು ಘಟನೆಯನ್ನು ಮಕ್ಕಳಿಗೆ ತಿಳಿಸುವ ಮೂಲಕ ವೃಕ್ಷದ ಮಹತ್ವವನ್ನು ತಿಳಿಸಿದರು.ಮರ ನಮ್ಮೆಲ್ಲರಿಗೂ ಪರೋಪಕಾರ ಗುಣವನ್ನು ಕಲಿಸುತ್ತದೆ.ಮರವನ್ನು ಬೆಳೆಸಿ ಉಳಿಸುವಂತಹ ಕೆಲಸವಾಗಬೇಕಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀಯುತ.ಶ್ರೀ ಹರಿ ಯವರು,ಜಿ.ಎಸ್.ಎಸ್.ಪ್ರತಿಷ್ಠಾನದ ಸಂಸ್ಥಾಪಕರು ಮಾತನಾಡಿ,ನಾವು ಪ್ರಕೃತಿಯೊಂದಿಗೆ ಪರಸ್ಪರ ಒಪ್ಪಂದ ಮಾಡಿಕೊಳ್ಳಬೇಕು ಮತ್ತು ಮರವನ್ನು ರಕ್ಷಿಸುವ ಭರವಸೆಯನ್ನು ನಾವು ನೀಡಬೇಕಾಗಿದೆ ಎಂದು ತಿಳಿಸಿದರು.ಗಣಿತದ ಮೂಲಕ ಮರಗಳಿಂದ ದೊರೆಯುವ ಆಮ್ಲಜನಕ ಮನುಷ್ಯನ ಜೀವನಕ್ಕೆ ಎಷ್ಟು ಮುಖ್ಯ ಎಂಬುದನ್ನು ತಿಳಿಸಿದರು.
ಮರಗಳನ್ನು ನಾವು ರಕ್ಷಿಸಿದರೆ ಮರ ನಮ್ಮನ್ನು ರಕ್ಷಿಸುತ್ತದೆ ಎಂದು ತಿಳಿಸಿದರು. ನಂತರ ವಿಶೇಷವಾಗಿ ವಿದ್ಯಾರ್ಥಿಗಳಿಂದ ಗಿಡಗಳಿಗೆ ರಾಖಿ ಕಟ್ಟಿಸುವ ಮೂಲಕ ಹಾಗೂ ಎಲ್ಲಾ ವಿಭಾಗದ ವಿದ್ಯಾರ್ಥಿಗಳಿಂದ ರಾಖಿ ಕಟ್ಟಿಸುವ ಮೂಲಕ ಅಣ್ಣ ತಂಗಿಯರ ಬಾಂಧವ್ಯವನ್ನು,ಪ್ರೀತಿ ವಾತ್ಸಲ್ಯದ ಅರಿವನ್ನು ತಿಳಿಸಲಾಯಿತು. ಈ ಸಂದರ್ಭದಲ್ಲಿ ಶ್ರೀನಿವಾಸ್ ಭಾರ್ಗವ್, ವಿಜಯ ವಿಠಲ ವಿದ್ಯಾಶಾಲೆಯ ಪ್ರಾಂಶುಪಾಲರಾದ ಶ್ರೀಮತಿ.ವೀಣಾ ಎಸ್.ಎ, ವಿಜಯ ವಿಠಲ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀಯುತ.ಸತ್ಯಪ್ರಸಾದ್, ಜಿ.ಎಸ್.ಎಸ್.ನ ರಮ್ಯಾರವರು,ಮೈಸೂರು ಶ್ರೀಯುತ.ಶ್ರೀ ಹರಿ ಯವರು,ಜಿ.ಎಸ್.ಎಸ್.ಪ್ರತಿಷ್ಠಾನದ
ಸಂಸ್ಥಾಪಕರು, ಶಿಕ್ಷಕರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.