ಮೈಸೂರು: ನಗರದಲ್ಲಿ ಹೆಚ್ಚುತ್ತಿರುವ ಚಳಿ ಹಾಗೂ ಮಂಜಿನ ವಾತಾವರಣದಲ್ಲಿ ತೊಂದರೆ ಅನುಭವಿಸುತ್ತಿದ್ದ , ಭಿಕ್ಷುಕರಿಗೆ , ನಿರ್ಗತಿಕರಿಗೆ, ಹಾಗೂ ಕೆ ಆರ್ ಆಸ್ಪತ್ರೆಯ ರೋಗಿಗಳ ಆರೈಕೆ ಮಾಡಲು ಬಂದಿರುವ ನಾಗರಿಕರಿಗೆ
ಯೂನಿಕ್ ಯೂತ್ ಫೌಂಡೇಶನ್ ಹಾಗೂ ಕೆ ಎಂ ಪಿ ಕೆ ಟ್ರಸ್ಟ್ ವತಿಯಿಂದ ಮಂಗಳವಾರ ರಾತ್ರಿ ಹೊದಿಕೆ ಹಂಚುವ ಮೂಲಕ ಮಾನವೀಯತೆ ಮೆರೆದರು.
ಈಗಾಗಲೇ ಕೆ ಎಂ ಪಿ ಕೆ ಟ್ರಸ್ಟ್ ಅಧ್ಯಕ್ಷರಾದ ವಿಕ್ರಂ ಅಯ್ಯಂಗಾರ್ ನೇತೃತ್ವದಲ್ಲಿ 15 ದಿನಗಳ ಕಾಲ ನಿರಂತರವಾಗಿ ರಾತ್ರಿ 12:00 ರಿಂದ 1ರವರಿಗೂ ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ಮಾರ್ಕೆಟ್, ಹಾಡಿ ಜನಾಂಗದವರಿಗೆ , ಗುಡಿಸಲಿನಲ್ಲಿ ವಾಸ ಮಾಡುವ ಬಡ ಜನರಿಗೆ ಸೇರಿದಂತೆ ಇನ್ನಿತರ ಸ್ಥಳಗಳಿಗೆ ತೆರಳಿ ಹೊದಿಕೆಯನ್ನು ವಿತರಿಸುತ್ತಿದ್ದು ಅವರಿಗೆ ಹಲವಾರು ಸಂಘ ಸಂಸ್ಥೆಗಳು ಕೈಜೋಡಿಸುತ್ತಿದ್ದಾರೆ. ಈಗಾಗಲೇ 300ಕ್ಕೂ ಹೆಚ್ಚು ಹೊದಿಕೆಯನು ವಿತರಿಸಿದ್ದಾರೆ.
ಕೆ ಎಂ ಪಿ ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್ ಮಾತನಾಡಿ ಸ್ನೇಹಿತರ ಸಹಕಾರದೊಂದಿಗೆ ಕಳೆದ ನಾಲ್ಕು ವರ್ಷದಿಂದ ನಿರಂತರವಾಗಿ ಡಿಸೆಂಬರ್ ಹಾಗೂ ಜನವರಿ ತಿಂಗಳಿನಲ್ಲಿ ಚಳಿಗಾಲ ಸಂದರ್ಭದಲ್ಲಿ ಸ್ನೇಹಿತರೊಡನೆ ಸ್ಥಳಕ್ಕೆ ತೆರಳಿ ಅವರ ಸ್ಥಿತಿಗಳನ್ನು ನೋಡಿ ಹೊದಿಕೆ ಯನ್ನು ವಿತರಿಸುತ್ತಾ ಬಂದಿದ್ದೇವೆ, ಜೊತೆಗೆ ಕೆಲವೊಂದು ಹಾಡಿಗಳಿಗೆ ಭೇಟಿ ಕೊಟ್ಟಿ ಹಾಡಿ ಜನಾಂಗದವರಿಗೂ ಹೊದಿಕೆಯನ್ನು ವಿತರಿಸಲಾಗುವುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಶ್ರೀ ದುರ್ಗಾ ಫೌಂಡೇಶನ್ ಅಧ್ಯಕ್ಷರಾದ ರೇಖಾ ಶ್ರೀನಿವಾಸ್, ಮಲೆ ಮಾದೇಶ್ವರ ಸೇವಾ ಸಂಸ್ಥೆಯ ಅಧ್ಯಕ್ಷರಾದ ಮಹಾನ್ ಶ್ರೇಯಸ್, ಶಿವು, ಯೂನಿಕ್ ಯೂತ್ ಫೌಂಡೇಶನ್ ಸಂಘಟನೆಯ ಸಂಚಾಲಕರಾದ ಮುದ್ದಸಿರ್ ಅಲಿ ಖಾನ್,ಡಾ. ಜೀಶನ್. ಧರ್ಮಶ್ರೀ,ಮುಜಕ್ಕಿರ್ ಅಲಿ ಖಾನ್,ನರ್ಗೀಸ್ ಪಠಾಣ್,ಶಹಾಬ್ ಉರ್ ರೆಹಮಾನ್,ಫೈಜಾನ್ ಅಹ್ಮದ್ ಖಾನ್,ಅಖಿಫ್,ಶಾರುಖ್,ಘೌಸ್,ಹೈದರ್ ಪಠಾಣ್, ಹಾಗೂ ಇನ್ನಿತರರು ಭಾಗವಹಿಸಿದ್ದರು.