ಮೈಸೂರು: ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಬೃಹತ್ ಸಾಧನೆ ಸಮಾವೇಶ ಆಯೋಜಿಸಿದ್ದು, ಇದರಲ್ಲಿ ಸರ್ಕಾರದ “ಗ್ಯಾರಂಟಿ ಯೋಜನೆ”ಗಳ ಯಶಸ್ಸನ್ನು ಜನತೆಗೆ ತೋರಿಸುವ ಯತ್ನ ನಡೆದಿದೆ. ಎರಡೂ ವರ್ಷದ ಆಡಳಿತದ ಹಿನ್ನೆಲೆ, ಸಮಾವೇಶವು ಸರಕಾರದ ಶಕ್ತಿ ಪ್ರದರ್ಶನಕ್ಕೂ ವೇದಿಕೆಯಾಗುತ್ತಿದೆ.
ವಿಪಕ್ಷಗಳ ಆಕ್ರೋಶಕ್ಕೆ ಉತ್ತರವಾಗಿ, “ಸರ್ಕಾರದಲ್ಲಿ ಹಣ ಇಲ್ಲ” ಎಂಬ ಟೀಕೆಗಳಿಗೆ ತಕ್ಕ ಉತ್ತರವಾಗಿ 2658 ಕೋಟಿ ರೂ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಸಿಎಂ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನಡೆಸಲಿದ್ದಾರೆ. ಕೃಷಿ, ಕೈಗಾರಿಕೆ, ನೀರಾವರಿ, ಸಣ್ಣ ಉದ್ಯಮ ಸೇರಿದಂತೆ 28 ಇಲಾಖೆಗಳ ಕಾಮಗಾರಿಗಳು ಈ ಸಂದರ್ಭದಲ್ಲಿ ಆರಂಭಗೊಳ್ಳಲಿವೆ.
“ನಾನೇ ಐದು ವರ್ಷ ಸಿಎಂ” ಎಂಬ ಘೋಷಣೆಗೆ ಪುನರುಚ್ಚಾರ ಮಾಡಲಿರುವ ಸಿದ್ದರಾಮಯ್ಯ, ಪಕ್ಷದೊಳಗಿನ ಗೊಂದಲಗಳಿಗೆ ಸಮಾಧಾನ ಹೇಳುವ ಸಂದೇಶವನ್ನೂ ನೀಡಲು ಯತ್ನಿಸುತ್ತಿದ್ದಾರೆ. “ಸೀಟ್ ಶೇರಿಂಗ್” ಮಾತುಕತೆಗಳ ಬಗ್ಗೆ ಕೇಳಿಬರುತ್ತಿರುವ ಊಹಾಪೋಹಗಳಿಗೆ ಈ ಸಮಾವೇಶ ಸ್ಪಷ್ಟ ಉತ್ತರ ನೀಡಲಿದೆ.
ಮಧ್ಯಾಹ್ನ 12 ಗಂಟೆಗೆ ಆರಂಭವಾಗುವ ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಡಿಸಿಎಂ ಡಿಕೆ ಶಿವಕುಮಾರ್, ಸಚಿವ ಸಂಪುಟದ ಸದಸ್ಯರು ಭಾಗವಹಿಸಲಿದ್ದಾರೆ. 1 ಲಕ್ಷಕ್ಕೂ ಅಧಿಕ ಜನರು ಪಾಲ್ಗೊಳ್ಳಲಿದ್ದಾರೆಂದು ನಿರೀಕ್ಷೆ. 60 ಸಾವಿರ ಆಸನ ವ್ಯವಸ್ಥೆ ಮಾಡಿಕೊಂಡಿದ್ದು, ಜನರ ಮದ್ಯೆ ನಡಿಗೆ ಮೂಲಕ ಸಿದ್ದರಾಮಯ್ಯ ತಮ್ಮ ಜನಾಧಾರ ತೋರಿಸಲು ಸಜ್ಜಾಗಿದ್ದಾರೆ.
ಈ ಸಮಾವೇಶ, ಕಾಂಗ್ರೆಸ್ ನಾಯಕರಿಗೆ “ಸೆಪ್ಟೆಂಬರ್ ಕ್ರಾಂತಿ”ದ ಜಾಗೃತಿ ನೀಡುವ ಜತೆಗೆ, ಪಕ್ಷದ ಸ್ಥಿರತೆಗೆ ಹಾಗೂ ಸರ್ಕಾರದ ಗಟ್ಟಿತನಕ್ಕೆ ಸಾಕ್ಷಿಯಂತಾಗಿದೆ.