Thursday, April 17, 2025
Google search engine

Homeಸ್ಥಳೀಯಮೈಸೂರು ಡಿಸಿ ಕಾರ್ಯ ವೈಖರಿ: ಸೋಶಿಯಲ್ ಮೀಡಿಯಾದಲ್ಲಿ ಭಾರೀ ಮೆಚ್ಚುಗೆ

ಮೈಸೂರು ಡಿಸಿ ಕಾರ್ಯ ವೈಖರಿ: ಸೋಶಿಯಲ್ ಮೀಡಿಯಾದಲ್ಲಿ ಭಾರೀ ಮೆಚ್ಚುಗೆ

ಮೈಸೂರು:  ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಅವರ ಕಾರ್ಯ ವೈಖರಿಗೆ ಸೋಶಿಯಲ್ ಮೀಡಿಯಾದಲ್ಲಿ ಈಗ‌ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ನೂತನ ಜಿಲ್ಲಾಧಿಕಾರಿ ಕಚೇರಿಗೆ ಅಹವಾಲು ಹೊತ್ತು ತೆರಳುವ ಸಾರ್ವಜನಿಕರಿಗೆ ಡಿಸಿ ರಾಜೇಂದ್ರ ಅವರ ಕಾರ್ಯವೈಖರಿಯ ಅನುಭವವಾಗುತ್ತಿದೆ.

ಪ್ರತಿನಿತ್ಯ ಜಿಲ್ಲಾಧಿಕಾರಿ ಕಚೇರಿಗೆ ಅಹವಾಲು ಸಲ್ಲಿಸಲು ತೆರಳುವ ಸಾರ್ವಜನಿಕರು ಡಿಸಿ ಅವರನ್ನು ನೋಡಲು ಹೊರಗೆ ಕಚೇರಿ ಬಳಿ ಕಾದು ನಿಲ್ಲುತ್ತಾರೆ. ಇದನ್ನು ಗಮನಿಸಿದ ಡಿಸಿ ಕೆ.ವಿ. ರಾಜೇಂದ್ರ ಅವರು ಸ್ವತಃ ಕಚೇರಿಯಿಂದ ಹೊರಬಂದು ಸಾರ್ವಜನಿಕರು ನಿಂತಿರುವ ಕಡೆಯೇ ಅಹವಾಲು ಸ್ವೀಕರಿಸಿ, ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಸೂಚಿಸುತ್ತಿದ್ದಾರೆ.

ಡಿಸಿಯವರ ಈ ಬಗೆಯ ಕಾರ್ಯ ವೈಖರಿಗೆ ಜನರಿಂದ‌ ಮೆಚ್ಚುಗೆ ವ್ಯಕ್ತವಾಗುತ್ತಿದೆ.

RELATED ARTICLES
- Advertisment -
Google search engine

Most Popular