Friday, April 18, 2025
Google search engine

Homeಅಪರಾಧಕಾನೂನುಮೈಸೂರು: ಇಬ್ಬರು ವಿದ್ಯಾರ್ಥಿಗಳ ಸಾವು: ಚಾಲಕನ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ

ಮೈಸೂರು: ಇಬ್ಬರು ವಿದ್ಯಾರ್ಥಿಗಳ ಸಾವು: ಚಾಲಕನ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ

ಮೈಸೂರು: ಅಪಘಾತದಲ್ಲಿ ಗಾಯಗೊಂಡು ಏ.14ರಂದು ಮೃತಪಟ್ಟಿದ್ದ ವಿದ್ಯಾರ್ಥಿಗಳಿಬ್ಬರ ಪ್ರಕರಣದ ತನಿಖೆ ನಡೆಸಿದ ವಿ.ವಿ ಪುರಂ ಠಾಣೆಯ ಪೊಲೀಸರು, ‘ಚಾಲಕ ಮದ್ಯ ಸೇವಿಸಿ ಅಪ‍ಘಾತಕ್ಕೆ ಕಾರಣನಾಗಿದ್ದಾನೆ’ ಎಂದು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

ಮಾನಸ ಗಂಗೋತ್ರಿಯ ಚದುರಂಗ ರಸ್ತೆಯ ಆಯಿಷ್ ಬಳಿ ಕಾರೊಂದು ನಿಯಂತ್ರಣ ತಪ್ಪಿ ಬೈಕ್ ಮತ್ತು ಸ್ಕೂಟರ್‌ಗೆ ಡಿಕ್ಕಿಯಾಗಿತ್ತು. ಸ್ಕೂಟರ್‌ನಲ್ಲಿದ್ದ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳಾದ ಸಿದ್ದಾರ್ಥನಗರ ಬಡಾವಣೆ ನಿವಾಸಿ ಉಲ್ಲಾಸ್ ಮತ್ತು ಕೇರಳ ಮೂಲದ ಶಿವಾನಿ ಮೃತಪಟ್ಟಿದ್ದರು.

 ಬೈಕ್ ಸವಾರ ಮಹದೇವಸ್ವಾಮಿ ತೀವ್ರವಾಗಿ ಗಾಯಗೊಂಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದಾಗ ಕಾರು ಚಲಾಯಿಸಿದ ವ್ಯಕ್ತಿ ಮದ್ಯಪಾನ ಮಾಡಿರುವುದು ತಿಳಿದುಬಂದಿದೆ. ವಿಚಾರಣೆ ಬಳಿಕ  ರಸ್ತೆ ಅಪಘಾತ ಆಕಸ್ಮಿಕವಾಗಿ ನಡೆದಿಲ್ಲ, ಕಾರು ಚಾಲಕ ಮದ್ಯ ಸೇವಿಸಿ ಉದ್ದೇಶಪೂರ್ವಕವಾಗಿ ಚಾಲನೆ ಮಾಡಿದ್ದರಿಂದ ಅಪಘಾತವಾಗಿದೆ ಎಂದು ಉಲ್ಲೇಖಿಸಿ, ಆರೋಪಿ ಕಾರು ಚಾಲಕನ ವಿರುದ್ಧ ಇಬ್ಬರನ್ನು ಹತ್ಯೆ ಮಾಡಿರುವ ಆರೋಪದಡಿ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

ಈ ಬಗ್ಗೆ ತಮ್ಮ ಎಕ್ಸ್‌ ಖಾತೆಯಲ್ಲಿ ಎಡಿಜಿಪಿ ಅಲೋಕ್‌ ಕುಮಾರ್‌ ಅವರು, ನಾನು ಠಾಣೆಗೆ ಭೇಟಿ ನೀಡಿದಾಗ ಪ್ರಕರಣದ ತನಿಖೆಯನ್ನು ಗಮನಿಸಿದ್ದು, ಚಾಲಕನೇ ಹತ್ಯೆ ಮಾಡಿದ್ದಾನೆ ಎಂದು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ ಎಂದು ಬರೆದುಕೊಂಡಿದ್ದಾರೆ.

RELATED ARTICLES
- Advertisment -
Google search engine

Most Popular