ಹೊಸೂರು: ಸಾಲಿಗ್ರಾಮ ತಾಲೂಕಿನ ಮೂರು ಮಂದಿ ಶಿಕ್ಷಕರಿಗೆ ಮೈಸೂರು ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ದೊರೆತಿದೆ.
ಕಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಜವರೇಗೌಡನ ಕೊಪ್ಪಲು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಹೆಬ್ಬಾಳು ಗ್ರಾಮದ ಕೆ.ಪಿ.ಭಾರತಿ, ಹಿರಿಯ ಪ್ರಾಥಮಿಕ ಶಾಲೆಯ ವಿಭಾಗದಲ್ಲಿ ಸಾಲಿಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಡ್ತಿ ಮುಖ್ಯಶಿಕ್ಷಕ ಸುಬ್ಬೇಗೌಡ ಅವರಿಗೆ ಅವರಿಗೆ ಈ ಪ್ರಶಸ್ತಿ ಲಭಿಸಿದೆ.
ಪ್ರೌಢಶಾಲಾ ಶಾಲೆಯ ವಿಭಾಗದಲ್ಲಿ ಅಂಕನಹಳ್ಳಿ ಸರ್ಕಾರಿ ಪ್ರೌಡಶಾಲೆಯ ಶಿಕ್ಷಕರಾದ ಎಲ್.ಇ.ಮಂಜುನಾಥ್ ಅವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ಲಭ್ಯವಾಗಿದ್ದು, ಇವರಿಗೆ ಮೈಸೂರಿನ ಕಲಾ ಮಂದಿರದಲ್ಲಿ ಸೆ.5 ರಂದು ನಡೆಯಲಿರುವ ಶಿಕ್ಷಕರ ದಿನಾಚರಣೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಶಿಕ್ಷಣ ಇಲಾಖೆ ತಿಳಿಸಿದೆ
“ಮೂರು ಶಾಲೆಗಳಿಗೆ ಉತ್ತಮ ಶಾಲಾ ಪ್ರಶಸ್ತಿ”
ಇದರ ಜೊತಗೆ ಶಾಸಕ ಡಿ.ರವಿಶಂಕರ್ ಅವರು ಸೆ.5 ರಂದು ಕೆ.ಆರ್.ನಗರದಲ್ಲಿ ನಡೆಯುವ ಶಿಕ್ಷಕರ ದಿನಾಚರಣೆಗೆ ಮೂರು ಉತ್ತಮ ಶಾಲೆಗಳಿಗೆ ಉತ್ತಮ ಶಾಲಾ ಪ್ರಶಸ್ತಿಗಳಿಗೆ ಆಯ್ಕೆ ಮಾಡಿದ್ದಾರೆ
ಕಿರಿಯ ಪ್ರಾಥಮಿಕ ಶಾಲೆಯ ವಿಭಾಗದಲ್ಲಿ ಅಡಗನಹಳ್ಳಿ ಶಾಲೆ, ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಜಿ.ಜಿ.ಎಂ.ಎಸ್.ಶಾಲೆ, ಪ್ರೌಡಶಾಲೆಯ ವಿಭಾಗದಲ್ಲಿ ಅಂಕನಹಳ್ಳಿ ಸರ್ಕಾರಿ ಪ್ರೌಡಶಾಲೆಯನ್ನು ಉತ್ತಮ ಶಾಲಾ ಪ್ರಶಸ್ತಿ ಗಳಿಗೆ ಆಯ್ಕೆ ಆಗಿವೆ