Friday, April 11, 2025
Google search engine

Homeರಾಜ್ಯಸುದ್ದಿಜಾಲಮೈಸೂರು ಜಿಲ್ಲಾ ಜೆಡಿಎಸ್ ಎಸ್ಸಿ-ಎಸ್ಟಿ ಘಟಕದ ವತಿಯಿಂದ ಹುಣಸೂರು ಟಿಎಪಿಸಿಎಂಎಸ್ ಅಧ್ಯಕ್ಷರಿಗೆ ಸನ್ಮಾನ

ಮೈಸೂರು ಜಿಲ್ಲಾ ಜೆಡಿಎಸ್ ಎಸ್ಸಿ-ಎಸ್ಟಿ ಘಟಕದ ವತಿಯಿಂದ ಹುಣಸೂರು ಟಿಎಪಿಸಿಎಂಎಸ್ ಅಧ್ಯಕ್ಷರಿಗೆ ಸನ್ಮಾನ

ಮೈಸೂರು:ಹುಣಸೂರು ತಾಲ್ಲೂಕಿನ ನೂತನ ಟಿಎಪಿಸಿಎಂಎಸ್ ಅಧ್ಯಕ್ಷರಾಗಿ ಆಯ್ಕೆಯಾದ ಬಸವಲಿಂಗಯ್ಯ ರವರಿಗೆ ಮೈಸೂರು ಜಿಲ್ಲಾ ಜೆಡಿಎಸ್ ಎಸ್ಸಿ -ಎಸ್ಟಿ ಘಟಕದ ವತಿಯಿಂದ ಮೈಸೂರಿನ ಪತ್ರಿಕಾ ಭವನದಲ್ಲಿ ಸನ್ಮಾನ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷರಾದ ಶಿವಕುಮಾರ್ ಸ್ವಾಮಿ ರವರು ಇದೇ ಪ್ರಥಮ ಬಾರಿಗೆ 50 ವರ್ಷಗಳ ಇತಿಹಾಸದಲ್ಲಿ ಒರ್ವ ದಲಿತ ಮುಖಂಡರನ್ನು ಸಹಕಾರಿ ಕ್ಷೇತ್ರದಲ್ಲಿ ಅಧ್ಯಕ್ಷರನ್ನಾಗಿ ಮಾಡಿದ ಕೀರ್ತಿ ಸನ್ಮಾನ್ಯ ಶ್ರೀ ಜಿ.ಟಿ ದೇವೇಗೌಡರಿಗೆ ಮತ್ತು ಅವರ ಪುತ್ರ ಹುಣಸೂರಿನ ಶಾಸಕರಾದ ಜಿ. ಡಿ ಹರೀಶ್ ಗೌಡರಿಗೆ ಸಲ್ಲುತ್ತದೆ. ಸಮುದಾಯದ ನಾಯಕರನ್ನು ಗುರುತಿಸಿ ಅವಕಾಶ ಕೊಟ್ಟ ಜಿಟಿಡಿ ಕುಟುಂಬಕ್ಕೆ ಸಮುದಾಯದ ವತಿಯಿಂದ ಹೃತ್ಪೂವರ್ಕ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದರು.

ಈ ವೇಳೆ ಮೈಸೂರು ಜಿಲ್ಲಾ ಜೆಡಿಎಸ್ ಎಸ್ಸಿ ಎಸ್ಟಿ ಘಟಕದ ಅಧ್ಯಕ್ಷರಾದ ಶಿವಕುಮಾರ್ ಸ್ವಾಮಿ, ಮಾಜಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾದ ಸುಬ್ಬಯ್ಯ, ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಎಂ. ಪಿ ನಾಗರಾಜು ಮತ್ತು ಇತರೆ ಮುಖಂಡರ ಸಮುಖದಲ್ಲಿ ಸನ್ಮಾನಿಸಲಾಯಿತು.

RELATED ARTICLES
- Advertisment -
Google search engine

Most Popular