Saturday, April 5, 2025
Google search engine

Homeಸ್ಥಳೀಯಮೈಸೂರು: ಡಾ. ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ ರವರ 80ನೇ ಜಯಂತೋತ್ಸವ

ಮೈಸೂರು: ಡಾ. ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ ರವರ 80ನೇ ಜಯಂತೋತ್ಸವ

ಮೈಸೂರು: ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ವತಿಯಿಂದ ಇಂದು ಆಯೋಜಿಸಿದ್ದ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಭೈರವೈಕ್ಯ ಪರಮಪೂಜ್ಯ ಜಗದ್ಗುರುಗಳಾದ ಡಾ. ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ ರವರ 80ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ಸಿ ಎನ್ ಮಂಜೇಗೌಡ ರವರು ಪುಷ್ಪಾರ್ಚನೆ ಮಾಡಿ ಮಾತನಾಡಿ ಅನ್ನದಾಸೋಹ ಮತ್ತು ಅಕ್ಷರ ದಾಸೋಹದ ಮೂಲಕ ಎಲ್ಲಾ ವರ್ಗದ, ಸಮುದಾಯದ, ಬಡ ಜನರ ಸೇವೆಯನ್ನು ಮಾಡಿ, ಲಕ್ಷಾಂತರ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡಿದವರು ಗುರುಗಳು, ದೇಶಾದ್ಯಂತ ಸುಮಾರು 545 ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಕೋಟ್ಯಂತರ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡುತ್ತಿದ್ದಾರೆ. ಜಗತ್ತು ಕಂಡ ಮಹಾನ್ ಪುರುಷರಲ್ಲಿ ಸ್ವಾಮೀಜಿರವರು ಒಬ್ಬರು. ಸ್ವಾಮೀಜಿರವರ ಕೊಡುಗೆ ನಾಡಿಗೆ ಅಪಾರ ಎಂದರು.

ನಂತರ ರಾಜ್ಯಾಧ್ಯಕ್ಷ ಸಿಜಿ ಗಂಗಾಧರ್ ಮಾತನಾಡಿ, ಸ್ವಾಮೀಜಿಯವರು ಆದಿಚುಂಚನಗಿರಿ ಮಹಾಸಂಸ್ಥಾನ ಮಠವನ್ನು ಬಹಳ ಬೃಹತ್ ರೀತಿಯಲ್ಲಿ ಕಟ್ಟಿ, ಚಿನ್ನದ ಗರಿಯನ್ನಾಗಿ ಮಾಡಿ, ಪ್ರತಿ ನಿತ್ಯ ಅಲ್ಲಿಗೆ ಆಗಮಿಸುವ ಭಕ್ತಾದಿಗಳಿಗೆ ಕಾಲಭೈರವೇಶ್ವರ ದರ್ಶನದ ಜೊತೆಗೆ ನಿತ್ಯ ದಾಸೋಹವನ್ನು ಮಾಡುತ್ತಿದ್ದಾರೆ. ಜೊತೆಗೆ ಪ್ರತಿಯೊಂದು ಸಮುದಾಯದವರಿಗೂ, ಹಿಂದುಳಿದ ವರ್ಗದ, ದಲಿತರ ಪ್ರತಿಯೊಂದು ಸಮುದಾಯಗಳಿಗೂ ದೀಕ್ಷೆಕೊಟ್ಟು ಮಠಗಳನ್ನು ಸ್ಥಾಪಿಸಲು ಸಹಾಯ ಮಾಡಿದವರು, ರಾಮಜನ್ಮಭೂಮಿಗಾಗಿ ಹೋರಾಟ ಮಾಡಿದ ಮಹಾನ ಗುರುಗಳು ಇವರು. ಕೋಟ್ಯಂತರ ವಿದ್ಯಾರ್ಥಿಗಳಿಗೆ ಅನ್ನ ಅಕ್ಷರ ನೀಡಿದ ಇವರಿಗೆ ಕೇಂದ್ರ ಸರ್ಕಾರ ಮರಣೋತ್ತರ ಭಾರತ ರತ್ನ ಪ್ರಶಸ್ತಿ ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದರು.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಯಶಸ್ವಿ ಎಸ್ ಸೋಮಶೇಖರ್ ಅವರು ನೆರೆದಿದ್ದ ಜನಸ್ತೋಮಕ್ಕೆ ಸಿಹಿಯನ್ನು ವಿತರಣೆ ಮಾಡಿದರು.

ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ಕೆವಿ ಶ್ರೀಧರ್, ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಉಪಾಧ್ಯಕ್ಷ ಶಿವಲಿಂಗಯ್ಯ, ಮಹಿಳಾ ಅಧ್ಯಕ್ಷೆ ಲತಾ ರಂಗನಾಥ್, ವಿಜಯನಗರ ಮಂಜು, ಲಿಂಗಪ್ಪ ,ಯಶ್ವಂತ್, ಸಂಜಯ್ ಕೆ, ಸುಬ್ಬೆಗೌಡ, ಕೃಷ್ಣಪ್ಪ, ನೇಹಾ, ಪದ್ಮ, ಲಕ್ಷ್ಮೀ ಶಿವರಾಜ್, ಭಾಗ್ಯಮ್ಮ, ದರ್ಶನ್ ಗೌಡ ರವಿವಲಂಪಿಯ, ನರಸಿಂಹೇಗೌಡ, ರಾಮಕೃಷ್ಣೇಗೌಡ, ಗಿರೀಶ್ ಹೆಚ್, ತ್ಯಾಗರಾಜ್, ಪ್ರಕಾಶ್, ಪ್ರಭಾಕರ್, ಪರಿಸರ ಚಂದ್ರು, ಹನುಮಂತಯ್ಯ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular