Friday, April 11, 2025
Google search engine

Homeಸ್ಥಳೀಯಮೈಸೂರು ದಸರಾ 2024: ಈ ಬಾರಿಯೂ ಅಂಬಾರಿ ಹೊರಲಿದ್ದಾನೆ ಅಭಿಮನ್ಯು

ಮೈಸೂರು ದಸರಾ 2024: ಈ ಬಾರಿಯೂ ಅಂಬಾರಿ ಹೊರಲಿದ್ದಾನೆ ಅಭಿಮನ್ಯು

ಮೈಸೂರು: ಈ ಬಾರಿಯ ಮೈಸೂರು ದಸರಾ ಮಹೋತ್ಸವಕ್ಕೆ ಕೇವಲ ೩ ತಿಂಗಳು ಬಾಕಿ ಉಳಿದಿದ್ದು, ಸಿದ್ಧತೆ ಕೂಡ ಆರಂಭವಾಗಿದೆ. ಗಜಪಡೆ ಆಯ್ಕೆ ಪ್ರಕ್ರಿಯೆಯಲ್ಲಿ ಅರಣ್ಯ ಇಲಾಖೆ ನಿರತವಾಗಿದ್ದು, ಈ ಬಾರಿಯೂ ಅಂಬಾರಿಯನ್ನು ಅಭಿಮನ್ಯು ಹೊರಲಿದ್ದಾನೆ.

ದಸಾರಾ ಮಹೋತ್ಸವಕ್ಕಾಗಿ ಮೈಸೂರು ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಮತ್ತು ಅರಣ್ಯ ಇಲಾಖೆಯು ಸಿದ್ಧತೆ ಮಾಡಿಕೊಳ್ಳುತ್ತಿವೆ. ದಸರಾ ಮಹೋತ್ಸವದ ಕೇಂದ್ರ ಬಿಂದುವೆಂದರೆ ಅದು ಗಜಪಡೆ. ಇದೀಗ ಡಿಸಿಎಫ್ ಶರಣಬಸಪ್ಪ ನೇತೃತ್ವದಲ್ಲಿ ಗಜಪಡೆ ಆಯ್ಕೆ ಪ್ರಕ್ರಿಯೆ ಡಿಸಿಎಫ್ ಶರಣಬಸಪ್ಪ ನೇತೃತ್ವದಲ್ಲಿ ಗಜಪಡೆ ಆಯ್ಕೆ ಪ್ರಕ್ರಿಯೆ ನಡೆದಿದೆ.

ಈ ಬಾರಿ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಒಟ್ಟು ೧೮ ಆನೆಗಳು ಮೈಸೂರಿಗೆ ಆಗಮಿಸುವ ಸಾಧ್ಯತೆ ಇದೆ. ಈಗಾಗಲೇ ಅರಣ್ಯ ಇಲಾಖೆಯು ಒಟ್ಟು ೧೮ ಆನೆಗಳನ್ನು ಗುರುತಿಸಿದೆ. ಅರಣ್ಯ ಇಲಾಖೆ ೪ ಆನೆಗಳನ್ನು ಹೆಚ್ಚುವರಿಯಾಗಿ ಗುರುತಿಸಿರುವುದರಿಂದ ಕುತೂಹಲಕ್ಕೆ ಕಾರಣವಾಗಿದೆ.

ದಸರಾ ಮಹೋತ್ಸವ ಆರಂಭವಾಗುವ ೨ ತಿಂಗಳ ಮುನ್ನವೇ ಗಜಪಡೆ ಮೈಸೂರಿಗೆ ಬರಲಿದೆ. ೧೪ ಆನೆಗಳ ಪೈಕಿ ಮೊದಲ ಹಂತದಲ್ಲಿ ೯ ಆನೆಗಳು ಹಾಗೂ ೨ನೇ ಹಂತದಲ್ಲಿ ೫ ಆನೆಗಳನ್ನು ಮೈಸೂರಿಗೆ ಆಗಮಿಸುವ ಸಾಧ್ಯತೆ ಇದೆ. ಮೊದಲ ಹಂತದಲ್ಲಿ ಕ್ಯಾಪ್ಟನ್ ಅಭಿಮನ್ಯು, ಭೀಮ, ಹೊಸ ಆನೆ ಏಕಲವ್ಯ, ವರಲಕ್ಷ್ಮಿ, ಧನಂಜಯ, ಗೋಪಿ, ರೋಹಿತ, ವರಲಕ್ಷ್ಮಿ, ಕಂಜನ್ ಆನೆಗಳು ಬಂದರೆ, ೨ನೇ ಹಂತದಲ್ಲಿ ಪ್ರಶಾಂತ, ಸುಗ್ರೀವ, ಮಹೇಂದ್ರ, ಲಕ್ಷ್ಮಿ, ಹಿರಣ್ಯ ಆನೆಗಳು ಆಗಮಿಸಲಿವೆ.

RELATED ARTICLES
- Advertisment -
Google search engine

Most Popular