Saturday, April 19, 2025
Google search engine

Homeಸ್ಥಳೀಯಮೈಸೂರು ದಸರಾ ಜಂಬೂಸವಾರಿ ಮೆರವಣಿಗೆ:ಉತ್ತಮ ಮತ್ತು ಪ್ರೋತ್ಸಾಹಕ ಸ್ತಬ್ದಚಿತ್ರಗಳಿಗೆ ಬಹುಮಾನ

ಮೈಸೂರು ದಸರಾ ಜಂಬೂಸವಾರಿ ಮೆರವಣಿಗೆ:ಉತ್ತಮ ಮತ್ತು ಪ್ರೋತ್ಸಾಹಕ ಸ್ತಬ್ದಚಿತ್ರಗಳಿಗೆ ಬಹುಮಾನ

ಮೈಸೂರು: ಅಕ್ಟೋಬರ್ 24ರಂದು  ಯಶಸ್ವಿಯಾಗಿ ನಡೆದ ವಿಶ್ವ ವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿ ಮೆರವಣಿಗೆಯಲ್ಲಿ ಮೆರಗು ಹೆಚ್ಚಿಸಿದ್ಧ 49 ಸ್ತಬ್ದಚಿತ್ರಗಳ ಪೈಕಿ ಉತ್ತಮ ಮತ್ತು ಪ್ರೋತ್ಸಾಹಕ ಸ್ತಬ್ದಚಿತ್ರಗಳಿಗೆ ಬಹುಮಾನ ಘೋಷಿಸಲಾಗಿದೆ.

ನಾಡಹಬ್ಬ ದಸರಾ ಮಹೋತ್ಸವದ 2023ರ ಜಂಬೂ ಸವಾರಿ ಮೆರವಣಿಗೆಯಲ್ಲಿ ಭಾಗವಹಿಸಿ ಬಹುಮಾನ ಪಡೆದ ಸ್ತಬ್ಧಚಿತ್ರಗಳ ವಿವರ  ಹೀಗಿದೆ.

1.ಉತ್ತಮ ಸ್ತಬ್ಧ ಚಿತ್ರಗಳು (ಜಿಲ್ಲಾ ವಿಭಾಗ)

ಧಾರವಾಡ ಜಿಲ್ಲೆ, ಚಿಕ್ಕಮಗಳೂರು ಜಿಲ್ಲೆ, ಚಾಮರಾಜನಗರ ಜಿಲ್ಲೆ

2.ಪ್ರೋತ್ಸಾಹದಾಯಕ ಸ್ತಬ್ಧ ಚಿತ್ರಗಳು

ಹಾಸನ ಜಿಲ್ಲೆ, ಮಂಡ್ಯ ಜಿಲ್ಲೆ,ಶಿವಮೊಗ್ಗ ಜಿಲ್ಲೆ

3.ಇಲಾಖೆ ಹಾಗೂ ನಿಗಮಗಳ ವಿಭಾಗದಲ್ಲಿ ಉತ್ತಮ ಸ್ತಬ್ಧ ಚಿತ್ರಗಳು

ಪ್ರವಾಸೋದ್ಯಮ ಇಲಾಖೆ,ಕಾವೇರಿ ನೀರಾವರಿ ನಿಗಮ,ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ

4.ಪ್ರೋತ್ಸಾಹದಾಯಕ ಸ್ತಬ್ಧ ಚಿತ್ರ

ಕರ್ನಾಟಕ ಸಹಕಾರಿ ಹಾಗೂ ಹಾಲು ಉತ್ಪಾದಕರ ಮಹಾಮಂಡಲ ನಿ. ಬಹುಮಾನಗಳನ್ನು ಪಡೆದಿವೆ ಎಂದು ದಸರಾ ಸ್ತಬ್ದ ಚಿತ್ರಗಳ ಉಪಸಮಿತಿಯ ಉಪವಿಶೇಷಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಕ್ಟೋಬರ್ 24 ರಂದು ನಡೆದ ಮೈಸೂರು ದಸರಾ ಐತಿಹಾಸಿಕ ಜಂಬೂಸವಾರಿ ಮೆರವಣಿಗೆಯಲ್ಲಿ 31 ಜಿಲ್ಲೆಗಳು ಹಾಗೂ ವಿವಿಧ ಇಲಾಖೆಗಳಿಗೆ ಸೇರಿದ 49 ಸ್ತಬ್ದಚಿತ್ರಗಳು ಮತ್ತು ಕಲಾತಂಡಗಳು ಭಾಗವಹಿಸಿ ಜನರ ಕಣ್ಮನ ಸೆಳೆದಿದ್ದವು.

 

RELATED ARTICLES
- Advertisment -
Google search engine

Most Popular