ಮೈಸೂರು: ದಸರಾ ಸಮೀಪಿಸುತ್ತಿದ್ದಂತೆಯೇ ಮೈಸೂರು ಕಡೆ ಪ್ರವಾಸಿಗರು ಹೆಚ್ಚಾಗಿ ಬರುತ್ತಾರೆ., ಮೈಸೂರಿನ ಸ್ವಚ್ಚತೆ ಕಾಪಾಡುವುದರಲ್ಲಿ ನಗರಪಾಲಿಕೆ ಸೂಕ್ಷ್ಮವಾಗಿ ಗಮನಿಸಬೇಕಾಗುತ್ತದೆ. ಮೈಸೂರಿನಲ್ಲಿರುವ ಅರಮನೆಗೂ ಹಾಗೂ ವಸ್ತು ಪ್ರದರ್ಶನಕ್ಕೆ ಹೋಗುವ ಅಂಡರ್ ಗ್ರೌಂಡ್ ಸೇರಿದಂತೆ ಮೈಸೂರಿನಲ್ಲಿ ಇನ್ನಿತರ ಅಂಡರ್ ಗ್ರೌಂಡ್ ಗಳು ಗಬ್ಬು ನಾರುತ್ತಿದೆ.
ಲಕ್ಷಾಂತರ ಕೊಟ್ಟು ಪಾದಚಾರಿಗಳಿಗೆ ಉಪಯೋಗಕ್ಕಾಗಿ ಮಾಡಿದಂತಹ ಅಂಡರ್ ಗ್ರೌಂಡ್ ಅನೈತಿಕ ಚಟುವಟಿಕೆಗಳ ತಾಣವಾಗಿದೆ, ಇನ್ನೂ ಕೆಲವು ಅಂಡರ್ ಗ್ರೌಂಡ್ ಬೀಗ ಹಾಕಿದ್ದಾರೆ. ನಗರಪಾಲಿಕೆ ಅಧಿಕಾರಿಗಳು ಈಗಲಾದರೂ ಪಾದಚಾರಿಗಳಿಗೆ ಓಡಾಡಲು ಅಂಡರ್ ಗ್ರೌಂಡ್ ಸ್ವಚ್ಛಗೊಳಿಸಿ ಒಬ್ಬ ಸೆಕ್ಯುರಿಟಿ ಗಾರ್ಡ್ ನೇಮಿಸಿ ಪೂರ್ಣ ಪ್ರಮಾಣದಲ್ಲಿ ಆಗದೇ ಹೋದರೂ ದಸರಾ ಸಂದರ್ಭ ದಲ್ಲಾದರೂ ಸೆಕ್ಯೂರಿಟಿ ಗಾರ್ಡ್ ನೇಮಿಸಬೇಕು ಹಾಗೂ ಸ್ವಚ್ಛತೆ ಕಾಪಾಡಿ ಸ್ವಚ್ಛ ನಗರಿ ಹೆಸರು ಉಳಿಸುವ ಕೆಲಸ ಮಾಡಬೇಕು ಇಲ್ಲವಾದಲ್ಲಿ ವಿವಿಧ ಸಂಘಟನೆಗಳ ಜೊತೆ ಸೇರಿ ನಗರಪಾಲಿಕೆ ಮುಂಭಾಗ ಪ್ರತಿಭಟಿಸಬೇಕಾಗುತ್ತದೆ ಎಂದು ಸಾಮಾಜಿಕ ಹೋರಾಟಗಾರ ವಿಕ್ರಂ ಅಯ್ಯಂಗಾರ್ ಹೇಳಿದ್ದಾರೆ.