ಮೈಸೂರು: ಮುಡಾ ಹಗರಣ ಪ್ರಕರಣದಿಂದ ಸಿಎಂ ಸಿದ್ದರಾಮಯ್ಯ ಹೊರ ಬರಬೇಕು. ಸಿದ್ದರಾಮಯ್ಯ ಕುಟುಂಬಕ್ಕೆ ದೈವಬಲ ಬೇಕು. ವಿರೋಧಿಗಳು ಸರ್ವನಾಶ ಆಗಬೇಕು. ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರಿಯಬೇಕು ಮತ್ತು ಅವರ ಕುಟುಂಬಕ್ಕೆ ಒಳಿತಾಗಬೇಕು ಎಂದು ಹಾರೈಸಿ ಮೈಸೂರಿನಲ್ಲಿ ಅಭಿಮಾನಿಗಳು ಹುಣ್ಣಿಮೆ ಪೂಜೆ ನೆರವೇರಿಸಿದರು.
ಮೈಸೂರಿನ ಅಗ್ರಹಾರದ ಗಣಪತಿ ದೇವಸ್ಥಾನದಲ್ಲಿ ಪಾಲಿಕೆ ಮಾಜಿ ಸದಸ್ಯ ಲೋಕೇಶ್ ನೇತೃತ್ವದಲ್ಲಿ ವಿಶೇಷ ಪೂಜೆ ,ಅರ್ಚನೆ , ಹೋಮಹವನ ನೆರವೇರಿಸಲಾಯಿತು. ಸಿಎಂ ಸಿದ್ದರಾಮಯ್ಯ ಭಾವಚಿತ್ರ ಹಿಡಿದು ವಿಶೇಷ ಪೂಜೆ ಸಲ್ಲಿಕೆ ಮಾಡಲಾಯಿತು. ಸತ್ಯನಾರಾಯಣ ಪೂಜೆ, ಹೋಮ – ಹವನ, ಬೆಣ್ಣೆ ಅಲಂಕಾರ ಹಾಗೂ ಸಿದ್ದರಾಮಯ್ಯ, ಪಾರ್ವತಿ, ಡಾ.ಯತೀಂದ್ರ ಅವರ ಹೆಸರಿನಲ್ಲಿ ಅಭಿಮಾನಿಗಳು ಅರ್ಚನೆ ಮಾಡಿಸಿದರು.