ಮೈಸೂರು: ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗೆ ರಾಜ್ಯ ಸರ್ಕಾರ ಸಿದ್ಧತೆ ಕೈಗೊಂಡಿದ್ದು, ಕರ್ನಾಟಕ ಪಂಚಾಯತ್‌ರಾಜ್ ಸೀಮಾ ನಿರ್ಣಯ ಆಯೋಗವು ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿಗಳ ಕ್ಷೇತ್ರ ವ್ಯಾಪ್ತಿ ನಿಗದಿ ಪಡಿಸಿ ಅಧಿಸೂಚನೆ ಹೊರಡಿಸಿದ್ದು, ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಸಂಖ್ಯೆ ೪೯ ರಿಂದ ೪೬ಕ್ಕೆ ಕುಸಿತ ಕಂಡಿದೆ.
ನಂಜನಗೂಡು ತಾಲೂಕು ಹೆಚ್ಚು, ಸರಗೂರು ತಾಲೂಕು ಕಡಿಮೆ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳನ್ನು ಹೊಂದಲಿದೆ. ಸರಗೂರು ೨, ಕೆ.ಆರ್. ನಗರ ೩, ಸಾಲಿಗ್ರಾಮ ೪, ಎಚ್.ಡಿ. ಕೊಟೆ ೪, ಪಿರಿಯಾಪಟ್ಟಣ ೬, ಹುಣಸೂರು ೬, ಮೈಸೂರು ೬, ತಿ.ನರಸಿಪುರ ೬, ನಂಜನಗೂಡು ೯ ಕ್ಷೇತ್ರಗಳನ್ನು ಹೊಂದಲಿದೆ.
ಮೈಸೂರು ತಾಲೂಕಿನಲ್ಲಿ ಇಲವಾಲ, ಜಯಪುರ, ಉದ್ಬೂರು, ವರುಣ, ಸಿದ್ದಲಿಂಗಪುರ ಹಾಗೂ ಹಾರೋಹಳ್ಳಿ(ಮೆಲ್ಲಹಳ್ಳಿ), ತಿ.ನರಸೀಪುರ ತಾಲೂಕಿನಲ್ಲಿ ತುರುಗನೂರು, ಸೋಮನಾಥಪುರ, ಸೋಸಲೆ, ತಲಕಾಡು, ಮೂಗೂರು, ಗರ್ಗೇಶ್ವರಿ ಕ್ಷೇತ್ರಗಳನ್ನು ರಚಿಸಲಾಗಿದೆ. ನಂಜನಗೂಡು ತಾಲೂಕಿನಲ್ಲಿ ಹುರ, ಹುಲ್ಲಹಳ್ಳಿ, ಹೆಗ್ಗಡಹಳ್ಳಿ, ಕಳಲೆ, ಬದನವಾಳು, ದೊಡ್ಡಕೌಲಂದೆ, ತಗಡೂರು, ಹದಿನಾರು, ತಾಂಡವಪುರ, ಹುಣಸೂರು ತಾಲೂಕಿನಲ್ಲಿ ಗಾವಡಗೆರೆ, ಬಿಳಿಕೆರೆ, ಧರ್ಮಾಪುರ, ಬನ್ನಿಕುಪ್ಪೆ, ಹನಗೋಡು, ಚಿಲ್ಕುಂದ, ಕೆ.ಆರ್.ನಗರ ತಾಲೂಕಿನಲ್ಲಿ ಗಂಧನಹಳ್ಳಿ, ತಿಪ್ಪೂರು, ಹೆಬ್ಬಾಳು, ಸಾಲಿಗ್ರಾಮ ತಾಲೂಕಿನಲ್ಲಿ ಭೇರ್ಯ, ಮಿರ್ಲೆ, ಸಾಲಿಗ್ರಾಮ, ಹೊಸೂರು, ಪಿರಿಯಾಪಟ್ಟಣ ತಾಲೂಕಿನಲ್ಲಿ ಹಲಗನಹಳ್ಳಿ, ಬೆಟ್ಟದಪುರ, ರಾವಂದೂರು, ಕಂಪಲಾಪುರ, ಹುಣಸವಾಡಿ, ಕೊಪ್ಪ, ಎಚ್.ಡಿ.ಕೋಟೆ ತಾಲೂಕಿನಲ್ಲಿ ಹಂಪಾಪುರ, ಹೈರಿಗೆ, ಅಣ್ಣೂರು, ಅಂತರಸಂತೆ, ಸರಗೂರು ತಾಲೂಕಿನಲ್ಲಿ ಮುಳ್ಳೂರು, ಹಂಚೀಪುರ ಕ್ಷೇತ್ರಗಳನ್ನು ರಚಿಸಲಾಗಿದೆ.
೯ ತಾ.ಪಂ, ೧೬೦ ಕ್ಷೇತ್ರ ರಚನೆ: ಜಿಲ್ಲೆಯ ೯ ತಾಲೂಕು ಪಂಚಾಯಿತಿಗಳಲ್ಲಿ ಒಟ್ಟು ೧೬೦ ಕ್ಷೇತ್ರಗಳನ್ನು ರಚಿಸಲಾಗಿದೆ. ಸರಗೂರು ತಾ.ಪಂ.ನಲ್ಲಿ ೯, ಕೆ.ಆರ್. ನಗರದಲ್ಲಿ ೯, ಸಾಲಿಗ್ರಾಮದಲ್ಲಿ ೧೩, ಎಚ್.ಡಿ.ಕೋಟೆಯಲ್ಲಿ ೧೬, ಪಿರಿಯಾಪಟ್ಟಣದಲ್ಲಿ ೨೨, ಹುಣಸೂರಿನಲ್ಲಿ ೨೩, ಮೈಸೂರಿನಲ್ಲಿ ೨೦, ತಿ.ನರಸೀಪುರದಲ್ಲಿ ೨೦, ನಂಜನಗೂಡು ತಾ.ಪಂ.ನಲ್ಲಿ ೨೮ ಕ್ಷೇತ್ರಗಳನ್ನು ರಚಿಸಲಾಗಿದೆ.
ಮೈಸೂರು ತಾ.ಪಂ.ನಲ್ಲಿ ಗುಂಗ್ರಾಲ್ ಛತ್ರ, ಇಲವಾಲ, ಬೊಮ್ಮೇನಹಳ್ಳಿ, ದೊಡ್ಡಮಾರಗೌಡನಹಳ್ಳಿ, ಧನಗಳ್ಳಿ, ಜಯಪುರ, ಉದ್ಬೂರು, ಮಾರ್ಬಳ್ಳಿ, ದೂರ, ಸಿಂಧುವಳ್ಳಿ, ದೇವಲಾಪುರ, ಆಯರಹಳ್ಳಿ, ವರುಣ, ಚಾಮುಂಡಿಬೆಟ್ಟ, ಸಿದ್ದಲಿಂಗಪುರ, ಬೆಲವತ್ತ, ಹಾರೋಹಳ್ಳಿ (ಮೆಲ್ಲಹಳ್ಳಿ), ವರಕೋಡು, ಯಡಕೊಳ, ದುದ್ದಗೆರೆ ಕ್ಷೇತ್ರಗಳನ್ನು ರಚನೆಯಾಗಿವೆ.
ತಿ.ನರಸೀಪುರ ತಾ.ಪಂ.ನಲ್ಲಿ ಬಿಸೀಹಳ್ಳಿ, ತುರಗನೂರು, ಮೆಣಸಿಕ್ಯಾತನಹಳ್ಳಿ, ಸೋಮನಾಥಪುರ, ಹೆಗ್ಗೂರು, ಅತ್ತಹಳ್ಳಿ, ಸೋಸಲೆ, ದೊಡ್ಡೇಬಾಗಿಲು, ಚಿದರವಳ್ಳಿ, ಮುತ್ತಲವಾಡಿ (ಕೃಷ್ಣಾಪುರ), ತಲಕಾಡು, ಕಾವೇರಿಪುರ (ಹೊಳೆಸಾಲು), ಹೆಮ್ಮಿಗೆ, ಮಾಲಂಗಿ, ಮಾದಾಪುರ, ಮೂಗೂರು, ಕೇತಹಳ್ಳಿ, ಗರ್ಗೇಶ್ವರಿ, ತುಂಬಲ, ರಂಗಸಮುದ್ರ ಕ್ಷೇತ್ರಗಳು ರಚನೆಗೊಂಡಿವೆ.
ನಂಜನಗೂಡು ತಾ.ಪಂ.ನಲ್ಲಿ ಹೆಡಿಯಾಲ, ಹಾಡ್ಯ, ಹುರ, ಕುರಿಹುಂಡಿ, ಹರದನಹಳ್ಳಿ, ಹುಲ್ಲಹಳ್ಳಿ, ಹಗಿನವಾಳು, ಹೆಗ್ಗಡಹಳ್ಳಿ, ದೇಬೂರು, ದೇವಿರಮ್ಮನಹಳ್ಳಿ, ಕಳಲೆ, ಸೂರಹಳ್ಳಿ, ಕೂಡ್ಲಪುರ, ಹೊರಳವಾಡಿ, ಹೆಡತಲೆ, ನೇರಳೆ, ದೊಡ್ಡಕವಲಂದೆ, ದಾಸನೂರು, ಕಾರ್ಯ, ತಗಡೂರು, ಮಲ್ಲೂಪುರ, ನಗರ್ಲೆ, ತಾಯೂರು, ಹೊಸಕೋಟೆ, ಹದಿನಾರು, ಇಮ್ಮಾವು, ತಾಂಡವಪುರ, ಬಿದರಗೂಡು ಕ್ಷೇತ್ರಗಳು ರಚನೆ ಮಾಡಲಾಗಿದೆ.
ಹುಣಸೂರು ತಾ.ಪಂ.ನಲ್ಲಿ ಹಿರಿಕ್ಯಾತನಹಳ್ಳಿ, ಕಟ್ಟೆಮಳಲವಾಡಿ, ಗಾವಡಗೆರೆ, ಮರದೂರು, ಬೋಳನಹಳ್ಳಿ, ಹಳೇಬೀಡು, ಚಿಕ್ಕಬೀಚನಹಳ್ಳಿ, ಬಿಳಿಕೆರೆ, ಬೆಂಕಿಪುರ, ಧರ್ಮಾಪುರ, ಕರೀಮುದ್ದನಹಳ್ಳಿ, ಉಯಿಗೊಂಡನಹಳ್ಳಿ, ಉದ್ದೂರು ಕಾವಲ್, ಆಸ್ಪತ್ರೆ ಕಾವಲ್, ಬೀಜಗನಹಳ್ಳಿ, ಬನ್ನಿಕುಪ್ಪೆ, ಗೋಂವಿದನಹಳ್ಳಿ, ಹೆಗ್ಗಂದೂರು, ಹನಗೋಡು, ದೊಡ್ಡಹೊಜ್ಜೂರು, ಕಡೇಮನುಗನಹಳ್ಳಿ, ಚಿಲ್ಕುಂದ, ಮೇದೂರು ಕ್ಷೇತ್ರಗಳು ರಚನೆಯಾಗಿವೆ. ಕೆ.ಆರ್. ನಗರ ತಾ.ಪಂ.ನಲ್ಲಿ ಹೊಸಅಗ್ರಹಾರ, ಗಂಧನಹಳ್ಳಿ, ಹಂಪಾಪುರ, ತಿಪ್ಪೂರು, ಲಾಳಂದೇವನಹಳ್ಳಿ, ಡೋರ್ನಹಳ್ಳಿ, ಹೆಬ್ಬಾಳು, ಕೆಸ್ತೂರು, ಬ್ಯಾಡರಹಳ್ಳಿ ಕ್ಷೇತ್ರಗಳು ರಚಿಸಲಾಗಿದೆ. ಸಾಲಿಗ್ರಾಮ ತಾ.ಪಂ.ನಲ್ಲಿ ಹರದನಹಳ್ಳಿ, ಮೂಂಡೂರು, ಮಿರ್ಲೆ, ತಂದ್ರೇ, ಮೇಲೂರು, ಭೇರ್ಯ, ಸಾಲಿಗ್ರಾಮ, ಲಕ್ಷ್ಮೀಪುರ, ಹನಸೋಗೆ, ಚನ್ನಂಗೆರೆ, ಮಾಯಿಗೌಡನಹಳ್ಳಿ, ಹಳಿಯೂರು, ಕುಪ್ಪೆ ಕ್ಷೇತ್ರ ರಚನೆಗೊಂಡಿವೆ.
ಪಿರಿಯಾಪಟ್ಟಣ ತಾ.ಪಂ.ನಲ್ಲಿ ಕಣಗಾಲು, ಚಪ್ಪರದಹಳ್ಳಿ, ಹಲಗನಹಳ್ಳಿ, ಚಿಕ್ಕನೇರಳೆ, ಬೆಟ್ಟದಪುರ, ಕಿತ್ತೂರು, ಅತ್ತಿಗೋಡು, ಹೊನ್ನೇನಹಳ್ಳಿ, ರಾವಂದೂರು, ಮಾಕೋಡು, ಬೆಟ್ಟದತುಂಗ, ಹಿಟ್ನೇಹೆಬ್ಬಾಗಿಲು, ಕಂಪಲಾಪುರ, ದೊಡ್ಡಬ್ಯಾಲಾಳು, ಪಂಚವಳ್ಳಿ, ಹುಣಸವಾಡಿ, ಕೋಮಲಾಪುರ, ಹಬಟೂರು, ಭುವನಹಳ್ಳಿ, ಬೈಲುಕುಪ್ಪೆ, ದೊಡ್ಡಹರವೆ, ಚನ್ನಕಲ್ಕಾವಲು ಕ್ಷೇತ್ರಗಳನ್ನು ರಚಿಸಲಾಗಿದೆ.
ಎಚ್.ಡಿ. ಕೋಟೆ ತಾ.ಪಂ.ನಲ್ಲಿ ಆಲನಹಳ್ಳಿ, ಕ್ಯಾತನಹಳ್ಳಿ, ಹೊಮ್ಮರಗಳ್ಳಿ, ಕೆಂಚಮಳ್ಳಿ, ಚಿಕ್ಕರೆಯೂರು, ಹೈರಿಗೆ, ಹೆಬ್ಬಲಗುಪ್ಪೆ, ತುಂಬಸೋಗೆ, ಪಡುಕೋಟೆ ಕಾವಲ್, ಅಣ್ಣೂರು, ಬೂದನೂರು, ಹಿರೇಹಳ್ಳಿ, ಅಂತರಸಂತೆ, ಮಂಚೇಗೌಡನಹಳ್ಳಿ, ಎನ್.ಬೆಳ್ತೂರು, ಕೆಂಚನಹಳ್ಳಿ ಕ್ಷೇತ್ರಗಳು ರಚನೆಗೊಂಡಿವೆ. ಸರಗೂರು ತಾ.ಪಂ.ನಲ್ಲಿ ಕೆ.ಬೆಳ್ತೂರು, ಲಂಕೆ, ಮುಳ್ಳೂರು, ಹಾದನೂರು, ಕೊತ್ತೇಗಾಲ, ಹಂಚೀಪುರ, ಸಾಗರೆ, ಕಿತ್ತೂರು (ತೆರಣಿಮಂಟಿ), ಬಿ.ಮಟಕೆರೆ ಕ್ಷೇತ್ರ ರಚಿಸಲಾಗಿದೆ.