Saturday, June 20, 2026
Google search engine

Homeಸ್ಥಳೀಯದಟ್ಟಗಳ್ಳಿ ದುರಂತ ಬಳಿಕ ಮೈಸೂರು ಹೋಟೆಲ್‌ಗಳ ಮೇಲೆ ದಾಳಿ : ಲೈಸೆನ್ಸ್ ಇಲ್ಲದ 9 ಹೋಟೆಲ್‌ಗಳಿಗೆ...

ದಟ್ಟಗಳ್ಳಿ ದುರಂತ ಬಳಿಕ ಮೈಸೂರು ಹೋಟೆಲ್‌ಗಳ ಮೇಲೆ ದಾಳಿ : ಲೈಸೆನ್ಸ್ ಇಲ್ಲದ 9 ಹೋಟೆಲ್‌ಗಳಿಗೆ ಬೀಗ ಜಡಿದ ಅಧಿಕಾರಿಗಳು

ಮೈಸೂರು :  ದಟ್ಟಗಳ್ಳಿಯ ಪಬ್ ನಲ್ಲಿ ಅಗ್ನಿ ಅವಘಡ ಘಟನೆ ಸಂಭವಿಸಿದ ಬಳಿಕ ಎಚ್ಚೆತ್ತುಕೊಂಡ ಮೈಸೂರು ಅಧಿಕಾರಿಗಳು ಇದೀಗ ನಗರದ ರೆಸ್ಟೋರೆಂಟ್, ಡಾಬಾ, ಮಿಲಿಟಿರಿ ಹೋಟೆಲ್ ಗಳ ಮೇಲೆ ದಾಳಿ ನಡೆಸಿ ಪರಿಶೀಲಿಸಿದ್ದಾರೆ.

ನಗರಪಾಲಿಕೆ, ಅಬಕಾರಿ ಇಲಾಖೆ, ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದು ಟ್ರೇಡ್ ಲೈಸನ್ಸ್ ಪಡೆಯದ 9 ಹೋಟೆಲ್ ಗಳನ್ನ ಬಂದ್ ಮಾಡಿದ್ದಾರೆ. ಹಾಗೆಯೇ 13 ರೆಸ್ಟೋರೆಂಟ್ ಗಳ ವಿರುದ್ಧ ಕೇಸ್ ದಾಖಲಿಸಿದ್ದಾರೆ.

ಈ ನಡುವೆ ರಸ್ತೆಯಲ್ಲಿ ಕುಳಿತು ಮದ್ಯ ಸೇವಿಸುತ್ತಿದ್ದ 7 ಮಂದಿ ವಿರುದ್ಧ ಮೈಸೂರು ಪೊಲೀಸರು ಹಾಗು ಅಬಕಾರಿ ಇಲಾಖೆ ಅಧಿಕಾರಿಗಳು ಕೇಸ್ ಜಡಿದಿದ್ದಾರೆ.

ಮೈಸೂರಿನ ದಟ್ಟಗಳ್ಳಿ ರಿಂಗ್ ರಸ್ತೆಯಲ್ಲಿರುವ ಫಾಕ್ಸ್ ಡೆಕ್ ಲಿಕ್ಕರ್‌ ಎಂಬ ಪಬ್​ ನಲ್ಲಿ ಇತ್ತೀಚೆಗೆ ಅಗ್ನಿ ಅವಘಡ ಸಂಭವಿಸಿ ಇಬ್ಬರು ಸಜೀವದಹನವಾಗಿದ್ದರು 7 ಮಂದಿ ಗಂಭೀರ ಗಾಯಗೊಂಡಿದ್ದರು.

RELATED ARTICLES
- Advertisment -
Google search engine

Most Popular