Friday, April 11, 2025
Google search engine

Homeಅಪರಾಧಮೈಸೂರು: ಮದುವೆ ಆಗುವಂತೆ ಇನ್ಫೋಸಿಸ್ ಉದ್ಯೋಗಿಗೆ ಕಾಟ; ಯುವಕನ ವಿರುದ್ದ FIR ದಾಖಲು

ಮೈಸೂರು: ಮದುವೆ ಆಗುವಂತೆ ಇನ್ಫೋಸಿಸ್ ಉದ್ಯೋಗಿಗೆ ಕಾಟ; ಯುವಕನ ವಿರುದ್ದ FIR ದಾಖಲು

ಮೈಸೂರು: ಇನ್ಫೋಸಿಸ್ ಉದ್ಯೋಗಿಗೆ ಮದುವೆಯಾಗುವಂತೆ ಯುವಕನೊಬ್ಬ ಕಾಟ ಕೊಟ್ಟರುವ ಘಟನೆ ಮೈಸೂರಿನ ಸುಭಾಷ್ ನಗರದಲ್ಲಿ ನಡೆದಿದೆ.

ಮೇಟಗಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಬೆಂಗಳೂರಿನ ಕೆಂಗೇರಿಯ ಸುಂಕಲ್ ಪಾಳ್ಯ ನಿವಾಸಿ ಮಧುನಂದನ್ ವಿರುದ್ದ ಇನ್ಫೋಸಿಸ್ ಉದ್ಯೋಗಿ ಪ್ರಕರಣ ದಾಖಲಿಸಿದ್ದಾರೆ. ಕಿರುಕುಳ ನೀಡಿ ಹಲ್ಲೆ ನಡೆಸಿದ ಆರೋಪದ ಮೇಲೆ ಇನ್ಫೋಸಿಸ್ ಉದ್ಯೋಗಿ ದೂರು ನೀಡಿದ್ದು ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ . ಈ ಸಂಬಂಧ ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.

ಘಟನೆ ಹಿನ್ನೆಲೆ

ಜೂನ್ ತಿಂಗಳಿನಲ್ಲಿ ಇನ್ಫೋಸಿಸ್ ಉದ್ಯೋಗಿ ಯುವತಿ ಹಾಗೂ ಮಧುನಂದನ್ ನಡುವೆ ಮದುವೆಗೆ ಮಾತುಕತೆ ನಡೆದಿತ್ತು. ಬಳಿಕ ದಿನ ಕಳೆದಂತೆ ಮಧುನಂದನ್ ತಾನು ಮದುವೆಯಾಗುವ ಯುವತಿ ಮೇಲೆ ಅನಗತ್ಯವಾಗಿ ಸಂಶಯ ಪಡುವುದಕ್ಕೆ ಶುರು ಮಾಡಿದ್ದು, ಇದರಿಂದ ಮನನೊಂದ ಯುವತಿ ತನ್ನ ಮನೆಯವರೊಂದಿಗೆ ಚರ್ಚಿಸಿ ಮದುವೆ ರದ್ದು ಮಾಡಿಕೊಂಡಿದ್ದರು.

ಇದರಿಂದ ಕೋಪಗೊಂಡ ಮಧುನಂದನ್ ತನ್ನ ಕುಟುಂಬಸ್ಥರ ಜೊತೆ ಯುವತಿ ಮನೆಗೆ ಪ್ರವೇಶಿಸಿ ಮದುವೆ ಆಗುವಂತೆ ಒತ್ತಾಯಿಸಿದ್ದಾನೆ. ಆದರೆ ಮದುವೆಗೆ ಯುವತಿ ನಿರಾಕರಿಸಿದಾಗ ಯುವತಿ ಮೇಲೆ ಮೇಲೆ ಹಲ್ಲೆ ನಡೆಸಿದ್ದಾನೆ. ಅಡ್ಡ ಬಂದ ಆಕೆಯ ತಂಗಿ ಮೇಲೂ ಹಲ್ಲೆ ನಡೆಸಿ ರಂಪಾಟ ಮಾಡಿದ್ದಾನೆ. ನನ್ನನ್ನ ಮದುವೆ ಆಗದಿದ್ದರೆ ಯಾರು ಮದುವೆ ಆಗದಂತೆ ಮಾಡುವುದಾಗಿ ಕೊಲೆ ಬೆದರಿಕೆ ಹಾಕಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.

ಮಧುನಂದನ್ ರಿಂದ ಹಲ್ಲೆಗೊಳಗಾದ ಯುವತಿ ಕುಟುಂಬಸ್ಥರು ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ಮಧುನಂದನ್ ವಿರುದ್ದ ಕ್ರಮ ಕೈಗೊಳ್ಳಲು ಮನವಿ ಮಾಡಿದ್ದಾರೆ.

RELATED ARTICLES
- Advertisment -
Google search engine

Most Popular