ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಾದ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಅವರಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ.
ನವದೆಹಲಿಯಲ್ಲಿ ನಡೆದ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಕೊನೆಗೂ ಬಿಡುಗಡೆಗೊಳಿಸಿದ್ದು, ಕರ್ನಾಟಕದ ೧೭, ಅರುಣಾಚಲ ಪ್ರದೇಶದ ೨, ಗುಜರಾತಿನ ೧೧, ಮಹಾರಾಷ್ಟ್ರದ ೭, ರಾಜಸ್ಥಾನದ ೬, ತೆಲಂಗಾಣದ ೫, ಪಶ್ಚಿಮ ಬಂಗಾಳದ ೮, ಪುದುಚೇರಿಯ ೧ ಕ್ಷೇತ್ರಗಳಿಗೆ ಸೇರಿ ಒಟ್ಟು ೫೭ ಅಭ್ಯರ್ಥಿಗಳ ಹೆಸರು ಪ್ರಕಟಸಲಾಗಿದೆ.
ಕರ್ನಾಟಕದ ದಕ್ಷಿಣ ಕನ್ನಡಕ್ಕೆ ಪದ್ಮರಾಜ್, ಉಡುಪಿ – ಚಿಕ್ಕಮಗಳೂರು ಕ್ಷೇತ್ರಕ್ಕೆ ಜಯಪ್ರಕಾಶ್ ಹೆಗ್ಡೆ, ಮೈಸೂರು-ಕೊಡಗಿಗೆ ಎಂ.ಲಕ್ಷ್ಮಣ್ ಹಾಗೂ ಕಲಬುರಗಿಯಲ್ಲಿ ರಾಧಾ ಕೃಷ್ಣ ದೊಡ್ಮನಿ ಸೇರಿದಂತೆ ರಾಜ್ಯದ ೧೭ ಮಂದಿಗೆ ಟಿಕೆಟ್ ಘೋಷಿಸಿದೆ. ಆದರೇ ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಯಾರಿಗೆ ಟಿಕೆಟ್ ನೀಡಲಾಗುತ್ತದೆ ಇನ್ನೂ ನಿರ್ಧಾರವಾಗಿಲ್ಲ. ಮೂಲಗಳ ಪ್ರಕಾರ ಸುನೀಲ್ ಬೋಸ್ ಅವರಿಗೆ
ಟಿಕೆಟ್ ದಕ್ಕುವ ಸಾಧ್ಯತೆ ಹೆಚ್ಚಾಗಿದೆ.
ಲೋಕಸಭಾ ಚುನಾವಣೆ ಸಂಬಂಧ ಎಐಸಿಸಿ ಕಚೇರಿಯಲ್ಲಿ ನಡೆದ ಕಾಂಗ್ರೆಸ್ ಚುನಾವಣೆ ಸಮಿತಿ ಸಭೆಯಲ್ಲಿ ರಾಜ್ಯದ ಬಹುತೇಕ ಎಲ್ಲಾ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರುಗಳನ್ನು ಅಂತಿಮಗೊಳಿಸಲಾಗಿತ್ತು. ಈ ವರದಿ ಬಹಿರಂಗವಾಗಿತ್ತಾದರೂ ಕಾರಣಾಂತದಿಂದ ಕಾಂಗ್ರೆಸ್ ಪಕ್ಷದ ಅಧಿಕೃತ ಪ್ರಕಟಣೆ ಹೊರಬಂದಿರಲಿಲ್ಲ.
ರಾಜ್ಯದ ಅಭ್ಯರ್ಥಿಗಳ ಪಟ್ಟಿ ಈ ಕೆಳಗಿನಂತಿವೆ :
ಬೆಂಗಳೂರು ಉತ್ತರ : ಪ್ರೊ. ರಾಜೀವ್ ಗೌಡ
ಉಡುಪಿ-ಚಿಕ್ಕಮಗಳೂರು : ಜಯಪ್ರಕಾಶ್ ಹೆಗ್ಡೆ
ಕೊಪ್ಪಳ : ರಾಜಶೇಖರ್ ಹಿಟ್ನಾಳ್
ಉತ್ತರ ಕನ್ನಡ : ಅಂಜಲಿ ನಿಂಬಾಳ್ಕರ್
ಬೆಂಗಳೂರು ಕೇಂದ್ರ : ಮನ್ಸೂರ್ ಖಾನ್
ಬೆಂಗಳೂರು ದಕ್ಷಿಣ : ಸೌಮ್ಯ ರೆಡ್ಡಿ
ಚಿತ್ರದುರ್ಗ : ಚಂದ್ರಪ್ಪ
ಬೆಳಗಾವಿ : ಮೃಣಾಳ್ ಹೆಬ್ಬಾಳ್ಕರ್
ಬಾಗಲಕೋಟೆ : ಸಂಯುಕ್ತಾ ಪಾಟೀಲ್
ಚಿಕ್ಕೋಡಿ : ಪ್ರಿಯಾಂಕಾ ಜಾರಕಿಹೊಳಿ
ಹುಬ್ಬಳ್ಳಿ-ಧಾರವಾಡ : ವಿನೋದ್ ಅಸೂಟಿ
ದಾವಣಗೆರೆ : ಪ್ರಭಾ ಮಲ್ಲಿಕಾರ್ಜುನ್
ಕಲಬುರಗಿ : ರಾಧಾಕೃಷ್ಣ ದೊಡ್ಮನಿ
ದಕ್ಷಿಣ ಕನ್ನಡ : ಪದ್ಮರಾಜ್
ಬೀದರ್ : ಸಾಗರ್ ಖಂಡ್ರೆ
ರಾಯಚೂರು : ಕುಮಾರ್ ನಾಯ್ಕ್
ಮೈಸೂರು-ಕೊಡಗು : ಎಂ.ಲಕ್ಷ್ಮಣ್