ಮೈಸೂರು : ಕರ್ನಾಟಕ ಸರ್ಕಾರದ ಮಹತ್ವದ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಗೆ ರಾಜ್ಯಾದ್ಯಂತ ಚಾಲನೆ ದೊರೆಯಲಿದೆ. ಮೈಸೂರಿನಲ್ಲಿ ಯೋಜನೆಯ ಉದ್ಘಾಟನೆಗೆ ಬೃಹತ್ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮದ ಬ್ಯೂಸಿ ನಡುವೆಯೂ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರ, ಎಂಎಲ್‌ಸಿ ಚನ್ನರಾಜ್ ಹಟ್ಟಿಹೊಳಿ ಅವರಿಗೆ ರಾಕಿ ಕಟ್ಟಿದರು.

ಕಾರ್ಯಕ್ರಮದ ತಯಾರಿಯಲ್ಲಿ ಬ್ಯೂಸಿಯಾಗಿದ್ದರೂ ಕೂಡ ಬುಧವಾರ ರಕ್ಷಾ ಬಂಧನ ಹಿನ್ನೆಲೆ ಕಾರ್ಯಕ್ರಮದ ವೇದಿಕೆಯ ಹಿಂಭಾಗದಲ್ಲಿರುವ ವಿಶ್ರಾಂತಿ ಕೊಠಡಿಯಲ್ಲಿ ಸಹೋದರ, ಎಂಎಲ್ ಸಿ ಚನ್ನರಾಜ್ ಹಟ್ಟಿಹೊಳಿ ಅವರಿಗೆ ರಾಕಿ ಕಟ್ಟಿದರು. ಬಳಿಕ ಸಹೋದರ, ಎಂಎಲ್ ಸಿ ಚನ್ನರಾಜ್ ಹಟ್ಟಿಹೊಳಿ ಅವರು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಸಿಹಿ ತಿನ್ನಿಸಿದರು.
ಹಾಗೇ ಮೈಸೂರು ಡಿಸಿಪಿ ಮುತ್ತುರಾಜ್ , ಆಪ್ತ ಉಮೇಶ್ ರಾಚಣ್ಣವರ್ ಮತ್ತು ಹೆಬ್ಬಾಳ್ಕರ್ ಆಪ್ತ ಸಿದ್ದನಗೌಡ ಪಾಟೀಲ್ ಅವರಿಗೂ ರಾಕಿ ಕಟ್ಟಿದರು.

